Thursday, January 23, 2025

Latest Posts

ಉಪ್ಪು ಮತ್ತು ಹರಿಶಿಣವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಬಡವರು ಶ್ರೀಮಂತರಾಗುತ್ತಾರೆ ..!

- Advertisement -

ನಾವು ಈ ದಿನ ನಿಮ್ಮ ಜೀವನಕ್ಕೆ ಅನುಕೂಲವಾಗಬಲ್ಲ ಹಾಗೂ ದಾರಿ ದೀಪವಾಗಬಲ್ಲ ಮಹತ್ವವಾದ ವಿಷಯವನ್ನು ಹೇಳುತ್ತೇವೆ ,ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಕಾಣುತ್ತದೆ .

ಉಪ್ಪು ಮತ್ತು ಹರಿಶಿನ ಅಡುಗೆ ಮನೆಯಲ್ಲಿ ಈ ದಿಕ್ಕಿಗೆ ಇಟ್ಟರೆ ಬಡವರು ಕೂಡಾ ಶ್ರೀಮಂತರಾಗುತ್ತಾರೆ ಹೀಗೆ ಮಾಡಿದರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ . ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಇಡುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಮನೆಯಲ್ಲಿ ಇಟ್ಟಿಕೊಳ್ಳುವ ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಹೇಗೆ ಇಟ್ಟುಕೊಳ್ಳ ಬೇಕು ಎಂದು ತಿಳಿದು ಕೊಳ್ಳೋಣ .

ವಾಸ್ತು ನಿಯಮವನ್ನು ಯಾವ ವ್ಯಕ್ತಿ ಕ್ರಮಬದ್ಧವಾಗಿ ಪಾಲನೆ ಮಾಡುತ್ತಾರೋ ಅವರಿಗೆ ಅದೃಷ್ಟ ಕೈ ಹಿಡಿಯುತ್ತದೆ . ಅಂತಹವರ ಮನೆಯಲ್ಲಿ ಲಕ್ಷ್ಮಿಕೃಪೆ ಕಟಾಕ್ಷ ಸದಾಕಾಲ ಇರುತ್ತದೆ . ಸ್ವಚ್ಛತೆ ಎಲ್ಲಿ ಇರುತ್ತದೋ ಯಾವ ಮನೆ ವಾಸ್ತು ಪ್ರಕರವಾಗಿರುತ್ತದೋ ಅಲ್ಲಿ ಲಕ್ಷ್ಮಿದೇವಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ . ಅದರಲ್ಲೂ ವಿಶೇಷವಾಗಿ ಅಡುಗೆ ಮನೆಯಲ್ಲಿ ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಇಡುವುದು ಮನೆಯ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ .

ಇನ್ನು ಉಪ್ಪಿಲದೆ ಎಂಥಹ ಮೃಷ್ಟಾನ್ನ ಭೋಜನವು ರುಚಿಸುವುದುದಿಲ್ಲ ,ಎಲ್ಲರಿಗೂ ತಿಳಿದಿರುವಹಾಗೆ ಉಪ್ಪು ಅಡುಗೆಗೆ ಬಹಳ ಮುಖ್ಯ ,ಅಡುಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯಲ್ಲಿರೋ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಉಪ್ಪಿಗಿದೆ . ಉಪನ್ನು ಮನೆಯ ಆಗ್ನೆಯ ಮೂಲೆಯಲ್ಲಿ ಇರಿಸುವುದು ಬಹಳಷ್ಟು ಉತ್ತಮ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಓಡಿಸಬಲ್ಲ ಅದ್ಬುತ ಶಕ್ತಿ ಉಪ್ಪಿನಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ನಿಮ್ಮ ಸ್ಟ್ರೆಸ್ , ಆಯಾಸ ಎರಡನ್ನು ಕಡಿಮೆ ಮಾಡಬಲ್ಲದು, ಅಷ್ಟೇಅಲ್ಲದೆ ರಾಹು, ಕೇತೂ, ತರಲಿರುವ ಅಶುಭ ಫಲವನ್ನು ಉಪ್ಪು ಶಮನ ಮಾಡುತ್ತದೆ ಎಂದು ವಾಸ್ತು ಪಂಡಿತರು ಹೇಳುತ್ತಾರೆ .

ಅದೇ ರೀತಿ ಹಿಂದೂ ಸಂಪ್ರದಾಯದಲ್ಲಿ ಹರಿಶಿಣಕ್ಕೆ ಬಹಳ ಪ್ರಾಮುಖ್ಯೆತೆ ಇದೆ . ಜ್ಯೋತಿಷ್ಯದಲ್ಲೂ ಇದರ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ ಹರಿಶಿಣ ಸಂಪ್ರದಾಯ ಪಾಲನೆಗೆ ಅಡುಗೆಗೆ ಮಾತ್ರ ಉಪಯೋಗ ವಾಗುವುದಲ್ಲದೆ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಶೀಘ್ರ ವಿವಾಹ ಯೋಗಕ್ಕೂ ಅನುಕೂಲ ಮಾಡಿಕೊಡುತ್ತದೆ . ಹರಿಶಿಣ ಬಹು ಮುಖ್ಯವಾಗಿ ಗ್ರಹಗಳಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸೋ ಅದ್ಬುತ ಶಕ್ತಿಯನ್ನು ಹೊಂದಿದೆ ಅನ್ನುವುದರ ಬಗ್ಗೆ ಜ್ಯೋತಿಷ್ಯದಲ್ಲಿ ಉಲ್ಲೇಖವಿದೆ . ಅಡುಗೆ ಮನೆಯ ಮಸಾಲೆಗಳಲ್ಲಿ ಒಂದಾದ ಅರಿಶಿಣವು ಬಹುತೇಕೆ ಎಲ್ಲದರಲ್ಲೂ ಉಪಯೋಗಿಸಲ್ ಪಡುವ ವಸ್ತುವಾಗಿದೆ ಮತ್ತೊಂದೆಡೆ ಜ್ಯೋತಿಷ್ಯದ ದೃಷ್ಟಿ ಕೋನದಿಂದ ನೋಡುವುದಾದರೆ , ಅರಿಶಿನಕ್ಕೆ ಗುರುಗ್ರಹದ ಜೋತೆ ಸಂಪರ್ಕವಿದೆ ಎಂದು ನಂಬಲಾಗಿದೆ . ನಿಮ್ಮ ಅಡುಗೆಮನೆಯಲ್ಲಿ ಅರಿಶಿಣ ಖಾಲಿಯಾದರೆ ಅದು ಗುರು ದೋಷ ಎಂದು ಪರಿಗಣಿಸಲಾಗುತ್ತದೆ . ಗುರುವಿನ ದೋಷದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ,ಮತ್ತು ವೃತ್ತಿಯಲ್ಲಿ ಹಿನ್ನೆಡೆ ಉಂಟಾಗುತ್ತದೆ ಆದ್ದರಿಂದ ಅಡುಗೆ ಮನೆಯಲ್ಲಿನ ಅರಿಶಿಣ ಖಾಲಿಯಾಗುತ್ತದೆ ಎಂದರೆ ಅದಕ್ಕೂ ಮುನ್ನವೇ ಹೊಸ ಹರಿಶಿಣ ತಂದು ಹರಿಶಿಣ ಡಬ್ಬ ತಂದು ತುಂಬಿಸಿ . ಮನೆಯಲ್ಲಿ ಹರಿಶಿಣದ ಕೊರತೆ ಸಂಪತ್ತು ಮತ್ತು ಹಣದ ಕೊರತೆಯನ್ನು ಸೂಚಿಸುತ್ತದೆ ,ಹಾಗೆಯೆ ಶುಭ ಕಾರ್ಯಗಳಲ್ಲಿ ಅಡಚಣೆ ಉಂಟಾಗುವ ಸೂಚನೆ ನೀಡುತ್ತದೆ . ಇನ್ನು ಹರಿಶಿಣವನ್ನು ಯಾರಿಂದಲೂ ಕೇಳಿ ತೆಗೆದುಕೊಳ್ಳ ಬಾರದು ,ಹಾಗೆಯೆ ಯಾರಾದರೂ ಕೆಳೆದರೆ ಕೊಡಬಾರದು ಅನ್ನುವುದನ್ನು ನೆನಪಿನಲ್ಲಿಡಿ .

ಬಹಳ ಮುಖ್ಯವಾಗಿರುವ ವಿಷಯ ವೇನೆಂದರೆ ವಾಸ್ತು ಪ್ರಕಾರ ಉಪ್ಪು ಮತ್ತು ಹರಿಶಿಣವನ್ನು ಅಡುಗೆಮನೆಯಲ್ಲಿ ಒಂದೇ ಕಡೆ ಇಡಬಾರದು , ಒಂದು ವೇಳೆ ಈ ಎರಡನ್ನು ಒಂದೇಕಡೆ ಇಟ್ಟರೆ ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಖಚಿತ . ಕುಟುಂಬ ಸದಸ್ಯರಿಗೆ ಮನಶಾಂತಿ ಇರುವುದಿಲ್ಲ , ಮನೆಯಲ್ಲಿ ನಕಾರತ್ಮಕತೆ ತುಂಬಿ ತುಳುಕುತ್ತದೆ . ಕಲಹಗಳು ಹೆಚ್ಚಾಗುತ್ತದೆ ಯಾರ ಮನೆಯಲ್ಲಿ ಉಪ್ಪು ಮತ್ತು ಅರಿಶಿನ ಒಟ್ಟಿಗೆ ಇರುತ್ತದೋ ಅಲ್ಲಿ ದರಿದ್ರ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ ಅನ್ನುವ ನಂಬಿಕೆ ಇದೆ ಹಾಗಾಗಿ ನೀವು ಇಂತಹ ತಪ್ಪನ್ನುಮಾಡಲೇ ಬೇಡಿ .

ಕೆಲವರು ಮೊದಲು ಡಬ್ಬಿಯಲ್ಲಿ ಇರುವ ಉಪ್ಪು ಮೊದಲು ಖಾಲಿಯಾಗಲಿ ನಂತರ ಅದರಲ್ಲಿ ಹೊಸ ಉಪ್ಪನ್ನು ಹಾಕೋಣ ಎಂದು ಡಬ್ಬಿಯನ್ನು ಹಾಗೆಯೆ ಖಾಲಿ ಬಿಡುತ್ತಾರೆ ಆದರೆ ಈ ವಿಷಯ ನೆನಪಿನಲ್ಲಿಡಿ , ಜೋತಿಷ್ಯ ಶಾಸ್ತ್ರದಲ್ಲಿ ಉಪ್ಪನ್ನು ರಾಹುವಿನ ವಸ್ತು ಎಂದು ಪರಿಗಣಿಸಲಾಗುತ್ತದೆ . ಅಡುಗೆ ಮನೆಯಲ್ಲಿ ಉಪ್ಪು ಕಡಿಮೆಯಾದರೆ ರಾಹುವಿನ ಕಣ್ಣು ನಿಮ್ಮ ಮೇಲೆ ಬೀಳುತ್ತದೆ . ಹಾಗ ಅಲ್ಲಿಂದ ನೀವು ಮಾಡೋ ಪ್ರತಿಯೊಂದು ಕೆಲಸವು ಹಿನ್ನಡೆ ಯಾಗುತ್ತದೆ ಹಾಗೂ ಆರ್ಥಿಕ ಬಿಕಟ್ಟನು ಎದುರಿಸ ಬೇಕಾಗುತ್ತದೆ . ಹಾಗಾಗಿ ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬವನ್ನು ಇಂದಿಗೂ ಖಾಲಿ ಬಿಡಬಾರದು ಎನ್ನುವುದನ್ನ ನೆನಪಿನಲ್ಲಿಡಿ . ಜೊತೆಗೆ ಇನ್ನೊಬ್ಬರ ಮನೆಯಿಂದ ಉಪ್ಪನ್ನು ಸಾಲ ಕೇಳಬಾರದು , ಹಾಗೆ ಸಾಲವಾಗಿ ಉಪ್ಪನ್ನು ನೀಡುವುದು ಅಶುಭ ಎಂದು ಪರಿಗಣಿಸಲಾಗಿದೆ . ಹೀಗೆ ಮಾಡುವುದರಿಂದ ನಿಮ್ಮ ಅಡುಗೆ ಮನೆ ಯಾವಾಗಲು ಖಾಲಿಯಾಗಿರುತ್ತದೆ . ಅಂದರೆ ಹಣಕಾಸಿನ ಸಮಸ್ಯೆ ನಿಮನ್ನು ಕಾಡುತ್ತದೆ ಎಂದು ಅರ್ಥ .

ಇನ್ನು ಅಡುಗೆ ಮನೆಯಲ್ಲಿ ನುಮ್ಮ್ನೆ ಬೇಡವಾದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ಮನೆಗೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ , ಅಡುಗೆ ಮನೆ ಕಿಟಕಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನಿರ್ಮಿಸ ಬೇಕು ,ಮುಖ್ಯವಾದ ವಿಷಯ ವೇನೆಂದರೆ ನೀವು ಅಡುಗೆ ಮನೆಯಲ್ಲಿ ದೇವರನ್ನು ಇಡಬಾರದು , ಅಡುಗೆ ಕೋಣೆ ಕೇವಲ ಅಡುಗೆ ತಯಾರಿಸಲು ಮಾತ್ರ ಇರಬೇಕು. ಅಲ್ಲಿ ದೇವರನ್ನು ಇಟ್ಟು ಪೂಜೆ ಮಾಡುವುದು ಅತ್ಯಂತ ಅಶುಭ ಎಂದು ವಾಸ್ತು ಶಾಸ್ತ್ರಸಲ್ಲಿ ಹೇಳಲಾಗಿದೆ . ಹಾಗೆಯೆ ಔಷಧಿಗಳನ್ನೂ ಎಂದಿಗೂ ಅಡುಗೆ ಕೋಣೆಯಲ್ಲಿ ಇಡಬಾರದು . ಇದರಿಂದ ಮನೆಯ ಸದಸ್ಯರು ಅನಾರೋಗ್ಯದಿಂದ ಬಳಲೋ ಸಾಧ್ಯತೆ ಹೆಚ್ಚಾಗುತ್ತದೆ .

ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ನಿಮ್ಮ ಸ್ವಂತ..!

ಮನೆಯ ಹೆಂಗಸರು ಈ ಮೂರೂ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು..!

ಈ ಗಿಡ ನಿಮ್ಮ ಮನೆಯ ಬಳಿ ಇದ್ದರೆ ಅದೃಷ್ಟ ನಿಮನ್ನು ಹುಡುಕಿಕೊಂಡು ಬರುತ್ತದೆ..!

 

- Advertisement -

Latest Posts

Don't Miss