Thursday, July 25, 2024

Latest Posts

ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಕಾರಣ, ರೇಣುಕಾಸ್ವಾಮಿಯ ಕೊ*ಲೆ..?

- Advertisement -

Sandalwood News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದು, ಚಿತ್ರದುರ್ಗದ ರೇಣುಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ನಟನ ಮೇಲಿದೆ.

ರೇಣುಕಾಸ್ವಾಮಿಯ ಕೊಲೆ ಮಾಡಲು ಕಾರಣವೆಂದರೆ, ಆತ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಮತ್ತು ಅಶ್ಲೀಲವಾದ ಫೋಟೋ ಕಳಿಸಿದ್ದ. ಹಾಗಾಗಿ ದರ್ಶನ್ ಸೇರಿ ನಾಲ್ವರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು, ರಾಜರಾಜೇಶ್ವರಿ ನಗರದಲ್ಲಿ ಕೊಲೆ ಮಾಡಿ, ಕಾಾಮಾಕ್ಷಿ ಪಾಳ್ಯದಲ್ಲಿ ಶವ ಬಿಸಾಕಿದ್ದರೆಂಬ ಆರೋಪವಿದೆ.

ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ಮಾಡುವಾಗ, ದರ್ಶನ್ ಒದ್ದಿದ್ದು, ಅದು ರೇಣುಕಾಸ್ವಾಮಿಯ ಗುಪ್ತಾಂಗಕ್ಕೆ ತಾಗಿ, ರೇಣುಕಾಸ್ವಾಮಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದ. ಬಳಿಕ ಆತನ ಶವವನ್ನು ಕಾಮಾಕ್ಷಿ ಪಾಳ್ಯದಲ್ಲಿ ಬಿಸಾಕಲಾಗಿತ್ತು. ಈ ಘಟನೆ ನಡೆದು 2 ತಿಂಗಳಾಗಿತ್ತು. ಇದೀಗ ದರ್ಶನ್ ಈ ಕೊಲೆ ಆರೋಪಿ ಎಂದು ಗೊತ್ತಾಗಿದ್ದು, ಮೈಸೂರಿನ ಫಾರ್ಮ್ ಹೌಸ್‌ನಿಂದ, ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ.

- Advertisement -

Latest Posts

Don't Miss