Wednesday, December 11, 2024

Latest Posts

ಬಾಲಕಿಯೊಂದಿಗೆ ಅನುಚಿತ ವರ್ತನೆ: ಗೂಸಾ ಕೊಟ್ಟು ಪೊಲೀಸ್ ಠಾಣೆಗೆ ಕಳುಹಿಸಿದ ಸ್ಥಳೀಯರು

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಶಬರಿನಗರ ಎಂಬಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಸ್ಥಳೀಯರೆಲ್ಲ ಸೇರಿ, ಚೆನ್ನಾಗಿ ಗೂಸಾ ಕೊಟ್ಟು, ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.  ಈತನ ಹೆಸರು ಖದೀಮನವರ ಆಗಿದ್ದು, ಈತನ ತಪ್ಪಿಗೆ ಸ್ಥಳೀಯರೆಲ್ಲ ಚೆನ್ನಾಗಿ ಥಳಿಸಿ, ಕೇಶ್ವಾಪುರ ಪೊಲೀಸ್ ಠಾಣೆಗೆ ಈತನನ್ನು ಒಪ್ಪಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್‌, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪಿರಿಯಾದೆ ದಾಖಲಾಗಿದೆ. ನೆನ್ನೆ 3-4 ಗಂಟೆ ಅವಧಿಯಲ್ಲಿ ಮನೆಯೊಳಗೆ ಕರೆದು ಬಾಲಕಿ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಲಾಗಿದೆ. ಪೋಷಕರ ಹತ್ತಿರ ಆರೋಪಿ ಈ ರೀತಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಮಗುವಿಗೆ ಸಂಬಂಧಪಟ್ಟಂತ ನಾಲ್ಕು ಜನ ಹಿರಿಯರು ಇದನ್ನ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿ ಆರೋಪಿಗೆ ಒಂದೆರಡೇಟು ಹೊಡೆದಿದ್ದಾರೆ. ನಮ್ಮ ಗಮನಕ್ಕೆ ಬಂದ ಕೂಡಲೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ನಗುವಿನ ಪೋಷಕರ ಹೇಳಿಕೆಯನ್ನು ಪಡೆದಿದ್ದೇವೆ. ಈ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದಿದ್ದಾರೆ.

ಒಳಗೆ ಕರೆದು ಬಾಗಿಲು ಹಾಕಿ ಕೈಗೆ ಮುತ್ತು ಕೊಟ್ಟ ಎಂಬ ಆರೋಪ ಇದೆ. ಹೊರಗಿನಿಂದ ಬಾಗಿಲು ಬಡೆದಾಗ ಮಕ್ಕಳನ್ನು ಹೊರಗೆ ಕಳಿಸಿದ್ದಾನೆ ಎಂಬ ಆರೋಪ ಇದೆ. ಸಂಬಂಧಪಟ್ಟ ಆರೋಪಿಯನ್ನು ವಶಕ್ಕೆ ಪಡೆದು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಹಿಂದೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಾನೋ, ಇಲ್ವೋ ಎಂಬುದು ಮುಖ್ಯ ಅಲ್ಲ. ಆರೋಪಿ ಹಿನ್ನೆಲೆ ನಮಗೆ ಮುಖ್ಯ ಆಗಲ್ಲ ಎಂದು ಶಶಿಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss