Saturday, April 19, 2025

Latest Posts

‘ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈಶ್ವರಪ್ಪ ಪುತ್ರ ಕಾಂತೇಶ್ ಲೋಕಸಭೆ ಸ್ಪರ್ಧೆಯ ಸುಳಿವು ಕೊಟ್ಟಿದ್ದಾರೆ.

ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ. ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿರೋದು ಸತ್ಯ. ಈಶ್ವರಪ್ಪ ಮಗ ಒಳ್ಳೆಯ ಕಾರ್ಯಕರ್ತನೂ ಇದ್ದಾನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ ಅಂತಾ ಅನೇಕರು ಪಕ್ಷ ಬಿಟ್ಟರು. ಆದರೆ ಈಶ್ವರಪ್ಪ ಇಲ್ಲಿಯೇ ಉಳಿದಿದ್ದಾರೆ, ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಇದೀಗ ಅವರ ಪುತ್ರ ಲೋಕಸಭೆ ಚುನಾವಣೆ ತಯಾರಿ ಮಾಡ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಆದರೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೆ. ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕೂತು ತೀರ್ಮಾನ ಮಾಡೋಕೆ ಆಗಲ್ಲ. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜೋಶಿ ಕಿಡಿಕಾರಿದ್ದಾರೆ. ನಾನು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇರಲಿಲ್ಲ. ಆದರೆ ಯಾರೂ ಸಹ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕೂಡಲೆ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು ಎಂದು, ಬಿ ಆರ್ ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಆರ್ ವಿ ದೇಶಪಾಂಡೆಗೆ ನೀಡಿದ ವಿಶೇಷ ಸ್ಥಾನಮಾನದ ಕುರಿತು ಜೋಶಿ ವ್ಯಂಗ್ಯವಾಡಿದ್ದಾರೆ. ಸಿಎಂ ಗೆ ಬೈದರೆ ಒಂದು ಸ್ಥಾನಮಾನ ಸಿಗುತ್ತೆ ಅನ್ನೋದನ್ನ ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಮುಂದೆ ಯಾರ್ಯಾರು ಏನು ಮಾತಾಡ್ತಾರೆ, ಅವರಿಗೆ ಏನೇನು ಸ್ಥಾನಮಾನ ಕೊಡ್ತಾರೋ ನೋಡಬೇಕು ಎಂದು ಜೋಶಿ ತಮಾಷೆ ಮಾಡಿದ್ದಾರೆ.

ರಾಮ ಮಂದಿರ ಉದ್ಘಾಟನೆ, ಅಯೋಧ್ಯೆ ಅಭಿವೃದ್ಧಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಸನಾತನ ಧರ್ಮದ ಅಭಿಮಾನಿಗಳು, ರಾಮನ ಭಕ್ತರು ಸತತ ಹೋರಾಟ ಮಾಡಿದ್ರು. ನಮ್ಮೆಲ್ಲರ ಸೌಭಾಗ್ಯ ಮೋದಿ ಅವರ ಕಾಲದಲ್ಲಿ ಯಶಸ್ಸು ಸಿಕ್ಕಿದೆ. ಅಯೋಧ್ಯೆ ದೊಡ್ಡ ಪ್ರಮಾಣದ ಸಾಂಸ್ಕೃತಿಕ, ಧಾರ್ಮಿಕ ಪ್ರವಾಸಿ ಕೇಂದ್ರವಾಗಲಿದೆ. ಮೋದಿ, ಯೋಗಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ರಾಮಮಂದಿರ ವಿಚಾರವಾಗಿ ನಾವು ರಾಜಕೀಯ ಮಾಡುತ್ತಿಲ್ಲ. ಕಪಿಲ್ ಸಿಬಲ್, ಕಾಂಗ್ರೆಸ್ ಪಕ್ಷ‌ ರಾಮ ಮಂದಿರದ ವಿರುದ್ಧ ಹೋರಾಟ ಮಾಡಿದ್ರು. ಸಂಪೂರ್ಣ ವಾದ ಆಲಿಸಿ ಸುಪ್ರೀಂ ಕೋರ್ಟ್ ನಿರ್ಣಯ ಕೊಟ್ಟಿದೆ. ಕಾಂಗ್ರೆಸ್‌ನವರು ಹೊಟ್ಟೆ ಕಿಚ್ಚಿನಿಂದ ಮಾತಾಡ್ತಿದ್ದಾರೆ. ನಾವು ಸೋನಿಯಾ ಗಾಂಧಿಗೂ, ಖರ್ಗೆಗೂ ಅಹ್ವಾನ ಕೊಟ್ಟಿದ್ದೇವೆ. ನೀವು ಬಂದ್ರೆ ರಾಜಕಾರಣ ಆಗಲ್ಲ. ನೀವ ಬರದೆ ಹೋದ್ರೆ ಜನ ಬೈತಾರೆ, ಅದನ್ನೇ ರಾಜಕಾರಣ ಅಂದ್ರೆ ನಾವೇನು ಮಾಡೋಣ. ಕಾಂಗ್ರೆಸ್‌ನವರಿಗೆ ಬಂದರೂ ಕಷ್ಟ, ಬರದೆ ಇದ್ರು ಕಷ್ಟ ಎಂಬಂತಾಗಿದೆ. ರಾಮನ ಅಸ್ತಿತ್ವವನ್ನ ನೀವು ಪ್ರಶ್ನೆ ಮಾಡಿದ್ರಿ. ಉದ್ಘಾಟನೆಗೆ ಹೋದ್ರೆ ಅಲ್ಪಸಂಖ್ಯಾತರ ಮತ ಹೋಗುತ್ತೆ, ಬರದಿದ್ರೆ ಹಿಂದೂಗಳ ಮತ ಹೋಗತ್ತೆ ಅನ್ನೋ ಭಯ. ಕಾಂಗ್ರೆಸ್ ನವರು ಮೊದಲು ನಿಮ್ಮ‌ತಲೆ ಸರಿ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

‘ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ’

ಕೊಬ್ಬರಿಗೆ ಬೆಲೆ ಏರಿಕೆ: ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ

2023ರಲ್ಲಿ ನಿಧನರಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು

- Advertisement -

Latest Posts

Don't Miss