Hassan Political News: ಹಾಸನ: ಹಾಸನದಲ್ಲಿಂದು ಸುದ್ದಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸ್ವ ಪಕ್ಷ ಬಿಜೆಪಿ ವಿರುದ್ಧ ಮಾತ್ನಾಡಿದ ಎಸ್ ಟಿ ಸೋಮಶೇಖರ್ ವಿಚಾರದ ಬಗ್ಗೆ ಸದಾನಂದ ಗೌಡರು ಮಾತನಾಡಿದ್ದು, ಅವರು ನಮ್ಮ ವ್ಯಾಪ್ತಿಗೆ ಬರುವ ಶಾಸಕರಾಗಿದ್ದಾರೆ. ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ಗೊತ್ತಿಲ್ಲ. ಕರೆದು ಅವರಲ್ಲಿ ಮಾತ್ನಾಡುವೆ ಎಂದಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಸದಾನಂದಗೌಡ ಪ್ರತಿಕ್ರಿಯಿಸಿದ್ದು, ಮೊನ್ನೆ ಮೊನ್ನೆ ಕತ್ತಿ ಗುರಾಣಿ ಹಿಡಿದು ಹೋರಾಡಿ. ನೀವು ಹೊಂದಾಣಿಕೆ ಮಾಡಿಕೊಂಡ್ರೆ , ಇಲ್ಲಿ ಇಂಪ್ಲಿಮೆಂಟ್ ಮಾಡೋರು ನಾವು . ಕೆಳ ಹಂತದ ಕಾರ್ಯಕರ್ತರು ಏನು ಮಾಡ್ತಾರೆ..? ಮೊದಲು ಮಾರ್ಗ ಸೂಚಿ ನೀಡಿ ಇದನ್ನ ಮಾಡಿ ಅಂತ ಹೇಳಿದ್ದೇನೆ. ನನ್ನಂತವರಿಗೆ ತೊಂದರೆ ಇಲ್ಲ. ಚೇರ್ ಕೊಟ್ಟು ಕೂರಿಸ್ತಾರೆ. ಆದರೆ ಕಾರ್ಯಕರ್ತರ ಕಥೆ ಏನು? ಎಂದು ಸದಾನಂದಗೌಡ ಪ್ರಶ್ನಿಸಿದ್ದಾರೆ.
ಮೊನ್ನೆ ದೆಹಲಿಗೆ ಬರಲು ನಾಯಕರು ಹೇಳಿದ್ರು ,ಆದರೆ ಅಲ್ಲಿ ಛತ್ತಿಸ್ ಘಡ ರಾಜಕೀಯ ಕಾರಣ ಅಲ್ಲಿ ಭೇಟಿ ಮಾಡಲು ಆಗಲಿಲ್ಲ. ಇನ್ನು ಮುಂದೆ ಕರೆದಾಗ ನಾನು ಹೋಗ್ತಿನಿ. ಹೊಂದಾಣಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ಕೋರ್ ಮಿಟಿ ಬಗ್ಗೆ ಏನು ಗೊತ್ತಿಲ್ಲ ಮಾಹಿತಿ ಇಲ್ಲ. ಸರಿಯಾಗಿ ಇಂಪ್ಲಿಮೆಂಟ್ ಆದರೆ 28 ಕ್ಕೆ 28 ನಾವು ಗೆಲ್ಲುತ್ತೇವೆ ಎಂದು ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ನ್ಯಾಷನಲ್ ಲೆವೆಲ್ಗೆ I.N.D.A ಸೂಕ್ತ ನಾಯಕ ಇಲ್ಲ. ನಮಗೆ ಜಗತ್ತಿಗೆ ನಾಯಕನಂತಹ ಮೋದಿ ಇದ್ದಾರೆ. ಕರ್ನಾಟಕದಲ್ಲಿ ನಮ್ಮ ನಾಯಕರು ಸರಿಯಾದ ಸೂತ್ರ ನೀಡಿದ್ರೆ ಕಾಂಗ್ರೆಸ್ ಒಂದು ಸ್ಥಾನ ಬರುವುದಿಲ್ಲ. ಭಾರತೀಯ ಜನತಾ ಪಾರ್ಟಿ ಹಿನ್ನಡೆಗೆ ನಮ್ಮ ಸಣ್ಣಪುಟ್ಟ ಗೊಂದಲ ಕಾರಣ ಇದನ್ನ ನಾವು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಅಲ್ಲದೇ, ಈಗ ಪಂಚರಾಜ್ಯ ಚುನಾವಣೆ ಬಹಳ ಮುಖ್ಯ ಇದೆ , ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷ ಆಯ್ಕೆ ತಡವಾಗಿದೆ. ರಾಜ್ಯಾಧ್ಯಕ್ಷ ಆಯ್ಕೆ ತಡ ಆಗಿದ್ದು ನಮಗೂ ಮುಜುಗರ ಇದೆ. ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಬಗ್ಗೆ ನಮ್ಮನ್ನೆಲ್ಲಾ ಅಭಿಪ್ರಾಯ ಸಂಗ್ರಹ ಆಗಿದೆ. ಕೇಂದ್ರದ ನಾಯಕರ ತೀರ್ಮಾನ ಅಂತಿಮ ಎಂದು ಸದಾನಂದಗೌಡ ಹೇಳಿದ್ದಾರೆ.
ಮೋದಿ ಪರ ನಿಂತ ಅಹಿಂಸಾ ಚೇತನ್! ಸಂತೋಷ್ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ
ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮುಲ್ಲಾ ಬಂಧನ
ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್ ಕ್ಷಮೆಯಾಚನೆಗೆ ಪಟ್ಟು