Tuesday, October 14, 2025

Latest Posts

ನಮ್ಮ ಮೆಟ್ರೋದಲ್ಲಿ 2 ಕಡೆ ಅಮೂಲ್‌ಗೆ ಮಳಿಗೆ ಕೊಟ್ರೆ 8 ಕಡೆ ನಂದಿನಿಗೆ ಮಳಿಗೆ ಕೊಡ್ತೀವಿ: ಡಿಸಿಎಂ ಡಿಕೆಶಿ

- Advertisement -

Bengaluru News: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಮೂಲ್‌ಗೆ ಮಳಿಗೆ ನೀಡಿದ್ದಕ್ಕೆ, ಬಿಜೆಪಿಗರು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ, ಇದೀಗ ಎಚ್ಚೆತ್ತುಕ“ೃಡಿರುವ ರಾಜ್ಯ ಸರ್ಕಾರ, ನಮ್ಮ ಮೆಟ್ರೋದಲ್ಲಿ 2 ಕಡೆ ಅಮೂಲ್‌ಗೆ ಮಳಿಗೆ ಕೊಟ್ರೆ 8 ಕಡೆ ನಂದಿನಿಗೆ ಮಳಿಗೆ ಕೊಡ್ತೀವಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಅವರು, ಬಿಎಂಆರ್‌ಸಿಎಲ್ ಅವರು ಗ್ಲೋಬಲ್ ಟೆಂಡರ್ ಕರೆದಿದ್ದರು. ಹಾಗಾಗಿ 10 ಕಡೆ ಅಂಗಡಿ ಬೇಕೆಂದು ಅಮೂಲ್ ಅರ್ಜಿ ಹಾಕಿತ್ತು. ಆದರೆ ನಾವೀಗ ಕೆಎಂಎಫ್‌ ಅವರಿಗೆ ಅರ್ಜಿ ಹಾಕಲು ಹೇಳಿದ್ದೇವೆ. ಹಾಗೆ ಅರ್ಜಿ ಹಾಕಿದರೆ, ನಾವು ಅವರಿಗೆ 8 ಮಳಿಗೆ ನೀಡಲು ಸಿದ್ಧರಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅಲ್ಲದೇ ಈಗಾಗಲೇ 2 ಕಡೆ ಅಮೂಲ್ ಅವರು ಮಳಿಗೆ ಓಪನ್ ಮಾಡಿದ್ದಾರೆ. ಅದನ್ನು ನಾವು ಪುನಃ ಮುಚ್ಚುವುದು ಸರಿಯಲ್ಲವೆಂದು, ಉಳಿದ 8ನ್ನು ನಂದಿನಿಯವರಿಗೆ ಅವಕಾಶ ನೀಡುವಂತೆ ಹೇಳಿದ್ದೇನೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಇನ್ನು ನಿನ್ನೆ ಅಮೂಲ್ ಮಳಿಗೆ  ನಮ್ಮ ಮೆಟ್ರೋದಲ್ಲಿ ತೆರೆಯುತ್ತಿದ್ದಂತೆ ಜೆಡಿಎಸ್ ಡಿಕೆಶಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿತ್ತು. ಕಮಿಷನ್‌ ಆಸೆಗೆ ಸ್ವಾಭಿಮಾನ ಮಾರಿಕೊಂಡ @DKShivakumar! ಡೂಪ್ಲಿಕೇಟ್‌ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ.. ಚುನಾವಣೆಗೂ ಮುಂಚೆ #SaveNandini , ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗೀ ಬಿಡುತ್ತಿದ್ದ ಡಿಕೆಶಿ, ಕಮಿಷನ್‌ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ.

ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ @INCKarnataka ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ. ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್‌ “ನಂದಿನಿ”ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿತ್ತು.

- Advertisement -

Latest Posts

Don't Miss