Sunday, April 13, 2025

Latest Posts

ಕುಮಾರಸ್ವಾಮಿನೇ ಇರ್ತಾರೋ ಇಲ್ವೋ ಗೊತ್ತಿಲ್ಲಾ: ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವರು

- Advertisement -

Political News: ಇನ್ನು ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಇನ್ನು ಒಂದು ವರ್ಷದಲ್ಲಿ ಕುಮಾರಸ್ವಾಮಿನೇ ಇರ್ತಾರೋ, ಇಲ್ವೋ ಗೊತ್ತಿಲ್ಲ. ಸುಮ್ಮನೆ ಇಂಥ ಗ್ಯಾರಂಟಿಗಳನ್ನೆಲ್ಲ ಯಾಕೆ ಕೊಡ್ಬೇಕು..? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಅಧಿಕಾರ ನಡೆಸುತ್ತಿದ್ದೇವೆ. ನಮ್ಮ ಸರ್ಕಾರಕ್ಕೆ ಜನ ಪೂರ್ತಿ ಬಹುಮತ ಕೊಟ್ಟಿದ್ದಾರೆ. ಅಂಥಹುದರಲ್ಲಿ ಕುಮಾರಸ್ವಾಮಿ ಅವರು ಯಾಕೆ ಇಂಥ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಕುಮಾರಸ್ವಾಮಿಯವರು ಒಳ್ಳೆಯ ಕೆಲಸಗಳನ್ನು ಮಾಡಲಿ, ನಾವು ಇಲ್ಲಾ ಅಂತಾ ಹೇಳುವುದಿಲ್ಲ. ಆದರೆ ಯಾರು ಇರುತ್ತಾರೆ, ಯಾರು ಇರುವುದಿಲ್ಲ. ಯಾವ ಪಕ್ಷ ಇರುತ್ತದೆ, ಯಾವ ಪಕ್ಷ ಇರುವುದಿಲ್ಲವೆಂದು ಜನ ತೀರ್ಮಾನ ಮಾಡ್ತಾರೆ ಎಂದು ಗುಂಡೂರಾವ್ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

- Advertisement -

Latest Posts

Don't Miss