International Stories: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ಕೆಲ ದೇಶಗಳ ರೂಲ್ಸ್ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನ ತಿಳಿಯೋಣ ಬನ್ನಿ..
ಭಾರತದಲ್ಲಿ ಪ್ರತಿದಿನ ಪಕ್ಷಿಗಳಿಗೆ ಧಾನ್ಯವನ್ನು ಹಾಕಿ, ಅದಕ್ಕಾಗಿ ನೀರು ಇಡಿ ಎಂದು ಹೇಳಲಾಗುತ್ತದೆ. ಆದರೆ ವೆನಿಸ್ ದೇಶದಲ್ಲಿ ನೀವೇನಾದರೂ ಅಪ್ಪಿ ತಪ್ಪಿ ಪಾರಿವಾಳಗಳಿಗೆ ಧಾನ್ಯ ಅಥವಾ ಯಾವುದೇ ತಿಂಡಿಗಳನ್ನು ಹಾಕಿದ್ರೆ, ದಂಡ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕಾಗುತ್ತದೆ.
ಯುಎಸ್‌ನಲ್ಲಿ ಕಿಂಡರ್ ಸರ್ಪೈಸ್ ಅನ್ನುವ ಚಾಕೋಲೇಟ್ ಮಾರರಾಟವನ್ನು ನಿರ್ಭಂದಿಸಲಾಗಿತ್ತು. ಏಕೆಂದರೆ, ಇದರಲ್ಲಿ ಪುಟ್ಟ ಪುಟ್ಟ ಆಟಿಕೆ ಇರುತ್ತದೆ. ಈ ಆಟಿಕೆಯನ್ನು ಮಕ್ಕಳು ಅಪ್ಪಿತಪ್ಪಿ ನುಂಗಿಬಿಟ್ಟರೆ ಅನ್ನೋ ಭಯದಿಂದ ಆ ಚಾಕೋಲೇಟ್ ಮಾರಾಟಕ್ಕೆ ಮುಎಸ್ ನಿಶೇಧ ಹೇರಿದೆ. ಇದಿಗ ದೊಡ್ಡ ದೊಡ್ಡ ಆಟಿಕೆ ಇರುವ ಕಿಂಡರ್ ಸರ್ಪೈಸ್ ಮಾರಲು ಅವಕಾಶ ಸಿಕ್ಕಿದೆ.
ಥೈಲ್ಯಾಂಡ್‌ನಲ್ಲಿ ರಾಜನಿರುವ ಕಾಯಿನ್ ಮೇಲೆ ಅಪ್ಪಿ ತಪ್ಪಿ ಕಾಲಿಟ್ಟರೆ ಅಥವಾ ನಡೆದರೆ, ಅದನ್ನು ಅಪರಾದವೆಂದು ಪರಿಗಣಿಸಲಾಗುತ್ತದೆ. ಮತ್ತು ಅಂಥವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.
ಭಾರತದಲ್ಲಿ ಪತಿಯಾದವನು ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ, ಪತ್ನಿ ಕೋಪಿಸಿಕೊಳ್ಳುತ್ತಾಳೆ ಅಷ್ಟೆ. ಪತಿ ಗಿಫ್ಟ್ ತಂದು ಕೊಟ್ಟ ಬಳಿಕ, ಮತ್ತೆ ಹಸನ್ಮುಖಿಯಾಗಬಹುದು. ಆದರೆ ಇಲ್ಲೊಂದು ದೇಶದಲ್ಲಿ ಪತಿ ಪತ್ನಿಯ ಬರ್ತ್‌ಡೇ ಮರೆತರೆ, ಅದನ್ನು ಕ್ರೈಮ್ ಎಂದು ಪರಿಗಣಿಸಲಾಗುತ್ತದೆ. ಸಮೋವಾ ಎಂಬ ದೇಶದಲ್ಲಿ ಪತಿ ಪತ್ನಿಯ ಬರ್ತ್‌ಡೇ ಮರೆತರೆ, ದಂಡ ಕಟ್ಟಬೇಕಾಗುತ್ತದೆ.
ಜಪಾನ್‌ನಲ್ಲಿ ನೀವು ದೇಹದ ಮೇಲೆ ಟ್ಯಾಯೂ ಹಾಕಿಸಿಕೊಂಡಿದ್ದಲ್ಲಿ, ಅದು ಮುಚ್ಚಿಹೋಗುವಂತೆ ಬಟ್ಟೆ ಧರಿಸಬೇಕು. ಇಲ್ಲವಾದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಏಕೆಂದರೆ, ಇಲ್ಲಿ ಯಾಕುಜಾ ಎಂಬ ದರೋಡೆಕೋರರ ಪಡೆಯವರು ಹೆಚ್ಚು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಹಾಗಾಗಿ ಟ್ಯಾಟೂ ಹಾಕಿಸಿಕೊಂಡರೆ, ಅದು ಯಾರಿಗೂ ಕಾಣದಂತೆ ಬಟ್ಟೆ ಧರಿಸಬೇಕು. ಇಲ್ಲವಾದಲ್ಲಿ, ಇಲ್ಲಿ ಸರ್ಕಾರಿ ಕಚೇರಿ, ಹೊಟೇಲ್ ಸೇರಿ ಹಲವು ಕಡೆ ಎಂಟ್ರಿ ಸಿಗುವುದಿಲ್ಲ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..