Friday, April 11, 2025

Latest Posts

ಈ ಗಿಡ ನಿಮ್ಮ ಮನೆಯ ಬಳಿ ಇದ್ದರೆ ಅದೃಷ್ಟ ನಿಮನ್ನು ಹುಡುಕಿಕೊಂಡು ಬರುತ್ತದೆ..!

- Advertisement -

Vastu plant:

ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ,ಸುಖ ಸಂತೋಷ ,ಸಮೃದ್ಧಿ ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಾಸ್ತು ಬಹಳ ಮುಖ್ಯ ,ಮನೆಯ ಸೂತ್ತ ಮುತ್ತ ಇರುವ ಕೆಲವು ಗಿಡಗಳು ನಮ್ಮ ಮೇಲೆ ಧನಾತ್ಮಕ ಶಕ್ತಿ ಪ್ರವೇಶ ಮಾಡಲು ಸಹಕಾರಿ ಯಾಗುತ್ತದೆ .ಹಾಗಾಗಿ ಮನೆಯ ಸುತ್ತಾಮುತ್ತಾ ಈ ಗಿಡಗಳನ್ನು ತಪ್ಪದೆ ನೆಟ್ಟರೆ ನೀವು ನಿಮ್ಮ ಜೀವನದಲ್ಲಿ ಅದೃಷ್ಟದ ದಿನಗಳನ್ನು ಕಾಣಬಹುದು

ಬಾಳೇಗಿಡ :
ನಿಮಗೆ ಮದುವೆಗೆ ತಡೆಯಾಗುತ್ತಿದ್ದರೆ ,ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕಾದರೆ ಮನೆಯ ಇಂದಿನ ಭಾಗದಲ್ಲಿ ಬಾಳೆ ಸಸ್ಯವನ್ನು ತಪ್ಪದೆ ನೆಡಬೇಕು, ಹಾಗೂ ಪ್ರತಿ ದಿನ ಬಾಳೇಗಿಡಕ್ಕೆ ಪೂಜೆ ಮಾಡಬೇಕು ಇದರಿಂದ ನಿಮ್ಮ ಮನೆ ಅಭಿವೃದ್ಧಿ ಯಾಗುತ್ತದೆ .

ತುಳಸಿ ಗಿಡ :
ತುಳಸಿ ಸಸ್ಯ ಬಹಳ ಪವಿತ್ರವಾದದ್ದು ಎಂದು ನಾವು ಪುರಾಣಗಳಲ್ಲಿ ಓದಿದ್ದೇವೆ ಇದರಲ್ಲಿ ಔಷಧೀಯ ಗುಣವಿರುತ್ತದೆ .ನಿಮ್ಮ ಮನೆಯ ಮುಂದೆ ತುಳಸಿ ಸಸ್ಯ ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ .

ದಾಳಿಂಬೆ ಸಸ್ಯ :
ಮನೆಯಲ್ಲಿ ದಾಳಿಂಬೆ ಸಸ್ಯ ನೆಡುವುದರಿಂದ ರಾಹು ಕೇತುವಿನ ನಕಾರಾತ್ಮಕ ಶಕ್ತಿ ಹಾಗೂ ತಂತ್ರ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ . ಆದಕಾರಣ ದಾಳಿಂಬೆ ಸಸ್ಯವನ್ನು ನಿಮ್ಮ ಮನೆಯ ಬಳಿ ನೆಟ್ಟರೆ ಬಹಳ ಶುಭಫಲಗಳು ಸಿಗುತ್ತದೆ .

ಶಮಿ ಗಿಡ :
ಮನೆಯ ಬಳಿ ಶಮಿ ಗಿಡ ನೆಡುವುದರಿಂದ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು ಪ್ರತಿ ದಿನ ಈ ಗಿಡಕ್ಕೆ ಪೂಜೆ ಮಾಡಿದರೆ ಹೆಚ್ಚು ಫಲಗಳು ಸಿಗುತ್ತದೆ .

ದಾಸವಾಳ ಗಿಡ :
ದಾಸವಾಳದ ಗಿಡಕ್ಕೆ ಸೂರ್ಯ ಹಾಗೂ ಮಂಗಳ ಗ್ರಹಕ್ಕೆ ಸಂಬಂಧ ವಿರುತ್ತದೆ . ಹನುಮಂತನಿಗೆ ದಾಸವಾಳದ ಹೊ ಅರ್ಪಣೆ ಮಾಡುವುದರಿಂದ ಮಂಗಳ ಗ್ರಹ ಪ್ರಸ್ಸನ್ನ ಗೊಳ್ಳುತ್ತದೆ . ಪ್ರತಿ ದಿನ ದಾಸವಾಳದ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದ ವೃದ್ಧಿಯಾಗುತ್ತದೆ .

ತಪ್ಪದ್ದೆ ಈ ಸಸ್ಯಗಳನ್ನು ನಿಮ್ಮ ಮನೆಯ ಸುತ್ತಾ ಮುತ್ತಾ ಮನೆಯ ಹಿಂದೆ ಅಥವಾ ಮನೆಯ ಮುಂದೆ ನೆಟ್ಟರೆ ಅದೃಷ್ಟದ ದಿನಗಳು ನಿಮ್ಮ ದಾಗುತ್ತದೆ .

ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!

ನಿಮ್ಮ ಮನೆಯಲ್ಲಿ ತುಳಸಿ ಮತ್ತು ಮನಿ ಪ್ಲಾಂಟ್ ಇರುವ ದಿಕ್ಕು ನೋಡಿ..ಈಗಿದ್ದರೆ ತಕ್ಷಣ ಬದಲಾಯಿಸಿ..!

ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

- Advertisement -

Latest Posts

Don't Miss