Saturday, June 21, 2025

Latest Posts

Health Tips: ಈ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಪಪ್ಪಾಯಿ ಸೇವನೆ ಮಾಡಲೇಬೇಡಿ

- Advertisement -

Health Tips: ಸಿಹಿಯಾದ, ರುಚಿಯಾದ, ಆರೋಗ್ಯಕರವೂ ಆದ ಹಣ್ಣುಗಳಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಕೆಲವರಿಗೆ ಈ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ಕೆಲವರಿಗೆ ಈ ಹಣ್ಣೆಂದರೆ ಅಷ್ಟಕ್ಕಷ್ಟೆ. ಪಪ್ಪಾಯಿ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇದ್ದರೆ, ಪಪ್ಪಾಯಿ ಹಣ್ಣಿನ ಸೇವನೆ ಮಾಡಲೇಬಾರದು. ಹಾಗಾದ್ರೆ ಯಾರು ಪಪ್ಪಾಯಿ ಹಣ್ಣಿನ ಸೇವನೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಗರ್ಭಿಣಿಯರು ಪಪ್ಪಾಯಿ ಸೇವನೆ ಮಾಡಬೇಡಿ: ಗರ್ಭಿಣಿಯರು ಪಪ್ಪಾಯಿ ಸೇವನೆ ಮಾಡಬಾರದು ಅಂತಾ ಎಲ್ಲರಿಗೂ ಗೊತ್ತು. ಇದರಿಂದ ಅಬಾಾರ್ಷನ್ ಆಗುವ ಸಾಧ್ಯತೆ ಇರುತ್ತದೆ. ಏಕೆಂದರೆ, ಪಪ್ಪಾಯಿ ಹಣ್ಣು ಉಷ್ಣವಾಗಿದ್ದು, ಇದರ ಸೇವನೆಯಿಂದ ಋತುಸ್ರಾವವಾಗುತ್ತದೆ. ಹಾಗಾಗಿಯೇ ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನಬಾರದು ಅಂತಾ ಹೇಳುವುದು. ಮತ್ತು ಋತುಚಕ್ರ ಸರಿಯಾಗಿ ಆಗದಿದ್ದಲ್ಲಿ, ಪಪ್ಪಾಯಿ ಸೇವಿಸುವಂತೆ ಹೇಳಲಾಗುತ್ತದೆ.

ಕಿಡ್ನಿ ಕಲ್ಲು. ಕಿಡ್ನಿಯಲ್ಲಿ ಕಲ್ಲು ಇದ್ದರೆ, ಅಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಸೇವನೆ ಮಾಡಬಾರದು. ಇದರಿಂದ ಕಲ್ಲಿನ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಪಪ್ಪಾಯಿಯಲ್ಲಿರುವ ವಿಟಾಮಿನ್ ಸಿ ಅಂಶವೇ ಇದಕ್ಕೆ ಕಾರಣವಾಗಿದ್ದು, ಪಪ್ಪಾಯಿ ತಿಂದ್ರೆ, ಕಿಡ್ನಿ ಕಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ.

ನಿಮಗೆ ಲೋ ಶುಗರ್ ಇದ್ದಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಬೇಡಿ: ಶುಗರ್ ಇದ್ದವರು ಪಪ್ಪಾಯಿ ಹಣ್ಣಿನ ಸೇವನೆಯನ್ನು ಮಿತವಾಗಿ ಮಾಡಿದ್ದಲ್ಲಿ, ಆರೋಗ್ಯಕ್ಕೆ ಉತ್ತಮ. ಆದರೆ ಲೋ ಶುಗರ್ ಇದ್ದಾಗ ನೀವು ಪಪ್ಪಾಯಿ ಸೇವನೆ ಮಾಡಿದರೆ, ಅದರಿಂದ ನಿಮ್ಮ ದೇಹದ ಶುಗರ್ ಲೆವಲ್ ಇನ್ನೂ ಕಡಿಮೆಯಾಗಿ ನಿಮ್ಮ ಜೀವಕ್ಕೆ ಇದು ಹಾನಿ ಮಾಡಬಹುದು. ಹಾಗಾಗಿ ಲೋ ಶುಗರ್ ಇದ್ದಲ್ಲಿ ಪಪ್ಪಾಯಿ ಸೇವನೆ ಮಾಡಬೇಡಿ.

ಹೃದಯದ ಸಮಸ್ಯೆ: ನಿಮ್ಮ ಹೃದಯದ ಆರೋಗ್ಯ ಸರಿಯಾಗಿ ಇಲ್ಲ. ಅಥವಾ ಹೃದಯ ಬಡಿತ ನಾರ್ಮಲ್ ಆಗಿಲ್ಲ ಎಂದಲ್ಲಿ, ಪಪ್ಪಾಯಿ ಸೇವನೆ ಮಾಡಬೇಡಿ. ಆದರೆ ನೀವು ಆರೋಗ್ಯವಾಗಿದ್ದೀರಿ ಎಂದಲ್ಲಿ, ನೀವು ಪಪ್ಪಾಯಿ ಹಣ್ಣಿನ ಸೇವನೆ ಮಾಡಿದ್ದಲ್ಲಿ, ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

- Advertisement -

Latest Posts

Don't Miss