Wednesday, December 11, 2024

Latest Posts

Political News: ಬಳ್ಳಾರಿ ಜನರಿಗೆ ಬಾಳೆಹಣ್ಣಿನ ಕಥೆ ಹೇಳಿದ ಸಿಎಂ ಸಿದ್ದರಾಮಯ್ಯ

- Advertisement -

Political News: ಬಳ್ಳಾರಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಉಪಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಜಾತಿ, ಧರ್ಮ, ಮೇಲು ಕೀಳಿನ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಜನರಿಗೆ ಬಾಳೆಹಣ್ಣಿನ ಕಥೆಯನ್ನು ಹೇಳಿದರು. ವ್ಯಾಸರಾಯರು ಗುರುಕುಲದಲ್ಲಿ ಶಿಕ್ಷಣ ಕೊಡುವಾಗ, ಕನಕದಾಸರು ಕೂಡ ಗುರುಕುಲಕ್ಕೆ ಬಂದಿರುತ್ತಾರೆ.

ಆದರೆ ಅವರನ್ನು ಮೆಲ್ಜಾತಿಯ ಶಿಷ್ಯರು, ಕುರುಬ, ಶೂದ್ರನೆಂದು ಹಂಗಿಸುತ್ತಾರೆ. ಆಗ ಕನಕದಾಸರು ಬೇಸರಗೊಂಡಿದ್ದನ್ನು ಕಂಡು, ವ್ಯಾಸರಾಯರು ಎಲ್ಲ ಶಿಷ್ಯರಿಗೂ ಕನಕದಾಸರು ಎಂಥ ಶ್ರೇಷ್ಠರು ಎಂದ ತೋರಿಸಲು ನಿರ್ಧರಿಸಿದರು.

ಬಳಿಕ ಎಲ್ಲರಿಗೂ ಒಂದೊಂದು ಬಾಳೆ ಹಣ್ಣು ಕೊಟ್ಟು, ಯಾರೂ ಕಾಣದಂಥ ಜಾಗದಲ್ಲಿ ನಿಂತು ಈ ಬಾಳೆಹಣ್ಣನ್ನು ತಿಂದು ಬರಬೇಕು ಎಂದು ಹೇಳಿದರು. ಎಲ್ಲರೂ ಒಂದೊಂದು ದಿಕ್ಕಿಗೆ ಹೋಗಿ ಬಾಳೆಹಣ್ಣು ತಿಂದು ಬಂದರು. ಆದರೆ ಕನಕದಾಸರು ಬಾಳೆ ಹಣ್ಣು ತಿನ್ನದೇ ಹಾಗೇ ತಂದರು.

ಆಗ ವ್ಯಾಸರು ಏಕೆ ನೀನು ಬಾಳೆಹಣ್ಣನ್ನು ಮರಳಿ ತಂದೆ, ಯಾರೂ ಇಲ್ಲದ ಜಾಗ ನಿನಗೆ ಸಿಗಲಿಲ್ಲವೇ ಎಂದು ಕೇಳಿದರು. ಅದಕ್ಕೆ ಕನಕದಾಸರು, ನಾನು ಎಲ್ಲಿ ಹೋಗಿ ಬಾಳೆಹಣ್ಣು ತಿನ್ನಬೇಕು ಎಂದಾಗಲೂ, ನನ್ನನ್ನು ಆ ದೇವರು ನೋಡುತ್ತಿದ್ದಾನೆ ಎಂದು ಎನ್ನಿಸಿತು. ಅದಕ್ಕೆ ಹಾಗೆ ಮರಳಿ ತಂದೆ ಎಂದರು. ಈ ವೇಳೆ ಕನಕದಾಸರು ಎಂಥ ಶ್ರೇಷ್ಠರು ಎಂದು ಎಲ್ಲರಿಗೂ ಗೊತ್ತಾಯಿತು.

- Advertisement -

Latest Posts

Don't Miss