Saturday, July 27, 2024

Latest Posts

I.N.D.I.A. ಒಕ್ಕೂಟದವರಿಗೆ ಸ್ಥಿರ ಸರ್ಕಾರ ಕೊಡ್ತಿವಿ ಅಂತ ಮನೋಭಾವ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ

- Advertisement -

Hassan News: ಹಾಸನ: ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.

I.N.D.I.A. ದಿಂದ ಮಮತಾ ಬ್ಯಾನರ್ಜಿ ದೂರ ವಿಚಾರದ ಬಗ್ಗೆ ಮಾತನಾಡಿದ ದೊಡ್ಡಗೌಡರು,  ಆಪ್, ಮಮತಾ ಬ್ಯಾನರ್ಜಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಆಗುತ್ತಾ.? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೊಂದಾಣಿಕೆ ಆಗುತ್ತಾ..? ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಂದು ನಾಯಕತ್ವಕ್ಕೆ ಬೆಂಬಲ ಕೊಡಬೇಕಿದೆ. ಸ್ಥಿರ ಸರ್ಕಾರ ಕೊಡ್ತಿವಿ ಅಂತ ಮನೋಭಾವ ಇಲ್ಲ. ಆಶ್ಚರ್ಯಕರವಾದ ಬೆಳವಣಿಗೆ ಆದರೆ ನನಗೆ ಸಂತೋಷ ಎಂದು ದೇವೇಗೌಡರು ಹೇಳಿದ್ದಾರೆ.

ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆಗೆ ತಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು,  ಮನ್‌ಮೋಹನ್ ಸಿಂಗ್ 35 ವರ್ಷ ಲೋಕಸಭಾ ಮೆಂಬರ್ ಆಗಿದ್ರು. ಬಾಂಗ್ಲಾದೇಶದವರು ಅಕ್ರಮವಾಗಿ ನುಸುಳಿ ಹನ್ನೆರಡು, ಹದಿಮೂರು ಜಿಲ್ಲೆಗಳನ್ನು ಅಕ್ರಮಿಸಿಕೊಂಡಿದ್ದಾರೆ. ಅದು ದಿಸ್ಪೂಟ‌್‌ನಲ್ಲಿದೆ, ಇನ್ನೂ ತೀರ್ಮಾನ ಆಗಿಲ್ಲ. ಇವರು ಅಲ್ಲಿ ಹೋದಾಗ ಸರ್ಕಾರ ತಡೆದಿದೆ. ಗೊತ್ತಿದ್ದು, ಗೊತ್ತಿದ್ದು ಇವರು ಏಕೆ ಪ್ರವೇಶ ಮಾಡಬೇಕಿತ್ತು..? ಅದು ಟೆನ್‌ಷನ್ ಏರಿಯಾ. ಮನ್‌ಮೋಹನ್ ಸಿಂಗ್ ನಾಮಿನೇಷನ್ ಹಾಕಿ ಬಂದ್ರು ಅಷ್ಟೇ ಎಂದು ಹೇಳಿದ್ದಾರೆ.

ರಾಮನ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ವಿಚಾರದ ಬಗ್ಗೆ ದೇವೇಗೌಡರು ಮಾತನಾಡಿದ್ದು, ರಾಮನ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ. ಗೌರವಾನ್ವಿತ ರಾಜಣ್ಣ ಅವರು ಗಾಂಧಿ ರಾಮನ ಪೂಜೆ ಮಾಡ್ದೆ ಅಂತಾರೆ. ಅವರ ಊರಿನ ದೇವಸ್ಥಾನದಲ್ಲಿ ಹೋಮ, ಹವನ ಮಾಡಿದ್ರು. ಇನ್ನೊಬ್ಬರು ಸಿದ್ದರಾಮಯ್ಯನೇ ರಾಮ ಅಂತಾರೆ. ಒಬ್ಬ ರಾಮನ ಬಗ್ಗೆ ಅನೇಕ ಕಡೆ ದೇವಸ್ಥಾನ ಕಟ್ಟಿರಬಹುದು. ಎಲ್ಲೇ, ಎಷ್ಟೇ ದೇವಸ್ಥಾನ ಕಟ್ಟಿದ್ರು ಕೌಸಲ್ಯ ಮಗ ರಾಮ.

ಮೈಸೂರಿ ನಮ್ಮ ಶಿಲ್ಪಿ ಅದ್ಭುತವಾಗಿ ರಾಮನನ್ನು ಕೆತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಾರೆ. ನನ್ನ ಸರ್ಕಾರ ಏಕೆ ತೆಗದ್ರು, ಏನ್ ಮಾಡಿದ್ವಿ..? ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿದ್ದೇನೆ. ಲಕ್ಷ ದ್ವೀಪ, ಅಂಡಮಾನ್ ಎಲ್ಲಾ ಕಡೆ ಹೋಗಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.

ಏನ್ ತಪ್ಪು ಮಾಡಿದ್ದೇನೆ, ಕುಮಾರಸ್ವಾಮಿ ಸರ್ಕಾರ ಏಕೆ ತೆಗೆದ್ರು..? ಗುಲಾಬ್ ನಬಿ ಅಜಾದ್ ಬಂದು ಕುಮಾರಸ್ವಾಮಿ ಅವರನ್ನೇ ಮಾಡಬೇಕು ಅಂದರು. ನಾನು ಸಿದ್ದರಾಮಯ್ಯ ಹೆಸರು ಹೇಳಲಿಲ್ಲ. ಖರ್ಗೆ ಅವರ ಹೆಸರು ಹೇಳಿದೆ. ಜೆಡಿಎಸ್ ಸಹವಾಸದಿಂದ ನಮಗೆ 78 ಬಂತು ಅಂತ ಸಿದ್ದರಾಮಯ್ಯ ಮಾತನಾಡಿದ್ರು. ಹಾಸನದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂಥ ರಾಹುಲ್‌ಗಾಂಧಿ ಭಾಷಣ ಮಾಡಿದ್ರು.

ಅನ್ನಭಾಗ್ಯ, ಆ ಭಾಗ್ಯ ಮಾಡಿದ್ರು ಕಾಂಗ್ರೆಸ್‌ಗೆ 78 ಸೀಟ್ ಬಂತು. ನಾನು ಒಂದುವರೆ ವರ್ಷ ಮುಖ್ಯಮಂತ್ರಿ ಆಗಿದ್ದೆ ಒಂದು ಜಾಹೀರಾತು ಕೊಡಲಿಲ್ಲ. ಹತ್ತುವರೆ ತಿಂಗಳು ಪ್ರಧಾನಮಂತ್ರಿ ಆಗಿದ್ದೆ ಒಂದು ಜಾಹೀರಾತು ಕೊಡಲಿಲ್ಲ. ಇದು ಸಾರ್ವಜನಿಕರ ಹಣ. ಬರೀ ಮಾಧ್ಯಮಗಳ ಮೂಲಕವೇ ಪ್ರಚಾರ ಮಾಡಿ ಅಧಿಕಾರಕ್ಕೆ ಬರ್ತೀವಿ ಅನ್ಕೊಂಡಿದ್ರು. ಆದರೂ‌ 78 ಸೀಟ್ ಬಂತು. ಇವುಗಳಿಗೆ ಜನ ಮಾರು ಹೋಗಲ್ಲ. ಜನಗಳಿಗೆ ಸಾಕಷ್ಟು ರಾಜಕೀಯ ಪ್ರಜ್ಞೆ ಇದೆ, ಸುಲಭವಿಲ್ಲ ಎಂದು ಹೇಳಿ, ದೇವೇಗೌಡರು ಇಂದಿನ ನ್ಯೂಸ್ ಪೇಪರ್‌ಗಳಲ್ಲಿ ಬಂದಿರುವ ಸರ್ಕಾರದ ಜಾಹೀರಾತುಗಳನ್ನು ಪ್ರದರ್ಶಿಸಿ ಸರ್ಕಾರವನ್ನು ಕುಟುಕಿದರು.

ಅಷ್ಟೇ ಅಲ್ಲದೇ, ನಾನು ಮೊದಲೇ ಹೇಳಿದ್ದೆ. ನಾನು ಈ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಹೋಗಿ, ಜಿ.ಪಂ., ತಾ.ಪಂ., ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ಸಿದ್ದತೆ ಮಾಡ್ತಿನಿ ಅಂತ ಹೇಳಿದ್ದೆ. ಬೇಲೂರು, ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಮುಗಿಸಿದ್ದೇನೆ. ಇಂದು ಆಲೂರು, ಸಕಲೇಶಪುರ ತಾಲ್ಲೂಕು ಮುಗಿಸಿ ಧರ್ಮಸ್ಥಳಕ್ಕೆ ಹೋಗುತ್ತೇನೆ. ಫೆಬ್ರವರಿ ತಿಂಗಳು ಮತ್ತೆ ಬರ್ತೇನೆ. ಉಳಿದ ತಾಲ್ಲೂಕುಗಳಲ್ಲಿ ಪ್ರವಾಸ ಮಾಡ್ತೇನೆ. ಪ್ರಜ್ವಲ್‌ರೇವಣ್ಣ, ರೇವಣ್ಣ ಆಯಾ ಕ್ಷೇತ್ರದ ಶಾಸಕರು ಪಕ್ಷ ಸಂಘಟನೆ ಮಾಡ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ.

ನಮ್ಮ ಪಕ್ಷಕ್ಕೆ ಕೆಲ ಶಾಸಕರು ಬರುವವರಿದ್ದಾರೆ ಕಾದು ನೋಡಿ: ಸಚಿವ ಸಂತೋಷ್ ಲಾಡ್

ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು: ಹೆಚ್.ಡಿ.ರೇವಣ್ಣ

- Advertisement -

Latest Posts

Don't Miss