‘ಈ ಪರಿಸ್ಥಿತಿ ಹೀಗೆ ಮುಂದುವರಿದರೆ, ಪ್ರತ್ಯೇಕ ರಾಷ್ಟ್ರಕ್ಕಾಗಿ ನಾವು ಬೇಡಿಕೆ ಇಡುವ ಅನಿವಾರ್ಯತೆ ಬರುತ್ತದೆ’

New Delhi: ಸಂಸದ ಡಿ.ಕೆ.ಸುರೇಶ್ ಇಂದು ದೆಹಲಿಯಲ್ಲಿ ಮಾತನಾಡಿದ್ದು, ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ. ಇಲ್ಲಿ ಅಭಿವೃದ್ಧಿ ಮಾಡಬೇಕಾದ ಹಣವನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆಂದು ಹೇಳಿದ್ದಾರೆ.

ನಮ್ಮ ದುಡ್ಡು ನಮಗೆ ಕೊಟ್ರೆ ಸಾಕಾಗಿದೆ. ನಮ್ಮ ಬೇಡಿಕೆ ಏನಿದೆ, ಜಿಎಸ್‌ಟಿ ಮತ್ತು ರಾಜ್ಯದಿಂದ ಬರ್ತಕ್ಕಂಥ ಕಸ್ಟಮ್ಸ್ , ಅದರ ಪಾಲನ್ನು ನಮಗೆ ಸಮವಾಗಿ ಕೊಡಬೇಕಾಗಿದೆ. ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯವಾಗುತ್ತಿರುವುದನ್ನು ನಾವು ಪ್ರತೀ ಹಂತದಲ್ಲೂ ನೋಡುತ್ತಿದ್ದೇವೆ. ಒಟ್ಟಾರೆಯ ನಮ್ಮ ಪಾಲಿನ ಅಭಿವೃದ್ಧಿಯ ಹಣ, ಉತ್ತರ ಭಾರತದ ಕಡೆ ತೆಗೆದುಕೊಂಡು ಹೋಗಿ ಹಂಚುD.ತ್ತಿದ್ದಾರೆ.

ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯವಾಗುತ್ತಿದೆ. ನಾವು ಮುಂದೆ ಅದನ್ನು ಖಂಡಿಸದಿದ್ದಲ್ಲಿ, ನಾವು ಮುಂದೊಂದು ದಿನ ಪ್ರತ್ಯೇಕ ರಾಷ್ಟ್ರಕ್ಕೂ ಕೂಡ ಬೇಡಿಕೆ ಇಡಬೇಕಾದ ಅನಿವಾರ್ಯ ಬಂದೊದಗುವ ಸಾಧ್ಯತೆ ಇರುತ್ತದೆ. ಇಂಥದ್ದೊಂದು ಪ್ರರಿಸ್ಥಿತಿಯನ್ನು ಹಿಂದಿ ಪ್ರದೇಶದವರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಇವತ್ತಿನ ಹಣಕಾಸು ವ್ಯವಸ್ಥೆಯನ್ನು ಹಂಚುತ್ತಿರುವಂಥ ಪರಿಸ್ಥಿತಿಯನ್ನು ನೋಡಿದರೆ, ನಮಗೆ ಅನ್ಯಾಯ ಮಾಡುವಂಥದ್ದು ಎಂದು ಮತ್ತೆ ಡಿ.ಕೆ.ಸುರೇಶ್ ನುಡಿದಿದ್ದಾರೆ.

‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’

2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

About The Author