Thursday, December 5, 2024

Latest Posts

ನೀವು ಹೀಗಿದ್ದರೆ ನಿಮಗೆ ಆರ್ಥಿಕ ಸಮಸ್ಯೆ ಸದಾ ಕಾಡುತ್ತಿರುತ್ತದೆ..

- Advertisement -

Spiritual: ಜನ ದುಡಿಯುವುದೇ ದುಡ್ಡಿಗಾಗಿ, ಕೆಲವರು ಹೊಟ್ಟೆಗೆ, ಬಟ್ಟೆ ಖರೀದಿಸುವುದಕ್ಕೆ, ಇರಲೊಂದು ಸೂರಿಗಾಗಿ ದುಡಿಯುತ್ತಾರೆ. ಆದರೆ ಮತ್ತೆ ಕೆಲವರು ಅದಕ್ಕೂ ಮೀರಿ ಶ್ರೀಮಂತರಾಗಲು ದುಡಿಯುತ್ತಾರೆ. ಹಣ ಹೂಡಿಕೆ ಮಾಡುತ್ತಾರೆ. ಆದರೆ ನೀವು ಎಷ್ಟೇ ದುಡಿದರೂ, ಹಣ ಹೂಡಿಕೆ ಮಾಡಿದರೂ, ಅದು ಹೆಚ್ಚಾಗಲು ದೇವರ ಕೃಪೆ ಬೇಕೆ ಬೇಕು. ಹಾಗಾದ್ರೆ ಎಂಥ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..

ತುಳಸಿ ಗಿಡ. ಯಾವ ಮನೆಯಲ್ಲಿ ಎಷ್ಟೇ ಹೊಸ ಹೊಸ ಗಿಡ ನೆಟ್ಟರೂ, ಎಷ್ಟೇ ಆರೈಕೆ ಮಾಡಿದರೂ, ಆ ಗಿಡ ಸಮೃದ್ಧವಾಗಿ ಬೆಳೆಯುವುದಿಲ್ಲವೋ, ಅಂಥ ಮನೆಯಲ್ಲಿ ಲಕ್ಷ್ಮೀ ವಾಸ ಮಾಡಲು ಇಚ್ಛಿಸುವುದಿಲ್ಲ. ಅಲ್ಲದೇ,  ಮನೆಯಲ್ಲಿ, ಕುಟುಂಬದಲ್ಲಿ ಸಾವಾಗುವ ಸೂಚನೆ ನೀಡುತ್ತದೆ. ಹಾಗಾಗಿ ಮನೆಯಲ್ಲಿರುವ ಗೃಹಿಣಿ, ರವಿವಾರ ಬಿಟ್ಟು ಉಳಿದ ದಿನ ತುಳಸಿ ದೇವಿಗೆ ಬೆಳಿಗ್ಗೆ ನೀರು ಎರೆಯಬೇಕು. ಇದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ.

ನಿತ್ಯ ಪೂಜೆ. ಮನೆಯಲ್ಲಿ ನಿತ್ಯ ಪೂಜೆ ಮಾಡಬೇಕು. ಅದರಲ್ಲೂ ಬೆಳಿಗ್ಗೆ ಬೇಗ ಎದ್ದು, ಬೇಗ ಪೂಜೆ ಮಾಡಿದಷ್ಟು ಮನೆಗೆ ಒಳ್ಳೆಯದು. ಯಾರ ಮನೆಯಲ್ಲಿ ಪ್ರತಿದಿನ 6 ಗಂಟೆಯೊಳಗೆ ಸ್ನಾನ, ಪೂಜೆ ಮುಗಿಯುತ್ತದೆಯೋ, ಅಂಥ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರ್ಥಿಕ ಸ್ಥಿರತೆ ಎಲ್ಲವೂ ಇರುತ್ತದೆ. ಹಾಗಾಗಿ ಪ್ರತಿದಿನ ಭಕ್ತಿಯಿಂದ ಪೂಜೆ ಮಾಡಬೇಕು.

ಸ್ವಚ್ಛತೆ: ಯಾವ ಮನೆಯಲ್ಲಿ ಸ್ವಚ್ಛತೆ ಕಾಪಾಡುವುದಿಲ್ಲವೋ, ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಾಗಾಗಿ ಪ್ರತಿದಿನ ಮನೆಯಲ್ಲಿ ಕಸ ಗುಡಿಸಿ, ನೆಲ ಒರೆಸಬೇಕು. ಅಲ್ಲದೇ, ಧೂಳು ಕೂಡ ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಬಲೆ, ಧೂಳು, ಕಸ ಕಡ್ಡಿ ಎಲ್ಲವನ್ನೂ ತೆಗೆದು ಹಾಕಬೇಕು. ನಿಮ್ಮ ಮನೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ನಿಮ್ಮ ಮಾನಸಿಕ ನೆಮ್ಮದಿ ಕೂಡ ಅಷ್ಟೇ ಉತ್ತಮವಾಗಿರುತ್ತದೆ.

ಹಿರಿಯರಿಗೆ ಗೌರವಿಸದಿರುವುದು. ಯಾವ ಮನೆಯಲ್ಲಿ ಹಿರಿಯರನ್ನು ಗೌರವಿಸುವುದಿಲ್ಲವೋ, ಅಂಥ ಮನೆಯಲ್ಲಿ ಧನಲಕ್ಷ್ಮೀ ಬಂದು ನೆಲೆಸಲು ಸಾಧ್ಯವಿಲ್ಲ. ಅದೇ ರೀತಿ ಯಾವ ಮನೆಯಲ್ಲಿ ಮಕ್ಕಳಿಗೆ ಪ್ರೀತಿ, ಕಾಳಜಿ ಸಿಗುವುದಿಲ್ಲವೋ, ಸ್ವಾರ್ಥದ ಸಂಬಂಧವಿರುತ್ತದೆಯೋ, ಅಂಥ ಮನೆಯಲ್ಲೂ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ.

ಮನೆಯಲ್ಲಿ ಸದಾಕಾಲ ಜಗಳವಾಗುವುದು. ಯಾವ ಮನೆಯಲ್ಲಿ ಸದಾಕಾಲ ಜಗಳವಾಗುತ್ತಿರುತ್ತದೆಯೋ, ಅಂಥ ಮನೆಯಲ್ಲಿ ಆರ್ಥಿಕ ಸಮಸ್ಯೆ ಸದಾ ಇರುತ್ತದೆ. ಏಕೆಂದರೆ, ಜಗಳವಾದಾಗ, ನಕಾರಾತ್ಮಕ ಯೋಚನೆಗಳೇ ಬರುತ್ತದೆ. ಇಂಥ ಸಮಯದಲ್ಲಿ ಮನೆಗೆ ಒಳ್ಳೆಯದಾಗಲಿ ಎಂಬ ಭಾವನೆ ಬರಲು ಸಾಧ್ಯವೇ ಇಲ್ಲ. ಹಾಗಾಗಿ ಅಂಥ ಮನೆಯಲ್ಲಿ ಒಗ್ಗಟ್ಟು ಬರುವುದಿಲ್ಲ. ಅಲ್ಲಿ ಸದಾ ಕಾಲ ಜಗಳವಾಗುತ್ತಲೇ ಇರುತ್ತದೆ. ದ್ವೇಷ, ಅಸೂಯೆ ಸದಾ ಇರುತ್ತದೆ. ಇಂಥ ಮನೆಯಲ್ಲಿ ಲಕ್ಷ್ಮೀ ಬಂದು ನೆಲೆಸಲು ಸಾಧ್ಯವೇ ಇಲ್ಲ.

- Advertisement -

Latest Posts

Don't Miss