ನನಗೆ ಬೆಳಗಾವಿ ಟಿಕೆಟ್ ಸಿಕ್ಕೆ ಸಿಗುತ್ತೆ: ವಿಶ್ವಾಸ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್

Hubli News: ಹುಬ್ಬಳ್ಳಿ: ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಬೆಳಗಾವಿ ಟಿಕೆಟ್ ಸಿಕ್ಕೆ ಸಿಗುತ್ತೆ ಎಂದು ಮಾಜಿ ‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಬೆಳಗಾವಿ ಟಿಕೆಟ್ ಗಾಗಿ ಅಂತಿಮ ಪ್ರಯತ್ನ ನಡೆಸಿರುವ ಶೆಟ್ಟರ್ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದರು. ಹೈಕಮಾಂಡ್ ಜೊತೆ ಚರ್ಚಿಸಿ ನೇರವಾಗಿ ಹುಬ್ಬಳ್ಳಿಗೆ ಆಗಮಿಸಿದ ಶೆಟ್ಟರ್ ನಗುಮುಖದಿಂದಲೇ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾಳೆ ಅಥವಾ ನಾಡಿದ್ದು ಲಿಸ್ಟ್ ಬಿಡುಗಡೆಯಾಗುತ್ತೆ. ವರಿಷ್ಠರನ್ನು ನಾನು ಭೇಟಿಯಾಗಿದ್ದೇನೆ. ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಜೊತೆಯೂ ಚರ್ಚಿಸಿದ್ದೇನೆ. ಬಿಜೆಪಿ ಸ್ಥಳೀಯ ನಾಯಕರು ಜೊತೆಯ ಸಮಾಲೋಚನೆ ಮಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇನೆ. ಪ್ರಧಾನಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುತ್ತೆ. ಹೈಕಮಾಂಡ್ ನಾಯಕರಿಗೆ ಚರ್ಚಿಸಿದಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು.

ನಾಳೆ ಅಥವಾ ನಾಡಿದ್ದು ಟಿಕೆಟ್ ಫೈನಲ್ ಆಗುತ್ತೆ. ಇವತ್ತು ಮಧ್ಯಾಹ್ನ ಪ್ರಭಾಕರ ಕೋರೆ, ಕವಟಗಿ ಮಠ ಮೊದಲಾದವರ ಜೊತೆ ಚರ್ಚಿಸಿದ್ದೇನೆ. ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡೋಣ ಅಂತ ತೀರ್ಮಾನಿಸಿದ್ದೇವೆ. ನನಗೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಿದವರ ಬಗ್ಗೆ ಮಾತಾಡಲ್ಲ. ಹಾವೇರಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ವಿಚಾರ ಗೊತ್ತಿಲ್ಲ. ನಾನು ಅಥವಾ ಈಶ್ವರಪ್ಪ ಪುತ್ರ ಅಭ್ಯರ್ಥಿಯಾಗುತ್ತೇವೆ ಅನ್ನೋ ಮಾಹಿತಿ ಇಲ್ಲ ಎಂದರು.

ಟ್ರೋಫಿ ಗೆದ್ದ ಮಾತ್ರಕ್ಕೆ ನಾನು ವಿರಾಟ್ ಅವರಿಗೆ ಸಮನಲ್ಲ: ಸ್ಮೃತಿ ಮಂದನ

ಹೊಸ ಹೇರ್ ಸ್ಟೈಲ್, ಹೊಸ ಜರ್ಸಿ, ಎಕ್ಸ್‌ಪೆನ್ಸಿವ್ ಸನ್‌ಗ್ಲಾಸ್ ಧರಿಸಿ ಪ್ರ್ಯಾಕ್ಟೀಸ್‌ಗೆ ಬಂದಿಳಿದ ವಿರಾಟ್

ಬ್ಯಾಂಕ್ ಹಾಲಿಡೇ ಇದ್ದಾಗಷ್ಟೇ ಟ್ವೀಟ್ ಮಾಡ್ತಾರಪ್ಪಾ: RCBಗೆ ವಿಶ್ ಮಾಡಲು ಹೋಗಿ ಟ್ರೋಲ್ ಆದ ಮಲ್ಯ

About The Author