Sunday, December 1, 2024

Latest Posts

ಕೇಂದ್ರ ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಡುತ್ತೇನೆ, ಜೋಶಿ ರಾಜಕೀಯ ಬಿಡುತ್ತಾರಾ..?: ಸಿಎಂ ಸವಾಲ್

- Advertisement -

Hubli news: ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮಾಧ್ಯಮದವರೊಂದಿಗೆ ಮಾತನಾಡಿದರು. ಎರಡು ದಿನ ಶಿಗ್ಗಾವಿ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ನಾನು ಹಿಂದೆ ಕ್ಷೇತ್ರದ ಪ್ರಚಾರ ಮಾಡಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಬಂದಿರಲಿಲ್ಲ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ವಿ. ನಾವು ಅಲ್ಲಿ ಗೆದ್ದೇ‌ ಗೆಲ್ತೀವಿ. ಲೋಕಸಭಾ ಚುನಾವಣೆಯಲ್ಲಿ ನಮಗೆ ಲೀಡ್ ಬಂದಿದೆ. ಈಗಲೂ ಲೀಡ್ ಬರುವ ವಾತಾವರಣ ಇದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಕ್ಫ್ ವಿವಾದದ ಹಿನ್ನೆಲೆ ಬಿಜೆಪಿ ಹೋರಾಟ ವಿಚಾರದ ಬಗ್ಗೆ ಮಾತನಾಡಿರುವ ಸಿಎಂ, ಬಿಜೆಪಿ ಯಾವತ್ತೂ ಸುಳ್ಳು ಆರೋಪ ಮಾಡೋದು. ರಾಜಕಾರಣಕ್ಕಾಗಿ ಅವರು ಪ್ರತಿಭಟನೆ ಮಾಡೊದು. ಈಗ ಅವರೇ ವಿರುದ್ಧ ಮಾತಾಡ್ತಾರೆ, ಅವರೇ ಹೇಳಿದ ಮಾತಿನಿಂದ ಉಲ್ಟಾ ಹೊಡೆದಿದ್ದಾರೆ. ಅವರ ಇಡೀ ಪಕ್ಷ ರಾಜಕಾರಣಕ್ಕಾಗಿ ಹೋರಾಟ ಮಾಡ್ತಾರೆ. ವಕ್ಫ್ ಆಸ್ತಿ ನೋಟೀಸ್ ಇವತ್ತಿನದಲ್ಲ. ಅವರ ಕಾಲದಲ್ಲಿ ಕೂಡ ನೋಟಿಸ್ ಕೊಟ್ಟಿದ್ದಾರೆ. ನಾವು‌ ರದ್ದು ಮಾಡಬೇಕು ಎಂದು ಸಭೆ ಮಾಡಿದ್ದೇವೆ. ಯಾವ‌ ರೈತರನ್ನೂ ನಾವು ಒಕ್ಕಲೆಬ್ಬಿಸಲ್ಲ. ಯಾವುದೇ ಧರ್ಮದವರಾದ್ರೂ ಯಾರನ್ನೂ ಒಕ್ಜಲೆಬ್ಬಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ವಿರುದ್ಧ ಪ್ರತಾಪ ಸಿಂಹ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತಾಪ್ ಸಿಂಹ ಒಬ್ಬ ಕೊಮುವಾದಿ. ಅವರಿಂದ ಏನು ನಿರೀಕ್ಷೆ ಮಾಡಬಹುದು..? ಅವರಿಗೆ ಸಂವಿಧಾನದ ಬಗ್ಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಸಮಾಜ ಒಡೆದು ರಾಜಕಾರಣ ಮಾಡ್ತಾರೆ. ಜಾತಿ ಮಾಡಿ ರಾಜಕೀಯದಲ್ಲಿ ಬದುಕಲು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ದಿ ಅಂದ್ರೆ ಏನು..? ಗ್ಯಾರಂಟಿ ಯೋಜನೆ ಅಭಿವೃದ್ಧಿ ಅಲ್ಲವಾ..? 165 ಭರವಸೆಗಳಲ್ಲಿ 158 ಯೋಜನೆ ಈ ಹಿಂದೆ ಅನುಷ್ಠಾನ ಮಾಡಿದ್ದೇವೆ. 60 ಸಾವಿರ ಕೋಟಿ ಅಭಿವೃದ್ಧಿ ಕೆಲಸ ಮಾಡುತಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. 15 ನೇ ಹಣಕಾಸು ಆಯೋಗದಿಂದ ಕರ್ನಾಟಕ ಅನ್ಯಾಯ ಆಗಿದೆ. ಪ್ರತಿವರ್ಷ4.5 ಲಕ್ಷ ಕೋಟಿ ತೆರಿಗೆ ರಾಜ್ಯದಿಂದ ಕೋಡುತ್ತಿದ್ದೇವೆ. ಆದರೆ ರಾಜ್ಯಕ್ಕೆ ಸಿಗ್ತಿರೋದು 55-60 ಸಾವಿರ ಕೋಟಿ ಇದು ನ್ಯಾಯ ಏನ್ರೀ..?. ಇದನ್ನು ಕೇಳಿದ್ರೆ ರಾಜಕೀಯ ಅಂತಾರೆ? ಬಿಜೆಪಿಯವರು ಯಾವತ್ತೂ ಅನುದಾನ ಕೊರತೆ ಬಗ್ಗೆ ಮಾತನಾಡಿಲ್ಲ. ಕೇಂದ್ರದಿಂದ ರಾಜ್ಯ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಲ್ಹಾದ್ ಜೋಶಿ, ಬೊಮ್ಮಾಯಿ ಮಾತನಾಡಿದ್ದಾರಾ..? ನಾಲ್ಕುವರೆ ಲಕ್ಷ ಕೋಟಿ ಕೋಟ್ಟು, 60 ಸಾವಿರ ಕೋಟಿ ತಗೋಳದು ಅನ್ಯಾಯ ಅಲ್ವೇ. ಹಣಕಾಸು ಆಯೋಗದ ಶಿಫಾರಸ್ಸು ಆಧಾರದ ಮೇಲೆ ಅನುದಾನ ಬರಬೇಕು ಅದು ಕೋಡುತ್ತಿಲ್ಲ. 15 ನೇ ಹಣಕಾಸು ಆಯೋಗದ ಶಿಫಾರಸ್ಸು ಪ್ರಕಾರ. 11495 ಸಾವಿರ ಕೋಟಿ ಅನ್ಯಾಯ ಆಗಿದೆ. 5495 ಕೋಟಿ ವಿಶೇಷ ಅನುದಾನ ಕೊಡಬೇಕು ಅಂಥ ಹೇಳಿದ್ರು. ಪೇರಿಪೆರಿಯಲ್ ರಿಂಗ್ ರೋಡ್, ಕೆರೆ ಅಭಿವೃದ್ಧಿ. ಇದನ್ನು ಮಿಸ್ಟರ್ ಜೋಶಿ ಅವರು ಕೇಳಬೇಕೋ ತಾನೆ..? ಕೇಂದ್ರ ಈ ಅನುದಾನ ಕೊಟ್ಡಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ಪ್ರಲ್ಹಾದ್ ಜೋಶಿ ರಾಜಕೀಯ ಬಿಡ್ತಾರಾ..? ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಡುತ್ತೇನೆ. ಅವರು ರಾಜಕೀಯ ಬಿಡ್ತಾರಾ..? ಜೋಶಿ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

- Advertisement -

Latest Posts

Don't Miss