- Advertisement -
ದೆಹಲಿ: ತಮಿಳುನಾಡಿನ ಪೋಲಿಸ್ ಮಹಾನೀರಿಕ್ಷಕ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎ.ಜೆ ಪೊನ್ ಮಾಣಿಕವೇಲ್ ವಿರುದ್ಧ ನಿವೃತ್ತ ಇನ್ಸಪೆಕ್ಟರ್ ಖಾದರ್ ಮಾಡಿದ್ದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಜು.22 ರಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.ಇದರಲ್ಲಿ ಬಾಚ ಮತ್ತು ಹೆಡ್ ಕಾನ್ಸ್ ಸ್ಟಬಲ್ ಗಳನ್ನು ಆರೋಪಿಗಳೆಂದು ಹೇಳಲಾಗಿದೆ.
ವಿಗ್ರಹ ಕಳವು ಪ್ರಕರಣಗಳ ಮುಖ್ಯ ಆರೋಪಿ ದೀನದಯಾಳ್ ಜೊತೆ ಮಾಣಿಕವೇಲ್ ಶಾಮೀಲಾಗಿ, ಬಾಚಾ ಅವರ ವಿರುದ್ದ ಸುಳ್ಳು ಪ್ರಕರಣಗಳನ್ನು ಹಾಕಲು ಶುರುಮಾಡಿದ್ದಾರೆ ಎಂದು ಬಾಚಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಆರೋಪಗಳ ಗಂಭೀರತೆ ಅರಿತು ನ್ಯಾಯಮೂರ್ತಿ ಜಿ. ಜಯಚಂದ್ರನ್, ಆರೋಪಗಳ ಕುರಿತು ತನಿಖೆ ನಡೆಸಲು ಸಿಬಿಐಗೆ ಆದೇಶಿಸಿದರು.
- Advertisement -