‘ಈ ಕೆಲಸ ಆಗದೇ ಹೋದಲ್ಲಿ ರಾಜೀನಾಮೆ ಕೊಡಿ, ನಾವೇ ಸೀರೆ ಬಳೆ ಕೊಟ್ಟು ಬಿಳ್ಕೊಡುತ್ತೀವಿ’

Nayakana Hatti: ನಾಯಕನಹಟ್ಟಿ : ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರುನಾಡು ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ಕೆ. ಟಿ. ಶಿವಕುಮಾರ್ ಆರೋಪಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಬಂದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಜನರಿಗೆ ಮಲತಾಯಿ ಧೋರಣೆ ತೋರಿಸುವಲ್ಲಿ ಯಶಸ್ವಿಯಾಗಿದೆ. ನಾರಾಯಣಸ್ವಾಮಿ ಪ್ರಧಾನಿಗಳ ಹತ್ತಿರ ಬಳಿ ಹೋಗಲು ಅಥವಾ ಸಂಕೋಚನ? ಬರುವ ಮಾರ್ಚ ತಾವುಗಳು ಹಣವನ್ನು ಬಿಡುಗಡೆ ಮಾಡಿಸಿ ಚಿತ್ರದುರ್ಗ ಜಿಲ್ಲೆಯ ಜನರನ್ನು ಋಣವನ್ನು ತೀರಿಸಬೇಕು. ಇಲ್ಲದೆ ಹೋದರೆ ತಾವುಗಳು ರಾಜನಾಮೆಯನ್ನು ಕೊಟ್ಟು, ತಾವು ತಮ್ಮ ಕ್ಷೇತ್ರದ ಆನೇಕಲ್ ನಮ್ಮಿಂದ ಬೀಳ್ಕೊಡುಗೆ ಪಡೆದು ಸೀರೆ ಬಳೆ ಕೊಡ್ತೀವಿ ತೆಗೆದುಕೊಂಡು ಹೋಗಿ ನೇರವಾಗಿ ಗುಡುಗಿದರು.

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಲರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬೇಗ ಮುಗಿಸಿ ಕೆರೆಗಳಿಗೆ ನೀರು ತರಿಸುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರುಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಣ ಬಿಡುಗಡೆ ಮಾಡುತ್ತೇನೆಂದು ಹೇಳಿ ಹೋಗಿದ್ದರು ಆದರೆ ಹಣ ಬಿಡುಗಡೆ ಮಾಡಲಿಲ್ಲ ಮಾತು ತಪ್ಪಿದ ನರೇಂದ್ರ ಮೋದಿ ಎಂದು ಬಣ್ಣಿಸಿದರು.

ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಮುದಿಯಪ್ಪ ಮಾತನಾಡಿ, ನಾಯಕನಹಟ್ಟಿ ಹೋಬಳಿ 13,000 ಕ್ಕೆ ಹೆಚ್ಚು ಪ್ರದೇಶವನ್ನು ಬಿಟ್ಟು ಕೊಟ್ಟಿದ್ದೇವೆ ಹೋಬಳಿಯ ಜನರ ಈ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಭೂಮಿ ತ್ಯಾಗ ಮಾಡಿರುವ ಇಲ್ಲಿನ ಸಮುದಾಯದ ಗಳಿಗೆ ಪರ್ಯಾಯವಾಗಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನ ಮಾಡಿಲ್ಲ ಎಂಬುದು ನೋವಿನ ಸಂಗತಿ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟೇಲ್ ಜಿಎಂ ತಿಪ್ಪೇಸ್ವಾಮಿ, ಬಸವ ರೆಡ್ಡಿ, ಭೂತಯ್ಯ, ಹಾಗೂ ಪ್ರಮುಖ ರೈತರು, ಹಾಗೂ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ಅಧ್ಯಕ್ಷರು ಕಾರ್ಯದರ್ಶಿ ಪೋಲಿಸ್ ಇಲಾಖೆಯವರು ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಾಯಕನಟಿ ಹೋಬಳಿ ಅಧ್ಯಕ್ಷರು ಈ ನಾಗರಾಜ್ ಮೀಸೆ ಜಿಲ್ಲಾ ಕಾರ್ಯದರ್ಶಿ ನವೀನ ಜಿಲ್ಲಾ ಉಪಾಧ್ಯಕ್ಷರು ಪಟೇಲ್ ಮಲ್ಲಿಕಾರ್ಜುನ ರ ತಾಲೂಕು ಅಧ್ಯಕ್ಷರು ಎಸ್ ಪ್ರಸನ್ನ ಮತ್ತು ಪಾದಗೆಟ್ಟೆಯಿಂದ ಒಳ ಮಠ ಅಂಬೇಡ್ಕರ್ ಸರ್ಕಲ್ ನಾಯಕನಹಟ್ಟಿ ಈ ಸಂದರ್ಭದಲ್ಲಿ ಬಂದಿಗೆ 33 ಸಂಘಟನೆಗಳು ಅಧ್ಯಕ್ಷರು ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು
ಎತ್ತು ಗಾಡಿ, ಟ್ರ್ಯಾಕ್ಟರ್, ಕುರಿ ಮೇಕೆಗಳು ಬಂದ್ ಗೆ ಬೆಂಬಲ ಸೂಚಿಸಿದವು.

ವರದಿ:- ಆಂಜನೇಯ ನಾಯಕನಹಟ್ಟಿ

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್

ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್

About The Author