Saturday, July 5, 2025

Latest Posts

‘ಈ ಸುದ್ದಿ ನಿಜವೇ ಆಗಿದ್ದರೆ ಇದು ಕರ್ನಾಟಕದ ಪಾಲಿಗೆ ಕಪ್ಪುಚುಕ್ಕೆ‌’

- Advertisement -

Political News: ಲೋಕಸಭೆ ಕಲಾಪ ನಡೆಯುತ್ತಿರುವಾಗಲೇ, ಸಂಸತ್ತಿನಲ್ಲಿ ಮೇಲಿನಿಂದ ಜಿಗಿದ ಇಬ್ಬರು, ಅಶ್ರುವಾಯು ಸಿಡಿಸಿದ ಘಟನೆಯನ್ನು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಮತ್ತೆ ಇಂಥ ಘಟನೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ನೂತನ ಸಂಸತ್ ಭವನದ ಒಳಗೆ ಇಬ್ಬರು ದುಷ್ಕರ್ಮಿಗಳು‌ ಅಕ್ರಮ ಪ್ರವೇಶ ಮಾಡಿ ಅಶ್ರುವಾಯು ಸಿಡಿಸಿದ್ದಾರೆ. ಸಂಸತ್ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ದುಷ್ಕರ್ಮಿಗಳು ಸದನಕ್ಕೆ ಅಕ್ರ‌ಮ ಪ್ರವೇಶ ಮಾಡಿರುವುದು ಅತಿ ದೊಡ್ಡ ಭದ್ರತಾ ವೈಫಲ್ಯ.

ದುಷ್ಕರ್ಮಿಗಳು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದರು ಎನ್ನುವ ಮಾಹಿತಿಯಿದೆ‌. ಇದು ನಿಜವೇ ಆಗಿದ್ದರೆ ಇದು ಕರ್ನಾಟಕದ ಪಾಲಿಗೆ ಕಪ್ಪುಚುಕ್ಕೆ‌. ಸಂಸತ್ ದಾಳಿ ನಡೆದು ಇಂದಿಗೆ 22 ವರ್ಷ. ಈ ಕರಾಳ ದಿನದಂದೆ ದುಷ್ಕರ್ಮಿಗಳ ಸಂಸತ್ ಪ್ರವೇಶ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಭದ್ರತಾ ವೈಫಲ್ಯದ ಹೊಣೆ ಹೊರಬೇಕು ಮತ್ತು ಸಂಸತ್‌ನೊಳಗಿನ ದುಷ್ಕರ್ಮಿಗಳು ಅಶ್ರುವಾಯು ಸಿಡಿಸಿದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು‌ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ತೆರಳಿದ ಮಾಲಾಧಾರಿಗಳು: ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ

ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ

ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್‌ ಸಿಡಿಸಿದ ಅನಾಮಿಕ

- Advertisement -

Latest Posts

Don't Miss