Wednesday, September 11, 2024

Latest Posts

ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

- Advertisement -

ಡಿಸೆಂಬರ್ 16ಕ್ಕೆ ಪ್ರಾರಂಭ ವಾಗುವ ಧನುರ್ಮಾಸ ಜನವರಿ 14ನೇ ತಾರಿಕ್ಕು ಮುಗಿಯುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಬದಲಾಗಿ ದೇವತಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ಸಾಕ್ಷಾತ್ ಕೃಷನು ನಾನು ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿಕೊಂಡಿದ್ದಾನೆ, ಅಂತಹ ಅದ್ಭುತವಾದ ಮಾಸ. ಹಾಗಾದರೆ ಧನುರ್ಮಾಸದ ವಿಶೇಷತೆ ಏನು..? ಈ ಮಾಸದಲ್ಲಿ ಯಾವರೀತಿ ಭಗವಂತನ ಆರಾಧನೆಯನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ.

ಯಾರಿಗೆ ಸಂತಾನ ಭಾಗ್ಯ ಇರುವುದಿಲ್ಲವೋ ಹಾಗೂ ಕಂಕಣಭಾಗ್ಯ ಕೂಡಿ ಬರುವುದಿಲ್ಲವೋ ಜೀವನದಲ್ಲಿ ಅದೃಷ್ಟ ಇಲ್ಲದೆ ಏಳಿಗೆಯನ್ನು ಕಾಣದೆ ಇರುವವರು, ಭಗವಂತನ ಕೃಪೆಗೆ ಪಾತ್ರರಾಗಲು ಈ ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬೇಕು ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಶಿವ ,ವಿಷ್ಣು ಹಾಗೂ ದೇವಿಯ ಅನುಗ್ರಹ ಗೋಸ್ಕರ ಯಾವ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ .

ಸೂರ್ಯನು ಧನಸ್ಸು ರಾಶಿಗೆ ಪ್ರವೇಶ ಮಾಡಿ ಎಷ್ಟುದಿನಗಳ ಕಾಲ ಧನಸ್ಸು ರಾಶಿಯಲ್ಲೇ ಇರುತ್ತಾನೋ ಅಷ್ಟು ಕಾಲವನ್ನು ಧನುರ್ಮಾಸ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಧನುರ್ಮಾಸ ಎಂದ ಕೂಡಲೇ ನಮಗೆ ಅರಿವಿಗೆ ಬರುವುದು , ಸೂರ್ಯ ಉದಯಿಸುವ ಮುನ್ನವೇ ಎದ್ದು , ಶುದ್ಧ ನೀರಿನಿಂದ ಸ್ನಾನವನ್ನು ಮಾಡಿ ವಿಷ್ಣು ದೇವರಿಗೆ ಸಂಬಂದಿಸಿದ ಆಲಯಗಳಿಗೆ ತೇರಳಿ , ಭಗವಂತನ ದರ್ಶನವನ್ನು ಪಡೆದು ಅರಳಿ ಮರಕ್ಕೆ ಪ್ರದಕ್ಷಣೆಯನ್ನು ಮಾಡುವುದು ಸರಳವಾದ ನಿಯಮಗಳು , ಈ ನಿಯಮಗಳನ್ನು ಧನುರ್ಮಾಸದಲ್ಲಿ ಬೆಳಗಿನ ಜಾವವೇ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ , ಪಾಲಿಸಿದ್ದೇ ಆದ್ರೆ ಭಗವಂತನು ನಿಮ್ಮ ಕೋರಿಕೆಗಳನ್ನೂ ನೆರವೇರಿಸುತ್ತಾನೆ .

ಮೋಕ್ಷ ಬೇಕೆನ್ನುವವರು ಸಹ ಈ ಮಾಸದಲ್ಲಿ ಭಗವಂತನ ಆರಾಧನೆಯನ್ನು ವಿಶೇಷವಾಗಿ ಮಾಡಿಕೊಳ್ಳಬಹುದು ಈ ವಿಶೇಷ ದಿನಗಳಲ್ಲಿ ಶ್ರೀಕೃಷ್ಣನಿಗೆ ಅಂದರೆ ನಾರಾಯಣನಿಗೆ ಆಲಿನ ಅಭಿಷೇಕವನ್ನು ಮಾಡಿದರೆ , ಅವರ ದೌರ್ಬಾಗ್ಯಗಳು ದೂರವಾಗುತ್ತದೆ ಹಾಗೂ ಅದೃಷ್ಟ ನಿಮ್ಮ ಕೈ ಇಡಿಯುತ್ತದೆ ಯೋಗಗಳು ಪ್ರಾಪ್ತಿಯಾಗುತ್ತದೆ, ಮದುವೆ ವಿಳಂಬ ವಾಗುತ್ತಿರುವವರು ಈ ಮಾಸದಲ್ಲಿ ಕಾತ್ಯಾಯಿನಿ ವ್ರತ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಂತಾನ ಭಾಗ್ಯ ವಿಲ್ಲದೆ ಇರುವವರು ಈ ಮಾಸದಲ್ಲಿ ವ್ರತ ಮಾಡಿದರೆ ಖಂಡಿತ ಸಂತಾನವಾಗುತ್ತದೆ. ಈ ಮಾಸ ದರಿದ್ರ ವಂತರನ್ನು ಸಹ ಅದೃಷ್ಟವಂತರನ್ನಾಗಿ ಮಾಡುತ್ತದೆ.

ಈ ಮಾಸದಲ್ಲಿ ಭಗವಂತನಿಗೆ ನಿಯಮ ನಿಷ್ಠೆಯಿಂದ ನಿತ್ಯವೂ ಪ್ರೀತಿಯಿಂದ ತ್ರಿಕರಣ ಶುದ್ಧಿಯಾಗಿ ದೇವರ ಸೇವೆಯನ್ನು ಮಾಡುತ್ತಾರೋ ಅಂಥವರ ಕೋರಿಕೆಗಳು ಈಡೇರುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತದೆ ಯಾರಿಗೆ ಭಗವಂತನ ಆಲಯಕ್ಕೆ ತೇರಳಿ ದೇವರ ಸೇವೆಯನ್ನು ಮಾಡುವುದಕ್ಕೆ ಆಗುವುದಿಲ್ಲವೋ ಅಂಥವರು ನಿಮ್ಮ ಮನೆಯಲ್ಲಿ ವಿಷ್ಣು ಸಹಸ್ತ್ರನಾಮ ಹಾಗೂ ಲಕ್ಷ್ಮಿಅಷ್ಟೋತ್ತರ ಪಾರಾಯಣವನ್ನು ಮಾಡುತ್ತ ಹಾಲನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿದರೆ ದೇವರ ಅನುಗ್ರಹ ಬಹಳ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ. ಇಷ್ಟ ದೇವರ ಆರಾಧನೆ ಮಾಡಲು ಈ ಮಾಸ ಬಹಳ ಶ್ರೇಷ್ಠ ವಾದದ್ದು ಆದ್ದರಿಂದ ಈ ಮಾಸದಲ್ಲಿ ಪ್ರತಿಯೊಬ್ಬರೂ ಕೂಡ ಇಷ್ಟ ದೇವರ ಆರಾಧನೆ ಮಾಡಿ ಸಂಕಲ್ಪವನ್ನು ಮಾಡಿಕೊಂಡು ಭಗವಂತನ ಸೇವೆಯನ್ನು ಮಾಡಬೇಕು.

ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನು ಸಹ ನೀವು ಮಾಡಬಹುದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುದ್ಧ ನೀರಿನಿಂದ ಸ್ನಾನವನ್ನು ಮಾಡಿ ಹಣೆಗೆ ವಿಬೂದಿಯನ್ನು ಧರಿಸಿ ಪ್ರತಿನಿತ್ಯವೂ ಕೂಡ ಯಾತ ಶಕ್ತಿಯಾಗಿ ಶಿವನ ಆರಾದನೆ ಮಾಡಿದರೆ ಈ ಜನ್ಮದಲ್ಲಿ ನೀವು ಕೋರಿಕೊಂಡ ಕೋರಿಕೆಗಳು ನೆರವೇರುತ್ತದೆ,ಮೋಕ್ಷ  ಪ್ರಾಪ್ತಿಯಾಗುತ್ತದೆ, ಈ ಮಾಸದಲ್ಲಿ ದೇವಿಯ ಆರಾಧನೆ ಮಾಡಿದರೆ ದೇವಿಯ ಅನುಗ್ರಹ ಸಿಗುತ್ತದೆ, ಲಲಿತ ಸಹಸ್ತ್ರನಾಮ ಪಾರಾಯಣ ಮಾಡಿ ಅಮ್ಮನವರ ಅರ್ಚನೆ ಮಾಡಿದರೆ ಅಮ್ಮನವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಹಾಗೆಯೆ ಈ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸಬಾರದು , ಈ ಮಾಸದಲ್ಲಿ ದೇವರ ಕಥೆಗಳು ಮತ್ತು ಭಕ್ತಿ ಗೀತೆಗಳನ್ನು ಆಲಿಸುವುದು ಮಾಡಿದರೆ ಅತ್ಯಂತ ಶುಭ ಎನ್ನಬಹುದು ಸಾದ್ಯವಾದರೆ ಭಾಗವತ ಕೇಳಿದರೆ, ದಾನ ಧರ್ಮಗಳನ್ನು ಮಾಡಿದರೆ ಪುಣ್ಯ ಫಲ ಪ್ರಾಪ್ತಿ ಯಾಗುತ್ತದೆ. ಈ ಮಾಸದಲ್ಲಿ ದೇವರಿಗೆ ಸಿಹಿ ಪೊಂಗಲ್ ಅನ್ನು ನೈವೇದ್ಯವಾಗಿ ಅರ್ಪಿಸಬೇಕು. ನಾವು ಹೇಳುವ ಈ ನಿಯಮವನ್ನು ಪಾಲಿಸುತ್ತ ಬಂದರೆ ಸುಖ ,ಶಾಂತಿ ನೆಮ್ಮದಿ ನಿಮ್ಮದಾಗಿರುತ್ತದೆ, ಅದೃಷ್ಟ ಪ್ರಾಪ್ತಿಯಾಗುತ್ತದೆ.

ನಿಮ್ಮ ಜಾತಕದಲ್ಲಿ ದೋಷ ನಿವಾರಣೆಗೆ ನವಗ್ರಹ ಸ್ತೋತ್ರಗಳನ್ನು ಪಠಿಸಿ…!

ಆದಿಲಕ್ಷ್ಮಿ ಇತಿಹಾಸ…!

ಇಂಥ ವಿಷಯಗಳನ್ನ ಮಾತ್ರ ಯಾರಲ್ಲಿಯೂ ಹೇಳಬೇಡಿ..

 

- Advertisement -

Latest Posts

Don't Miss