Friday, November 22, 2024

Latest Posts

ಈ ಕೆಲಸಗಳನ್ನು ಮಾಡಿದ್ರೆ, ಬ್ಯಾಡ್‌ಲಕ್ ಅನ್ನೋದು ನಿಮ್ಮ ಪಾಲಾಗುತ್ತದೆ.

- Advertisement -

Spiritual: ಮನುಷ್ಯ ದುಡಿಯುವುದೇ, ಹೊಟ್ಟೆ ತುಂಬ ಉಂಡು, ಮೈ ತುಂಬ ಬಟ್ಟೆ ತೊಟ್ಟು, ಒಂದು ಸೂರಿನಡಿ, ನೆಮ್ಮದಿಯಿಂದ ಬದುಕಿ, ಬಾಳಲು. ಆದರೆ ನೀವೇಷ್ಟೇ ದುಡಿದರೂ, ಒಂದಲ್ಲ ಒಂದು ವಸ್ತುವಿನ ಕೊರತೆ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ಖರೀದಿಸುವ ಬಟ್ಟೆ ಹೆಚ್ಚು ಬಾಳಿಕೆ ಬರದಿರುವುದು. ಊಟ ರುಚಿಸದಿರುವುದು. ದೊಡ್ಡ ಸೂರಿದ್ದರೂ, ನೆಮ್ಮದಿ ಇಲ್ಲದಿರುವುದು. ಇದಕ್ಕೆಲ್ಲ ಕಾರಣ, ನಾವು ಮಾಡುವ ಕೆಲ ಕೆಲಸಗಳು. ಹಾಗಾದ್ರೆ ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ.

ಮುಸ್ಸಂಜೆ ಹೊತ್ತಲ್ಲಿ ನಿದ್ರಿಸುವುದು: ಮನೆಗೆ ದರಿದ್ರ ತರುವ ಎಲ್ಲಕ್ಕಿಂತ ಮುಖ್ಯವಾದ ವಿಷಯ ಅಂದ್ರೆ, ಮುಸ್ಸಂಜೆ ಹೊತ್ತಲ್ಲಿ, ನಿದ್ರಿಸುವುದು. ಯಾವಾಗ ನಿದ್ರಿಸಿದರೇನು ಎನ್ನುವ ಉದ್ಧಟತನ ಇದ್ದವರು. ಈ ರೀತಿ ಹೊತ್ತಲ್ಲದ ಹೊತ್ತಿಗೆ ನಿದ್ರಿಸುತ್ತಾರೆ. ಯಾರು ಮುಸ್ಸಂಜೆ ಹೊತ್ತಿಗೆ, ದೀಪ ಹಚ್ಚುವ ಸಮಯದಲ್ಲಿ ನಿದ್ರಿಸುತ್ತಾರೋ, ಅಂಥವರ ಮಾನಸಿಕ ನೆಮ್ಮದಿ ಸರಿಯಾಗಿ ಇರುವುದಿಲ್ಲ. ಅಂಥವರ ಜೀವನದಲ್ಲಿ ಬರೀ ದುಃಖವೇ ಇರುತ್ತದೆ. ನೆಮ್ಮದಿ ಅನ್ನೋದೇ ಇರೋದಿಲ್ಲ.

ಅಡುಗೆ ಕೋಣೆಯಲ್ಲಿ ಈ ತಪ್ಪು ಮಾಡಬೇಡಿ: ಅಡುಗೆಕೋಣೆ ಎಂದರೆ, ಅನ್ನಪೂರ್ಣೇಶ್ವರಿಯ ವಾಸಸ್ಥಾನ. ಆಕೆಯ ಕೃಪೆ ಇರುವುದಕ್ಕೆ ನಿಮಗೆ ಎರಡು ಹೊತ್ತಿನ ಊಟ ಸಿಗುತ್ತಿದೆ. ಹಾಗಾಗಿ ಆ ಸ್ಥಾನವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಅಲ್ಲದೇ, ಅಡುಗೆ ಮಾಡುವವರು ಸದಾ ಪ್ರೀತಿಯಿಂದ ಅಡುಗೆ ಮಾಡಬೇಕು. ಕೋಪದಲ್ಲಿ ಅಡುಗೆ ಮಾಡಿದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇನ್ನು ಅಡುಗೆ ಪಾತ್ರೆಯನ್ನು ಸಿಟ್ಟಿನಿಂದ ಜಪ್ಪಿದರೆ, ದರಿದ್ರ ಆವರಿಸುತ್ತದೆ. ಅಲ್ಲದೇ, ಚಪ್ಪಲಿ ಹಾಕಿಕೊಂಡು, ಎಂದಿಗೂ ಮನೆಯೊಳಗೆ ಕಾಲಿಡಬೇಡಿ. ಇದರಿಂದ ಹೊರಗಿನ ನಕಾರಾತ್ಮಕತೆ ಮನೆಗೆ ಬರುತ್ತದೆ.

ಮನಸ್ಸಲ್ಲಿ ಇನ್ನೊಬ್ಬರ ಬಗ್ಗೆ ಒಳ್ಳೆಯ ಮನೋಭಾವವಿರಲಿ: ಓರ್ವ ಮನುಷ್ಯನಿಗೆ ಇನ್ನೊಬ್ಬರ ಬಗ್ಗೆ ಒಳ್ಳೆಯ ಮನೋಭಾವವಿರಬೇಕು. ಒಂದೇ ಮನೆಯಲ್ಲಿದ್ದು, ಒಬ್ಬರ ಬಗ್ಗೆ ಇನ್ನೊಬ್ಬರಿಗೆ ನಾಕಾರಾತ್ಮಕ ಯೋಚನೆ ಇದ್ದರೆ, ಆ ಯೋಚನೆ ಯಾರಿಗೆ ಇರುತ್ತದೆಯೋ, ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅದರಲ್ಲೂ ಓರ್ವ ಮನೆಯೊಡತಿಗೆ ಮನೆಯಲ್ಲೇ ಇರುವ ಇನ್ನೊಬ್ಬರ ಮೇಲೆ ಹೊಟ್ಟೆಕಿಚ್ಚು, ಸಿಟ್ಟು ಇದ್ದರೆ, ಆಕೆ ಆ ಸಿಟ್ಟನ್ನು ಅಡುಗೆ ಮಾಡುವಾಗ ತೋರಿಸುತ್ತಾಳೆ. ಇದರಿಂದಲೇ, ಮನೆಯ ನೆಮ್ಮದಿ ಹಾಳಾಗುತ್ತದೆ.

ಮಹಿಳೆಯರು ಆದಷ್ಟು ಕಡಿಮೆ ಮಾತನಾಡುವುದನ್ನು ಕಲಿಯಬೇಕು: ಪತಿಯನ್ನು ಹಿಡಿತದಲ್ಲಿ ಇಟ್ಟುಕೊಂಡು, ಮಹಿಳೆಯದ್ದೇ ದರ್ಬಾರ್ ಇರುವ ಮನೆಯನ್ನೊಮ್ಮೆ ನೋಡಿ. ಅಲ್ಲಿ ಮಕ್ಕಳಿಗೆ ಅಪ್ಪ ಅಮ್ಮನ ಮೇಲೆ ಗೌರವವಿರುವುದಿಲ್ಲ. ಏಕೆಂದರೆ, ಆ ಮನೆಯ ಯಜಮಾನನಿಗಿಂತ, ಮನೆಯೊಡತಿಯ ಆಡಳಿತ ಹೆಚ್ಚಾಗಿರುತ್ತದೆ. ಅಂಥ ಮನೆಯಲ್ಲಿ ಎಂದಿಗೂ ನೆಮ್ಮದಿ ಇರುವುದಿಲ್ಲ. ಯಾವ ಮನೆಯಲ್ಲಿ ಮನೆ ಯಜಮಾನ ಗಾಂಭೀರ್ಯದಿಂದಿರುತ್ತಾನೋ, ಅಂಥ ಮನೆಯಲ್ಲಿ ಮಕ್ಕಳು ಶಿಸ್ತಿನಿಂದಲೂ, ಪತ್ನಿ ತಗ್ಗಿ ಬಗ್ಗಿ ಇರುತ್ತಾಳೆ. ಮತ್ತು ಆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ.

- Advertisement -

Latest Posts

Don't Miss