Tumakuru Political News: ತುಮಕೂರು: ಸಿದ್ದಗಂಗಾ ಮಠದಲ್ಲಿ ಸಂಸದ ಜಿಎಸ್ ಬಸವರಾಜ್ ಮಾತನಾಡಿದ್ದು, ತುಮಕೂರಿನಲ್ಲಿ ಸೋಮಣ್ಣ ಸ್ಪರ್ಧೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸೋಮಣ್ಣರಿಗೆ ಟಿಕೆಟ್ ನೀಡಿದ್ರೆ ಶಿರಾಸಾ ವಹಿಸಿ ಮಾಡ್ತಿವಿ. ಅವರು ಇಲ್ಲಿ ಎರಡು ಬಾರಿ ಜಿಲ್ಲಾ ಮಂತ್ರಿಗಳು ಆಗಿದ್ದವರು. ದೇವೆಗೌಡರ ವಿರುದ್ಧ ನನ್ನ ಚುನಾವಣೆಯಲ್ಲಿ ಉಸ್ತುವಾರಿ ಆಗಿದ್ದರು. ನೂರಕ್ಕೆ ನೂರು ನನ್ನ ಭವಿಷ್ಯ ಅವರ ಮೇಲಿತ್ತು.ನನ್ನ ಗೆಲ್ಲಿಸಿದ್ರು. ಸೋಮಣ್ಣ ಪರ ಟಿಕೆಟ್ ನೀಡಿ ಅಂತಾ ನೀವು ಕೇಳ್ತಿರಾ ಎಂಬ ಪ್ರಶ್ನೆ ಗೆ ಬಸವರಾಜ್ ಉತ್ತರ. ಪ್ರಜಾಪ್ರಭುತ್ವದಲ್ಲಿ ನಾನೇನು ಕುರುಡಾನಾ..? ಅವರು ಕೇಳಿದಾಗ ಏನ್ ಹೇಳಬೇಕು ಅದು ಉತ್ತರ ಕೊಡ್ತಿನಿ ಎಂದಿದ್ದಾರೆ.
7 ರಂದು ಸೋಮಣ್ಣ ದೆಹಲಿಗೆ ತೆರಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ್, ೠ 7 ರಂದು ನಾನು ದೆಹಲಿಯಲ್ಲಿ ಇರ್ತಿನಿ ಪಾರ್ಲಿಮೆಂಟ್ ಇರುತ್ತದೆ. ಪಾರ್ಟಿ ಯಾರಿಗೆ ಟಿಕೆಟ್ ಕೊಡ್ತಾರೋ ಅವರಿಗೆ ಮಾಡ್ತಿವಿ. ಸೋಮಣ್ಣ ಪರ ಬ್ಯಾಟ್ ಬಿಸೋದು ಗಿಸೋದು ಏನ್ ಅಲ್ಲ. ದೆಹಲಿಗೆ ಹೋಗಿ ನಾನು ಇವರಿಗೆ ಸೀಟ್ ಕೊಡಿ ಅಂದ್ರೆ ಕೊಡ್ತಾರಾ.? ಅದಕ್ಕೆ ನೀತಿ ನಿಯಮವಿದೆ. ಪಾರ್ಲಿಮೆಂಟರಿ ಬೋರ್ಡ್ ಇದೆ. ಯಾವ ರೀತಿ ಅನ್ನೋದು ಹೈಕಮಾಂಡ್ ತಿರ್ಮಾನ ಮಾಡುತ್ತೆ. ಸೋಮಣ್ಣ ನವರು ಇವತ್ತಿಗೆ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಿಂದಲೇ ಅಭ್ಯರ್ಥಿ ಅಂತಾ ನಿನ್ನೆ ಮೊನ್ನೆಯೋ ಹೇಳಿದ್ದಾರೆ. ತುಮಕೂರಿಗೆ ನಿಲ್ತಿನಿ ಅಂತಾ ಹೇಳಿದ್ದಾರೆ ಎಂದರು.
ಸೋಮಣ್ಣರಿಗೆ ಕಾಂಗ್ರೆಸ್ ಆಹ್ವಾನ ವಿಚಾರದ ಬಗ್ಗೆ ಮಾತನಾಡಿದ ಸಂಸದರು, ನನ್ನನ್ನು ಕರಿತಾರೆ,ಗೊತ್ತಾ. ಬಿಜೆಪಿಯಲ್ಲಿ ವಯಸ್ಸಿನ ಮೀತಿಯಿದೆ ನಮ್ಮಲ್ಲಿ ಏನು ಇಲ್ಲಾ ಬಾ ಅಂತಾರೆ. ನನ್ನದು 1939 ಹುಟ್ಟಿದ ವರ್ಷ ,ವಯಸ್ಸು ಆಗಿದೆ ನಿಲ್ಲಲ್ಲ ಅಂತಾ ಹೇಳಿದ್ದೇನೆ. ಮುಂದಿನ ಜನರೇಷನ್ ಯಾರು ಬರಬಾರದಾ ನಾನೇ ನಿಂತರೆ. ಉತ್ತಮವಾದ ವಾತವರಣ ಸೋಮಣ್ಣರಿಗೆ ಇದೆ. ಮುದ್ದಹನುಮೇಗೌಡ ಆ ಪಾರ್ಟಿ ಈ ಪಾರ್ಟಿ ಯಲ್ಲಿದ್ದರು ಹೋದ ವರ್ಷ ಬ್ರೇಕ್ ಆಯ್ತು. ಏನೆನೋ ಇರುತ್ತೆ ನಮಗೇನು ಯಾರಿಗೆ ಟಿಕೆಟ್ ಅಂತಾ ಹೈಕಮಾಂಡ್ ಗೆ ಬಿಟ್ಟದ್ದು. ಮುದ್ದಹನುಮೇಗೌಡರು ನನ್ನ ವಿರುದ್ಧ ಗೆದ್ದರು ಆದರೂ ನಾವು ಚೆನ್ನಾಗಿ ಇದಿವಿ. ಸೋಮಣ್ಣರಿಗೆ ನಾನು ಸಪೊರ್ಟ್ ಮಾಡ್ತಿನಿ ಎಂದು ಬಸವರಾಜ್ ಹೇಳಿದ್ದಾರೆ.
ಬಿಎಸ್‌ವೈ ಫೋನ್ ರಿಸೀವ್ ಮಾಡದ ಸೋಮಣ್ಣ, ಯತ್ನಾಳ್‌ಗಿದೆಯಂತೆ ಸಿದ್ದು ಬೆಂಬಲ..?