Thursday, April 3, 2025

Latest Posts

ಕಾಂಗ್ರೆಸ್‌ನವರಿಗೆ ಕೇಸರಿ ಕಂಡರೆ ಕೆಂಡ, ಉರಿ ಕಂಡಂತೆ ಆಗುತ್ತಿದೆ: ಪ್ರಮೋದ್ ಮುತಾಲಿಕ್

- Advertisement -

Gadag News: ಗದಗ: ಮಂಡ್ಯದ ಕೆರಗೋಡ ಗ್ರಾಮದಲ್ಲಿ ಕೇಸರಿ ಧ್ವಜ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗದಗದಲ್ಲಿ ಮಾತನಾಡಿದ್ದಾರೆ.

108 ಅಡಿ ಎತ್ತರದಲ್ಲಿ ಕೇಸರಿ ಧ್ವಜ ಹಾಕಿದ್ದನ್ನ ತೆಗೆದಿದ್ದಾರೆ. ಶ್ರೀರಾಮಸೇನೆ ಇದನ್ನ ಖಂಡಿಸುತ್ತದೆ. ವಿರೋಧಿಸುತ್ತದೆ. ಕೇಸರಿ ಧ್ವಜ ಯಾವದೋ ಸಂಘಟನೆ ಅಥವಾ ಪಕ್ಷದ ಧ್ವಜವಲ್ಲ.  ಈ ದೇಶದಲ್ಲಿ ಸಾವಿರಾರು ವರ್ಷದಿಂದ ಬಂದಿರೋ ಧರ್ಮದ ಧ್ವಜ.  ಕೆರಗೋಡ ಗ್ರಾಮ ಪಂಚಾಯತ ಎಲ್ಲ‌ ಸದಸ್ಯರ ಒಮ್ಮತದಿಂದ ಕೂಡಿಸಲಾಗಿತ್ತು. ಆದರೆ ಅಲ್ಲಿನ ಕಾಂಗ್ರೆಸ್ ನವರಿಗೆ ಕೇಸರಿ ಕಂಡರೆ ಕೆಂಡ, ಉರಿ ಕಂಡಂತೆ ಆಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ.

ಧರ್ಮದ ಧ್ವಜದ ಮೇಲೇಕೆ ದ್ವೇಷ ಸಿಟ್ಟು, ನಿಮ್ಮದು..? ಕೇಸರಿ ತ್ಯಾಗ, ಸಂಸ್ಕೃತಿ, ಸಮೃದ್ಧಿಯ ಪ್ರತೀಕವಾಗಿದೆ. ಇದೇನು ಬಿಜೆಪಿ, ಆರೆಸ್ಸೆಸ್ಸ್ ಧ್ವಜವಲ್ಲ. ಕಾಂಗ್ರೆಸ್ಸಿಗರು ಧರ್ಮದ ಧ್ವಜ ಗೌರವಿಸುವದನ್ನ ಕಲಿತುಕೋಬೇಕು. ದ್ವೇಷ ಸಾಧಿಸಿದಷ್ಟು ಹಿಂದೂ ಸಮಾಜ ಕೆರಳುತ್ತೆ, ನಿಮ್ಮನ್ನ ವಿರೋಧಿಸುತ್ತೆ. ಕಾಂಗ್ರೆಸ್ ಬಂದ ನಂತರ, ಮೇಲಿಂದ‌ ಮೇಲೆ ಈ ರೀತಿ ಪ್ರವೃತ್ತಿ ಆಗುತ್ತಿದೆ. ಯಾಕಂದ್ರೆ ಇತ್ತೀಚೆಗೆ ರಾಮನ ಸುನಾಮಿ ಎದ್ದಿರೋದ್ರಿಂದ ಕಾಂಗ್ರೆಸ್ಸಿನವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ಕೇಸರಿ ಧ್ವಜ ತೆಗೆದಿರುವದು ಅಕ್ಷ್ಯಮ್ಯ‌ ಅಪರಾಧ. ಲಾಠಿ ಚಾರ್ಜ ಮಾಡಿರೋದು‌ ಕೂಡ ತಪ್ಪು. ಹಿಂದೂಗಳ ಧರ್ಮದ ಭಾವನೆಗಳಿಗೆ ಧಕ್ಕೆ ಕೊಡ್ತಿದಿರಿ. ಇದನ್ನೆಲ್ಲ ನೋಡಿದಾಗ ರಾವಣನ ಮಾನಸಿಕ ಸ್ಥಿತಿಗೆ ಬಂದು ತಲುಪಿದ್ದೀರಿ. ರಾಮ ನಿಮ್ಮನ್ನ ಸರ್ವನಾಶ ಮಾಡೋದು ನಿಶ್ಚಿತ. ಯಾವುದೇ‌ ಪಾಕಿಸ್ತಾನ ಧ್ವಜ ಹಾರಿಸಿಲ್ಲ. ಪಕ್ಷ ಅಥವಾ ಸಂಘಟನೆ ಧ್ವಜ ಹಾರಿಸಿಲ್ಲ. ರಾಷ್ಟ್ರಧ್ವಜ ಹಾರಿಸಿ..ಯಾರು ಬೇಡ ಅಂತಾರೆ. 108 ಅಡಿ ಕಂಬಕ್ಕೆ ಧ್ವಜ ಕಟ್ಟಲು ಎಷ್ಟೆಲ್ಲ ಭಕ್ತಿ, ಆಸಕ್ತಿ, ಪರಿಶ್ರಮ, ಸಾಹಸ ಮಾಡಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳದೇ ದ್ವೇಷ ಸಾಧಿಸೋದನ್ನ ನಾನು ಖಂಡಿಸುತ್ತೇನೆ ಎಂದು ಪ್ರಮೋದಿ ಮುತಾಲಿಕ್ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನಾನು ಒಪ್ಪಲ್ಲ. ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ಬಿಟ್ಟು ಪಕ್ಷಗಳನ್ನು ಬಿಟ್ಟು, ಒಟ್ಟಾಗಿ ಈ‌‌ ಕೆಲಸ ಮಾಡಿದ್ರು. ಎಲ್ಲರ ಪರಿಶ್ರಮದಿಂದ 108 ಅಡಿ ಕಂಬವನ್ನು ಹಾಕಲಾಗಿತ್ತು. ದೊಡ್ಡ ಕಂಬದ ಮೂಲಕ ರಾಷ್ಟ್ರ ಧ್ವಜ ಹಾರಿಸುವ ಕೆಲಸ‌ ಸರ್ಕಾರ ಎಲ್ಲಾದ್ರೂ ಮಾಡಿದ್ರೆ ತೋರಿಸಿ. ಚೆಲುವರಾಯಸ್ವಾಮಿ ಅವ್ರಿಗೆ ಸವಾಲು ಹಾಕುತ್ತೇನೆ. ಸುಳ್ಳು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ‌ ಮಾಡ್ಬೇಡಿ.

ರಾಷ್ಟ್ರಧ್ವಜ ಹಾರಿಸುವಾಗ ಕೇಸರಿ ಧ್ವಜ ಇಳಿಸಿ, ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಕ್ಕೆ ಗೌರವ ಕೊಡೋಣ. ಆಮೇಲೆ ಮತ್ತೆ ಅಲ್ಲಿ ಧರ್ಮ ಧ್ವಜವನ್ನು ಹಾರಿಸುವ ಪ್ರಕ್ರಿಯೆ ಆಗ್ಬೇಕು. ಚೆಲುವರಾಯಸ್ವಾಮಿ ಅವರು ರಾಜಕೀಯ ಮಾಡ್ತಾಯಿದ್ದಾರೆ. ಮುಸ್ಲಿಂ ವೋಟ್ ಗಾಗಿ ರಾಜಕೀಯ ಮಾಡ್ತಾಯಿದ್ದಿರಾ. ರಾಜಕೀಯದ ಪರಿಣಾಮವಾಗಿ ಕೆಸರಿ ಧ್ವಜವನ್ನು ಇಳಿಸಿದ್ದಿರಾ. ರಾಜಕಾರಣ ಮಾಡ್ತಾಯಿದ್ದು, ದ್ವೇಷ ಸಾಧಿಸುತ್ತಿದ್ದಿರಿ. ಬೇರೆಯವರು ರಾಜಕೀಯ ಮಾಡ್ತಾಯಿದ್ದಾರಾ ಎನ್ನುವ ಮುಂಚೆ ನೀವು ಏನು ಮಾಡಿದ್ದಿರಿ..? ಯಾಕೇ ಕೇಸರಿ ಧ್ವಜವನ್ನು ತೆಗೆಬೇಕು ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಯಾರೋ ಮುಸ್ಲಿಂ ವಿರೋಧ ಮಾಡಿದ್ದಾರೆ, ಮುಸ್ಲಿಂ ವೋಟ್ ಗಾಗಿ ನೀವು ತೆಗೆದಿದ್ದೀರಿ. ನೀವು ರಾಜಕೀಯ ಮಾಡಿದ್ರೆ, ನಾವು ರಾಜಕೀಯಕ್ಕಾಗಿಯೇ ವಿರೋಧ ಮಾಡುತ್ತೇವೆ. ಕಾಂಗ್ರೆಸ್‌ಗೆ ಕೊನೆಗಾಲ ಬಂದಿರೋದರು ನೂರಕ್ಕೆ ನೂರು ಸತ್ಯವಾದದ್ದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane

ಮಂಡ್ಯದ ಹನುಮಧ್ವಜ ತೆರವುಗೊಳಿಸಿದ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ನಟ ಸೂರ್ಯ ಜೊತೆ ಡಿವೋರ್ಸ್ ವಿಚಾರ: ಸ್ಪಷ್ಟನೆ ನೀಡಿದ ನಟಿ, ನಿರ್ಮಾಪಕಿ ಜ್ಯೋತಿಕಾ

- Advertisement -

Latest Posts

Don't Miss