Wednesday, June 12, 2024

Latest Posts

ಮದುವೆಗೆ ಕರೆದರೆ ಹೋಗಿ ಆಶೀರ್ವಾದ ಮಾಡಿ ಬರುತ್ತೇವೆ: ಪುತ್ರಿ ವಿವಾಹದ ಬಗ್ಗೆ ಶತ್ರುಘ್ನ ಸಿನ್ಹಾ ಮಾತು

- Advertisement -

Bollywood News: ಶತ್ರುಘ್ನ ಸಿನ್ಹಾ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ, ತಮ್ಮ ಬಾಯ್‌ಫ್ರೆಂಡ್ ಝಹೀರ್‌ ಇಕ್ಬಾಲ್ ಜೊತೆ ವಿವಾಹವಾಗುತ್ತಿದ್ದಾರೆ. ಜೂನ್. 23ಕ್ಕೆ ಮುಂಬೈನಲ್ಲೇ ವಿವಾಹವಾಗುತ್ತಿದ್ದಾರೆಂದು ಸುದ್ದಿಯಾಗಿದೆ. ಆದರೆ ಈ ಬಗ್ಗೆ ಸೋನಾಕ್ಷಿ ಸಿನ್ಹಾ ತಂದೆ ವಿಚಿತ್ರವಾದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಾಧ್ಯಮದವರಿಗೆ ಎಷ್ಟು ಗೊತ್ತೋ, ನನಗೂ ಅಷ್ಟೇ ಗೊತ್ತು.

ಆಕೆ ಇದೇ 23ಕ್ಕೆ ಮುಂಬೈನಲ್ಲಿ ವಿವಾಹವಾಗುತ್ತಿದ್ದಾಳೆ. ಆದರೆ ಈ ಬಗ್ಗೆ ನನಗೇನೂ ಹೇಳಲಿಲ್ಲ. ಆಕೆ ತನ್ನ ಮದುವೆಗೆ ಕರೆದರೆ, ನಾನು ನನ್ನ ಪತ್ನಿ ಹೋಗಿ ಆಶೀರ್ವಾದ ಮಾಡಿ ಬರುತ್ತೇವೆ. ಆಕೆಯ ಖುಷಿಯನ್ನು ನಾವು ಬಯಸುತ್ತೇವೆ. ಇಂದಿನ ಕಾಲದ ಮಕ್ಕಳು ನಾವು ಮದುವೆ ಮಾಡಿಕೋ ಎಂದರೆ, ಒಪ್ಪುವುದಿಲ್ಲ. ಆದರೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆಕೆ ಮದುವೆಗೆ ಕರೆದರೆ, ನಾನು ಆಕೆಯ ಮದುವೆಯಲ್ಲಿ ನೃತ್ಯ ಮಾಡಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಾನು ದೆಹಲಿಗೆ ಬಂದಿದ್ದೆ. ಮಾಧ್ಯಮಗಳ ಮುಖಾಂತರವೇ ನನಗೆ ಸೋನಾಕ್ಷಿ ಮದುವೆಯ ವಿಚಾರ ಗೊತ್ತಾಗಿದೆ. ಆಕೆ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿರುತ್ತಾಳೆಂಬ ನಂಬಿಕೆ ನನಗಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

Sandalwood News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಕಾರಣ, ರೇಣುಕಾಸ್ವಾಮಿಯ ಕೊ*ಲೆ..?

ಮೋದಿ ಕ್ಯಾಬಿನೆಟ್ 3.0: ಯಾರಿಗೆ ಯಾವ ಖಾತೆ?

- Advertisement -

Latest Posts

Don't Miss