Sunday, May 26, 2024

Latest Posts

ಎರಡೂ ಪಕ್ಷಗಳಿಗೆ ಮಾನ ಮರ್ಯಾದೆ ಇದ್ದರೆ ಆರೋಪಿಗೆ ತಕ್ಷಣವೇ ಉಗ್ರ ಶಿಕ್ಷೆ ಆಗಬೇಕಿದೆ: ದಿಂಗಾಲೇಶ್ವರ ಶ್ರೀ

- Advertisement -

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಸಾವು ದೇಶವನ್ನು ದುಃಖಕ್ಕೆ ಈಡು ಮಾಡುವಂತಾಗಿದ್ದು, ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಸೂಕ್ತ ತನಿಖೆಯನ್ನು ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಕೀರ್ ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದರು.

ನಗರದ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನೇಹಾ ಹಿರೇಮಠ ಕೊಲೆ ಖಂಡಿಸಿ ಫಕೀರ ದಿಂಗಾಲೇಶ್ವರ ಸ್ವಾಮೀ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನೇಹಾಳಗಿ ನ್ಯಾಯ ಸಿಗಬೇಕಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಸ್ವಾತಂತ್ರ್ಯ ಸಿಗಬೇಕು. ಬಿಜೆಪಿ ಪಕ್ಷದವರು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವ ನೀಚ ಕೆಲಸಕ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಾನವೀಯತೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದ್ದು, ಈ ಸಾವನ್ನು ಬಹು ಸಂಖ್ಯಾತ ರಾಜಕಾರಣಿಗಳು ಬಳಕ ಮಾಡಿಕೊಳ್ಳುತ್ತಾರೆಂಬ ನಾಡಿನ ಜನ ಅಂದುಕೊಂಡಿರಲಿಲ್ಲ ಎಂದರು.

ಯಾವುದೇ ಸರ್ಕಾರ ಇರಲಿ ಇಂತಹ ಘಟನೆ ಹಾಗೂ ಕೊಲೆಯನ್ನು ಸಾಮಾನ್ಯವಾಗಿ ತಗದೆಕೊಳ್ಳಬಾರದು. ಏಕಕಾಲಕ್ಕೆ ಬೆಂಗಳೂರು, ತುಮಕೂರು, ಹುಬ್ಬಳ್ಳಿಯಲ್ಲಿ ಕೊಲೆಗಳು ಆಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಏನು ಮಾಡುತ್ತಿವೆ ಎಂಬ ಪ್ರಶ್ನೆ ಮೂಡಿದೆ ಎಂದರು.

ಒಂದು ಪಕ್ಷ ಲವ್ ಜಿಹಾದ್ ಎಂದು ಹೇಳುತ್ತಾ ಬಂದಿದ್ದೇವೆ, ಆದರೇ ಇಂತಹ ಕ್ರೂರಿಗಳಿಗೆ ಉಗ್ರ ಶಿಕ್ಷೆ ಏಕೆ ಆಗಲಿಲ್ಲ. ಎರಡೂ ಪಕ್ಷಗಳಿಗೆ ಮಾನ ಮರ್ಯಾದೆ ಇದ್ದರೆ ಆರೋಪಿಗೆ ತಕ್ಷಣವೇ ಉಗ್ರ ಶಿಕ್ಷೆ ಆಗಬೇಕಿದೆ. ಅವಳ ನಡತೆ ಸರಿಯಿಲ್ಲ ಎಂದು ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ನೋವಿನಲ್ಲಿ ಇರುವವರು ಕೂಡಲೇ ಪಾಲಕರು ಹಾಗೂ ನಾಡಿನ ಮುಖಂಡರ ಗಮನಕ್ಕೆ ತಂದು ರಕ ಪಡೆಯಬೇಕು ಎಂದು ಅವರು ಸಲಹೆ ನೀಡಿದ ಅವರು ಇದು ನಾಡಿದ ಎಲ್ಲಾ ನಿಲುವಾಗಿದೆ ಎಂದು ನುಡಿದರು.

ಇನ್ನೂ ಪ್ರಧಾನಿಯವರ ಭೇಟಿ ಬಚಾವೋ..ಬೇಟಿ ಮಡಾವೋ ಎಂಬುದು ಅಕ್ಷರಶಃ ಅನುಷ್ಠಾನಕ್ಕೆ ಬರಬೇಕು.‌ಸರಕಾರವೇ ಮಹಿಳೆಯರ ರಕ್ಷಣೆಗೆ ಪರವಾಣಿಗೆಯ ಆಯುಧ ನೀಡುವಂತೆ ವ್ಯವಸ್ಥೆ ಜಾರಿಗೆ ಬರಬೇಕು. ನೇಹಾ ಘಟನೆಯನ್ನು ಎಲ್ಲರೂ ನಿಂತು ನೋಡಿದರೆ ವಿನಹ ಯಾರು ರಕ್ಷಣೆಗೆ ಬರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ರಕ್ಷಣೆಗೆ ಆಯುಧ ಇಟ್ಟು ಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಹೊಸಪೇಟೆಯ ಅಮ್ಮನವರು ಮಾತನಾಡಿ,ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಸೆರಗು ಒಡ್ಡಿ ಬೇಡಿಕೊಳ್ಳುತ್ತೇವೆ. ಹೆಣ್ಣಿಗೆ ಬೆಂಬಲ, ರಕ್ಷಣೆ ನೀಡುವ ಕೆಲಸ ಆಗಬೇಕಿದೆ. ದೇಶಕ್ಕೆ ಯೋಗಿ ಆದತ್ಯನಾಥರಂತೆ ನಾಯಕ ಬೇಕಿದೆ. ಇಂತಹ ಕೊಲೆಗಾರನಿಗೆ ಸ್ಪಾಟ್ ನಲ್ಲಿಯೇ ಎನ್ಕೌಂಟರ್ ಮಾಡಬೇಕಿದೆ‌. ಅವನಿಗೆ ಉಗ್ರ ಶಿಕ್ಷೆ ಆಗೋವರೆಗೂ ಪ್ರತಿಭಟನೆ ನಿಲ್ಲದು. ಹಿಂದೂ ಸಮಾಜದಲ್ಲಿ ಒಗ್ಗಟ್ಟು ಏಕತೆ ಇಲ್ಲದ ಕಾರಣಕ್ಕೆ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇನ್ನಾದರೂ ಹಿಂದೂಗಳು ಒಗ್ಗಟ್ಟಿನಿಂದ ಪ್ರದರ್ಶನ ತೋರುವ ಮೂಲಕ ದೇಶ,‌ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಮಹಿಳೆಯರ ಮೇಲೆ ಇಂತಹ ಘಟನೆ ಮಾಡಿದವರ ತಕ್ಷಣವೇ ಎನ್ಕೌಂಟರ್ ಆಗುವ ಕಾನೂನು ತರಬೇಕು. ಮಠಾಧೀಶರು ಮಠ ಬಿಟ್ಟು ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು. ಆರೋಪಿಯನ್ನು ಕೊಲ್ಲಬೇಕು, ಅದು ದೇಶಕ್ಕೆ ಸಂದೇಶ ಸಾರಬೇಕು ಎಂದು ಹಕ್ಕೋತ್ತಾಯ ಮಾಡಿದರು.

ಪ್ರತಿಭಟನಾ ಸಮಾವೇಶದಲ್ಲಿ ಶಿಗ್ಗಾವಿ ಸಂಗನಬಸವ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಮಹಾಸ್ವಾಮಿಜಿ, ಬಸವಧರ್ಮ ಪೀಠದ ಶ್ರೀ, ಮುರಘಾಮಠದ ಮಲ್ಲಿಕಾರ್ಜುನ ಶ್ರೀ, ಸವಣೂರಿನ ದೊಡ್ಡ ಕಲ್ಮಠದ ಶ್ರೀ ಸೇರಿದಂತೆ ಮೊದಲಾದವರು ಆರೋಪಿಗೆ ಕಾನೂನಿನಲ್ಲಿರುವ ಕ್ರೂರ ಶಿಕ್ಷೆ ನೀಡಿ, ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ನೇಹಾ ತುಂಬಾ ಒಳ್ಳೆಯ ಹುಡುಗಿ : ಅವಳೇ ಮೊದಲು ಪ್ರಪೋಸ್ ಮಾಡಿದ್ದು: ಫಯಾಜ್ ತಾಯಿ ಮುಮ್ತಾಜ್

ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸುವ ಶಕ್ತಿ ಬೇರೆ ಯಾರ ಬಳಿ ಇಲ್ಲ, ನೀವೇ ಸಹಾಯ ಮಾಡಿ: ಜೋಶಿ ಬಳಿ ನೇಹಾ ತಂದೆ ಮನವಿ

ನೇಹಾ ಹ* ಕೇಸ್: ಫಯಾಜ್ ರುಂ*ಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

- Advertisement -

Latest Posts

Don't Miss