Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡಕ್ಕೆ ಬೇರೆ ಕೆಲಸದ ಮೇಲೆ ಸಾಕಷ್ಟು ಸಾರಿ ಬಂದಿದ್ದೇನೆ. ಮೊದಲು ಹಾವೇರಿ ಎಸ್.ಪಿ ಆಗಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಬಹಳ ಉತ್ಸಾಹದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ, ಉತ್ತಮ ಸೇವೆ ನೀಡುತ್ತೇನೆಂದು ನೂತನ ಪೊಲೀಸ್ ಕಮೀಷನರ್ ಆದ ಎನ್.ಶಶಿಕುಮಾರ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ ದಿನದಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ. ಒಳ್ಳೆಯ ಸಾಮಾಜಿಕ ಕಳಕಳ ಇಟ್ಟುಕೊಂಡು ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರುವಂತ ಕೆಲಸ ಮಾಡುತ್ತೇನೆಂದು. ಸಾರ್ವಜನಿಕರು ಕೂಡ ಸ್ಪಂದಿಸಬೇಕು. ಹುಬ್ಬಳ್ಳಿ ಧಾರವಾಡಲ್ಲಿ ಏನೆಲ್ಲ ಆಗುತ್ತಿದ್ದವು ಎಂಬುದನ್ನು ನಾನು ಗಮನಿಸುತ್ತ ಬಂದಿದ್ದೇ, ಹುಬ್ಬಳ್ಳಿ ಧಾರವಾಡ ಜನತೆಗೆ ಉತ್ತಮವಾದ ಸೇವೆ ಮಾಡುತ್ತೇನೆ ಎಂದರು.




