Friday, April 26, 2024

Latest Posts

ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸುವ ವ್ಯಕ್ತಿ ನಾನು: ಶಾಸಕ ಹೆಚ್.ಕೆ.ಸುರೇಶ್

- Advertisement -

Hassan News: ಬೇಲೂರು: ಕೇವಲ ಆರೋಪ ಪ್ರತ್ಯಾರೋಪ ಮಾಡಿ ಕಾಲಹರಣ ಮಾಡುವ ರಾಜಕಾರಣಿ ಅಲ್ಲ, ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸುವ ವ್ಯಕ್ತಿ ನಾನು ಎಂದು ಶಾಸಕ ಹೆಚ್ ಕೆ ಸುರೇಶ್ ಹೇಳಿದರು.

ಶ್ರೀ ಚೆನ್ನಕೇಶವ ದೇವಸ್ಥಾನದ ದಾಸೋಹ ಭವನದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘ, ನಿವೃತ್ತ ಯೋಧರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿದ ಅವರು ಚುನಾವಣೆ ಮೊದಲು ಒಂದು ರೀತಿಯ ಮಾತು, ಚುನಾಯಿತನಾದ ಮೇಲೆ ಬೇರೆ ರೀತಿ ವರ್ಥಿಸುವ ವ್ಯಕ್ತಿ ನಾನಲ್ಲ. ತಾಲೂಕಿಗೆ ಸೇವಕನನ್ನಾಗಿ ಆಯ್ಕೆ ಮಾಡಿದ್ದೀರಾ ಮೊದಲು ಕೆಲಸ ನನ್ನ 5 ವರ್ಷದ ಆವಧಿಯಲ್ಲಿ ತಾಲೂಕಿನಲ್ಲಿ ಭ್ರಷ್ಟಾಚಾರ ಮಾಡಿದ್ದು ಕಂಡುಬಂದರೆ ಆ ಕೂಡಲೇ ತಕ್ಷಣ ನಾನು ರಾಜಕೀಯ ಜೀವನಕ್ಕೆ ವಿದಾಯ ಹೇಳುತ್ತೇನೆ.

ತಾಲ್ಲೂಕ್ಕಿನ ಅಭಿವಿದ್ಧಿಗಾಗಿ ನನ್ನ ಜೀವವನ್ನೇ ಪಣವಾಗಿ ಇಡುತ್ತೇನೆ. ನಾನು ಲಾಟರಿ ಯಂತೆ ಗೆದ್ದು ಬಂದ ಶಾಸಕನಲ್ಲ ಸೋತರು ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಸಾಕಷ್ಟು ಕೆಲಸಗಳನ್ನು ಮಾಡಿದ್ದರ ಪರಿಣಾಮಕ್ಕೆ ಮತದಾರ ಪ್ರಭುಗಳು ನನಗೆ ಒಮ್ಮೆ ಅವಕಾಶ ನೀಡಿದ್ದಾರೆ, ಕೇವಲ ಆರೋಪ ಪ್ರತ್ಯಾರೋಪ ಮಾಡಿ ರಾಜಕೀಯ ಮಾಡಲು ಬಂದವನಲ್ಲ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಉಪಯೋಗಗಳನ್ನು ಅರ್ಹ ಪಲಾನುಭವಿಗಳಿಗೆ ನೀಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ, ಲಂಚಮುಕ್ತ ತಾಲ್ಲೂಕು ಮಾಡುವುದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ ಜಯಣ್ಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಬೇಲೂರು ತಾಲ್ಲೂಕು ಅತೀ ಹಿಂದುಳಿದ ಕ್ಷೇತ್ರವಾಗಿದ್ದು ಇಲ್ಲಿ ಹತ್ತಾರು ಸಮಸ್ಯೆಗಳಿದ್ದು ಅಲ್ಲದೆ ಬಹು ಮುಖ್ಯವಾಗಿ ಮುಖ್ಯರಸ್ತೆ ಅಗಲೀಕರಣ, ಉದ್ಯಾನವನ, ರಸ್ತೆ, ಚರಂಡಿ, ಬೆಳಕು. ಶುದ್ಧ ಕುಡಿಯುವ ನೀರು. ಕೊಡುವ ಕೆಲಸ ಮೊದಲು ಮಾಡಬೇಕಿದೆ ಅಲ್ಲದೆ ರಾಜ್ಯದ 224 ಕ್ಷೇತ್ರಗಳಲ್ಲಿ ಬೇಲೂರು ಅತ್ಯಂತ ಹಿಂದುಳಿದಿದ್ದು ಅದನ್ನು ಮಾದರಿ ತಾಲ್ಲೂಕ್ಕನ್ನು ಮಾಡಲು ಶಾಸಕರು ದಿಟ್ಟ ಹೆಜ್ಜೆ ಇಡಬೇಕೆಂದರು,

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ ನಿವೃತ್ತ ನೌಕರರಿಗೆ ಸ್ವಂತ ಕಟ್ಟಡವಿಲ್ಲದೆ ಬೇರೆ ಕಟ್ಟಡದಲ್ಲಿ ನಾವುಗಳು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಅಲ್ಲದೆ ಬೇಲೂರಿಗೆ ರಂಗಮಂದಿರ ಅವಶ್ಯಕತೆ ಇದ್ದು ವಾಚನಾಲಯ ತಾಲ್ಲೂಕ್ಕಿನಲ್ಲಿ ಕೊರತೆ ಎದ್ದು ಕಾಣುತ್ತಿದೆ. ಪಟ್ಟಣದಲ್ಲಿ ಉತ್ತಮ ಉದ್ಯಾನವನ ಇಲ್ಲದೆ ವಯಸ್ಕರು, ಯುವಕರು ವಾಕಿಂಗ್ ಮಾಡಲು, ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಇದನೆಲ್ಲ ಶಾಸಕರು ತಮ್ಮ ಆವಧಿಯಲ್ಲಿ ನೆರವೇರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಮಾಜಿ ಯೋಧರ ಸಂಘದ ಅಧ್ಯಕ್ಷ ನಾಗಭೂಷಣ್, ಕ ಸಾ ಪಾ ಅಧ್ಯಕ್ಷ ರಾಜೇಗೌಡ, ಹಲ್ಮಿಡಿ ಅಭಿರ್ವದ್ದಿ ಸಮಿತಿ ಅಧ್ಯಕ್ಷ ಚನ್ನೇಗೌಡ, ನೌಕರ ಸಂಘದ ಕಾರ್ಯದರ್ಶಿ ಸೌಭಾಗ್ಯ, ಖಜಾಂಚಿ ಪದ್ಮೇಗೌಡ, ಯೋಧರಾದ ಚಂದ್ರಪ್ಪ, ಯಶೋದಾರ ಕುಮಾರ್ ಇತರರು ಇದ್ದರು

ನಾಗರಾಜ್, ಕರ್ನಾಟಕ ಟಿವಿ ಹಾಸನ

ಕೊಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ ಸಿಎಂ‌ ಆದೇಶಕ್ಕೆ ಸ್ಪಂದಿಸಿದ ಸಚಿವ ಲಾಡ್

ಸಿಎಂ ಸಿದ್ದರಾಮಯ್ಯ ಘೋಷಿಸಿದ 5 ಗ್ಯಾರಂಟಿಗಳು ಯಾವುದು..? ಅದರ ನಿಯಮಗಳೇನು..?

ಮಧ್ಯವರ್ತಿ ಹಾವಳಿ ತಡೆಗೆ ಕ್ರಮ: ಸಚಿವ‌ ಬಿ.ನಾಗೇಂದ್ರ

- Advertisement -

Latest Posts

Don't Miss