Monday, April 14, 2025

Latest Posts

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

- Advertisement -

Hassan News:ಹಾಸನ: ನಿನ್ನೆ ತುಮಕೂರು ಜಿಲ್ಲೆಗೆ ಹಾಸನದಿಂದ ನೀರು ಹರಿಸಿದ ಹಿನ್ನೆಲೆ, ಮಾತನಾಡಿದ ಮಾಜಿ ಸಚಿವ ರೇವಣ್ಣ, ಡಿಸಿ, ಅಡಿಷನಲ್ ಚೀಫ್ ಸೆಕ್ರೆಟರಿ ಗಮನಕ್ಕೆ ತಂದಿದ್ದೀನಿ. ತುಮಕೂರು ಜಿಲ್ಲೆಗೆ ನೀರು ಕೊಡಿ ನಮ್ಮದೇನು ತಕರಾರಿಲ್ಲ. ನಮ್ಮ ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ರೈತರು ಸಿಡಿದೇಳುವ ಪರಿಸ್ಥಿತಿ ಬಂದಿದೆ. ನಾನು ದೇವೇಗೌಡರ ಗಮನಕ್ಕೆ ತಂದಿದ್ದೀನಿ. ಎಲ್ಲಾ ರೈತರ ಮುಖಂಡರ ಜಿತೆ ಮಾತನಾಡಿದ್ದೇನೆ. ಒಂಭತ್ತು ತಿಂಗಳು ಕಾಂಗ್ರೆಸ್ ಆಡಳಿತದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದರೆ ಹೇಗೆ..? ದೇವೇಗೌಡರು ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು. ನಾಳೆ ಹೆಚ್ಚು ಕಡಿಮೆ ಆದರೆ ನಾವು ಜವಾಬ್ದಾರರಲ್ಲ. ಗೊರೂರಿಗೆ ಮುತ್ತಿಗೆ ಹಾಕ್ತಿವಿ, ಏನಾದರೂ ಘಟನೆಯಾದರೆ ಡಿಸಿ, ಎಸ್ಪಿ ಹೊಣೆ ಎಂದು ರೇವಣ್ಣ ಹೇಳಿದ್ದಾರೆ.

ಹಾಸನ, ಮಂಡ್ಯ, ಕೆ.ಆರ್.ಪೇಟೆಯಲ್ಲಿ ಕುಡಿಯುವ ನೀರಿಲ್ಲ. ಚುನಾವಣೆಗಾಗಿ ತುಮಕೂರಿಗೆ ನೀರು ಬಿಡುತ್ತಿದ್ದಾರೆ. ಎರಡು ವರ್ಷ ಆಯ್ತು ನಮ್ಮ ರೈತರು ನಾಟಿ. ಎಚ್‌ಆರ್‌ಬಿಸಿ ಎರಡು ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕು. ನಾಳೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕ್ತಿವಿ. ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಎರಡು ಭಾರಿ ನೀರು ಹರಿಸಿದ್ದಾರೆ. ನನ್ನ ಅಭಿಪ್ರಾಯವನ್ನು ನೀರಾವರಿ ಸಲಹಾ ಸಮಿತಿಗೆ ಪತ್ರದ ಮೂಲಕ ಬರೆದಿದ್ದೇನೆ. ನಾವು ಕುಡಿಯಲು ನೀರು ಕೇಳುತ್ತಿದ್ದೇವೆ. 144 ಸೆಕ್ಷನ್ ಹಾಕಿ ಎಮರ್ಜೆನ್ಸಿ ಹೇರಿದ್ದಾರೆ ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಪಕ್ಷ ಹಾಗೂ ರೈತರ ಜೊತೆ ಬೀದಿಗಳಿದು ಹೋರಾಟ ಮಾಡುತ್ತೇವೆ. ಎರಡು ಟಿಎಂಸಿ ಬಿಡಲು ಅವರಿಗೆ ಕನಸು ಬಿದ್ದಿತ್ತು. ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ, ಸರ್ಕಾರದ ಗಮನಕ್ಕೆ ತರಬೇಕು. ನಾಳೆ ಹೆಚ್ಚು ಕಡಿಮೆ ಆದರೆ ಡಿಸಿಯವರೇ ಹೊಣೆ. ಕೋರ್ಟ್‌ಗೆ ಹೋದರೆ ಅದರ ಕಥೆಯೇ ಬೇರೆ ಆಗುತ್ತೆ. ಟ್ರಾನ್ಸ್‌ಫಾರ್ಮರ್ಸ್‌‌ಗೆ ದುಡ್ಡು ಕಟ್ಟಿದ್ರು ಕೊಡ್ತಿಲ್ಲ. ಜೆಡಿಎಸ್ ಕಾರ್ಯಕರ್ತರ ಬೋರ್‌ವೆಲ್‌ಗಳ ವಿದ್ಯುತ್ ಕನೆಕ್ಷನ್ ಕಟ್ ಮಾಡುತ್ತಿದ್ದಾರೆ. ರೈತರಿಗೆ ಒಂದು ಗಂಟೆ ವಿದ್ಯುತ್ ಕೊಡುತ್ತಿಲ್ಲ. ಹೇಳೋರು, ಕೇಳೋರು ಈ ಜಿಲ್ಲೆಯಲ್ಲಿ. ಮಿನಿಸ್ಟರ್ ಎಂಟು ಗಂಟೆ ಕರೆಂಟ್ ಕೊಡ್ತಿನಿ ಅಂತಾರೆ. ರೈತರ ಬೆಳೆಗಳೆಲ್ಲಾ ಒಣಗಿ ಹೋಗಿವೆ. ನಮಗೆ ಕುಡಿಯುವ ನೀರು ಕೊಡಿ ಎಂದು ರೇವಣ್ಣ ಆಗ್ರಹಿಸಿದ್ದಾರೆ.

ಡಿಎಂಎಫ್‌ಗೆ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರು. ಆರು ತಿಂಗಳಿನಿಂದ ಡಿಎಂಎಫ್‌ನಲ್ಲಿರುವ ಹಣ ಕೊಡುತ್ತಿಲ್ಲ. ಏಕೆ ದುಡ್ಡು ಕೊಡದೆ ಇಟ್ಟುಕೊಂಡಿದ್ದೀರಿ..? ಅಂಗನವಾಡಿ ರಿಪೇರಿಗೆ ದುಡ್ಡು ಕೊಡ್ತಿಲ್ಲ. ಆ ಹಣವನ್ನು ಏಕೆ ಇಟ್ಟುಕೊಂಡಿದ್ದಾರೆ..? ಕೂಡಲೇ ಹಣವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಬೇಕು. ಅಂಗನವಾಡಿ ಹುದ್ದೆ ಖಾಲಿ ಇದೆ, ಹುದ್ದೆ ಭರ್ತಿ ಮಾಡಿ, ಏಕೆ ಕಾಯುತ್ತಿದ್ದೀರಾ..? ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿರುವ ರೇವಣ್ಣ. ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ನಮ್ಮ ಪಕ್ಷದ ಮುಖಂಡರು ಕುಳಿತು ತೀರ್ಮಾನ ಮಾಡಿದ್ದಾರೆ. ಮಂಜುನಾಥ್ ಅವರು ಒಳ್ಳೆಯ ಸೇವೆ ಮಾಡಿದ್ದಾರೆ. ಕಳೆದ ಹದಿನೇಳು ವರ್ಷದಿಂದ ಅವರದ್ದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ನಿಲ್ಲಲೇಬೇಕು ಎಂದು ಎಲ್ಲರೂ ಒತ್ತಾಯ ಹೇರಿದರು. ಎಲ್ಲಾ ಕಡೆ ಅವರಿಗೆ ಸನ್ಮಾನ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ. ಈ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..? ಕುಮಾರಣ್ಣ ನಿಮ್ಮ ಪಾದಗಳಿಗೆ ನಮಸ್ಕಾರಗಳು. ಐದು ವರ್ಷ ನೀವೇ ಸಿಎಂ ಎಂದರು. ದೇವೇಗೌಡರು, ಕುಮಾರಣ್ಣ ಪಾದಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಡ್ತಿವಿ ಅಂತ ಬಂದರು. ನಿಮ್ಮ ಆಶೀರ್ವಾದ ಬೇಕು ಅಂತ ಸರಿಯಿಲ್ಲದ ಪಕ್ಷದ ಬಳಿ ಏಕೆ ಬರಲು ಹೋದರು. ಅಲ್ಲಿ ವ್ಯಾಪಾರ ಆಗ್ದಲೆ ಇಲ್ಲಿಗೆ ಬಂದರು. ದೇವೇಗೌಡರಿಗೆ ಇವೆಲ್ಲ ಅನುಭವವಿದೆ ಎಂದು ರೇವಣ್ಣ ಹೇಳಿದ್ದಾರೆ.

3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!

ಪ್ರತಾಪ್‌ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ

- Advertisement -

Latest Posts

Don't Miss