Hassan News: ಹಾಸನ : ಸರ್ಕಾರ, ಡಿಸಿ, ಎಸ್ಪಿ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿಗೆ ನೀರು ಹರಿಸುವ ವಿಚಾರ ಕುರಿತು, ಸ್ಥಳೀಯ ರೈತರು ಮತ್ತು ಜೆಡಿಎಸ್ ಪಕ್ಷದವರು ಸೇರಿ, ಪ್ರತಿಭಟನೆ ನಡೆಸಿದ್ದು, ತುಮಕೂರಿಗೆ ನೀರು ಕೊಡುತ್ತಿರುವುದಕ್ಕೆ ನಮಗೆ ಬೇಸರವಿಲ್ಲ. ನಮಗೂ ನೀರು ಕೊಡಿ ಎಂದು ಹಾಸನ ರೈತರು ಆಗ್ರಹಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಹೆಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲಾಧಿಕಾರಿಗೆ ಯಾರು ಡ್ರಾಫ್ಟ್ ಮಾಡಿಕೊಟ್ಟರೋ ಗೊತ್ತಿಲ್ಲ. ಪೊಲೀಸರು ದೊಣ್ಣೆ, ಬಡಿಗೆ ತಗೊಳಿ ಅಂತ ಡಿಸಿ, ಎಸ್ಪಿ ಹೇಳಿದ್ದಾರೆ. ಯಾರು ದೊಣ್ಣೆ, ಬಡಿಗೆ ತಗೊಳ್ತಾರೆ ನೋಡೋಣ. ನಾಳೆ ಸಂಜೆಯೊಳಗೆ ನೀರು ಬಿಡದಿದ್ದರೆ ಪ್ರತಿ ತೂಬಿನ ಬಳಿ ಐನೂರು ಜನ ನಿಲ್ಲಿಸುತ್ತೀನಿ. ಜೆಸಿಬಿ ಮೂಲಕ ತೂಬಿನಿಂದ ನೀರು ಹರಿಸುತ್ತೇವೆ. ಅದು ಯಾರು ಬರ್ತಾರೆ ಬರಲಿ ನೋಡೋಣ ಎಂದು ರೇವಣ್ಣ ಚಾಲೆಂಜ್ ಮಾಡಿದ್ದಾರೆ.
ನಾಳೆ ಸಂಜೆಯವರೆಗೆ ಸಮಯ ಕೊಡ್ತಿನಿ. ಅಷ್ಟರಲ್ಲಿ ಹಾಸನ ಜಿಲ್ಲೆಗೂ ನೀರು ಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಏನಾದರೂ ಅನಾಹುತ ಆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ನೇರ ಹೊಣೆ. ಎ1 ಜಿಲ್ಲಾಧಿಕಾರಿ, ಎ2 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಹಿಂದೆ ದೊಡ್ಡಹಳ್ಳಿಯಲ್ಲಿ ಗೋಲಿಬಾರ್ ಆಗಿದೆ. ಹೊಳೆನರಸೀಪುರದಲ್ಲಿ ಲಾಠಿಚಾರ್ಜ್ ಆಗಿ ಆಗೀನ ಎಸ್ಪಿಗೆ ಹತ್ತು ವರ್ಷ ಜಾಮೀನು ಸಿಗಲಿಲ್ಲ. ಹಾಸನ ಜಿಲ್ಲೆಯಲ್ಲಿ ಎಮರ್ಜೆನ್ಸಿ ಏರಿದ್ದಾರೆ. ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಸನದಲ್ಲಿ ಎಮರ್ಜೆನ್ಸಿ ಹೇರಿದ್ದಾರೆ. ಕುಡಿಯುವ ನೀರಿಗೆ ಕಾಂಗ್ರೆಸ್‌ನವರು ಎಮರ್ಜೆನ್ಸಿ ಹೇರಿದ್ದಾರೆ, ಇದು ದುರಾದೃಷ್ಟ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.
ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ತುಮಕೂರಿಗೆ ನೀರು ಹರಿಸಲು ಜಿಲ್ಲೆಯ ರೈತರು ಜಮೀನು ಕಳೆದುಕೊಂಡಿದ್ದಾರೆ. ಮೀಟಿಂಗ್ ಮಾಡದೆ ನೀರು ಬಿಟ್ಟಿದ್ದಾರೆ, ಇವರಿಗೆ ನಾಚಿಕೆಯಾಗಬೇಕು. ನೀರು ಬಿಡದಿದ್ದರೆ ಜಿಲ್ಲೆಯಲ್ಲಿ ದಂಗೆ ಹೇಳಬೇಕಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಜಿಲ್ಲಾಧಿಕಾರಿ, ಎಸ್ಪಿ ನೇರ ಹೊಣೆ. ನಾಳೆ ಸಂಜೆ ಐದು ಗಂಟೆಯವರೆಗೆ ಸಮಯ ಅಷ್ಟೇ. ನೀರು ಬಿಡದಿದ್ದರೆ ಒಂದು ಕಡೆ ಗೊರೂರು ಡ್ಯಾಂಗೆ ಮುತ್ತಿಗೆ ಹಾಕುತ್ತೇವೆ. ಇನ್ನೊಂದು ಕಡೆ ಜಾಕ್ವೆಲ್ ಬಳಿ ಐನೂರು ಜನ ಸೇರಿ ನೀರು ಹರಿಸುತ್ತೇವೆ. ನಾವು ಯಾವುದೇ ಮನವಿ ಕೊಡಲ್ಲ, ನೇರವಾಗಿ ಹೇಳ್ತಿನಿ. ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋದರೆ ಒಳಗಡೆ ಹಾಕುಸ್ತಿನಿ ಅಂತಾರೆ. ತುಮಕೂರು ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ರೇವಣ್ಣ ಹರಿಹಾಯ್ದಿದ್ದಾರೆ.
3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!
ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.
ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ



