National Political News: ತಮಿಳುನಾಡಿನಲ್ಲಿ ಅಣ್ಣಾಮಲೈ ಬಿಜೆಪಿ ಪರ ಪ್ರಚಾರ ಮಾಡಿದ್ದರೂ ಕೂಡ, ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನ ಕೂಡ ಗೆಲ್ಲಲಿಲ್ಲ.
ನಿನ್ನೆ ಅಣ್ಣಾಮಲೈ ಹುಟ್ಟುಹಬ್ಬವಾಗಿದ್ದರೂ ಕೂಡ, ನಿನ್ನೆ ಅವರಿಗೆ ನಿರಾಶಾದಾಯಕ ದಿನವಾಗಿತ್ತು. ಏಕೆಂದರೆ, ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಲ್ಲದೇ, ತಮಿಳುನಾಡಿನಲ್ಲಿ ಒಂದೂ ಬಿಜೆಪಿ ಸೀಟ್ ಗೆದ್ದಿಲ್ಲ.
ಹೀಗಾಗಿ ಅಣ್ಣಾಮಲೈ ಅವರಿಗೆ ಹಲವರು ಸೋತಿದ್ದಾರೆಂದು ಅಣಕಿಸಿದ್ದು, ಅದಕ್ಕೆ ಮಲೈ ಖಡಕ್ ಉತ್ತರ ನೀಡಿದ್ದಾರೆ. ನಾನು ಕರುಣಾನಿಧಿ ಮಗನಾಗಿದ್ದರೆ ಗೆಲ್ಲುತ್ತಿದ್ದೆ. ಆದರೆ ನಾನು ಕುಪ್ಪುಸ್ವಾಮಿ ಮಗ. ಹೀಗಾಗಿ ನಾನು ಗೆಲ್ಲಲ್ಲು ಇನ್ನಷ್ಟು ಸಮಯ ಬೇಕಾಗುತ್ತದೆ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಅಲ್ಲದೇ, ತಮಿಳುನಾಡಿನಲ್ಲಿ ಬಿಜೆಪಿಯನ್ನು ನೋಟಾ ಪಾರ್ಟಿ ಎಂದು ಅಣುಕಿಸುತ್ತಿದ್ದರು. ಆದರೆ ಈ ಬಾರಿ ನಾವು ಶೇ.11ರಷ್ಟು ಓಟ್ ಪಡೆದಿದ್ದೇವೆ. ಇದೆಲ್ಲ ದುಡ್ಡು ಕೊಟ್ಟು ಬಂದಿರುವ ಓಟ್ ಅಲ್ಲ. ಸ್ವಂತ ಪರಿಶ್ರಮದಿಂದ ಬಂದಿರುವ ಓಟ್. ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದವರು ಹಾಕಿರುವ ಓಟ್. ನಾವು ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ತವರಲ್ಲೇ ಅಣ್ಣಾಸಾಹೇಬ್ ಜೊಲ್ಲೆಗೆ ಮುಖಭಂಗ: ಪ್ರಿಯಾಂಕಾ ಗೆಲುವಿಗೆ ಕಾಂಗ್ರೆಸ್ಸಿಗರ ಸಂಭ್ರಮ
ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಅರ್ಪಿಸುತ್ತೇನೆ: ವಿ.ಸೋಮಣ್ಣ