ಬಜೆ ಬೇರು.. ಉಡುಪಿ, ದಕ್ಷಿಣ ಕನ್ನಡದವರು ಹೆಚ್ಚಾಗಿ ಬಳಸುವ ಬೇರು. ಇದನ್ನ ಚಿಕ್ಕ ಮಕ್ಕಳಿಗೆ ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಿ, ಓದಿನ ಕಡೆ ಗಮನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಅಲ್ಲದೇ, ದೃಷ್ಟಿ ಬಿದ್ದಾಗ, ಯಾವುದಾದರೂ ವಿಷಯದ ಬಗ್ಗೆ ಭಯವಿದ್ದಾಗ, ಶತ್ರುಗಳ ಕಾಟವಿದ್ದರೆ, ಇಂತಹುದ್ದರಿಂದ ಮುಕ್ತಿ ಪಡೆಯಲು ಬಜೆ ಬೇರನ್ನ ಬಳಸಬಹುದು.
ಅಮವಾಸ್ಯೆಯಂದು, ಹುಣ್ಣಿಮೆಯಂದು ಅಥವಾ ಶುಕ್ರವಾರದಂದು ತಲೆಸ್ನಾನ ಮಾಡಿ ಶುಭ್ರಗೊಂಡು ಪೂಜೆ ಮಾಡಿ. ಈ ವೇಳೆ ಮಣ್ಣಿನ ಹಣತೆ ತೆಗೆದುಕೊಂಡು ದೀಪ ಬೆಳಗಿ, ಆ ದೀಪದಲ್ಲೇ ಬಜೆ ಬೇರನ್ನ ಸುಟ್ಟುಕೊಳ್ಳಿ.
ಬಜೆ ಬೇರು ಸುಟ್ಟಾಗ ಕಪ್ಪು ಬಣ್ಣದ ಪುಡಿ ಉಂಟಾಗುತ್ತದೆ. ಈ ಪುಡಿಗೆ ತೆಂಗಿನ ಎಣ್ಣೆ ಸೇರಿಸಿ ಕಾಡಿಗೆ ರೀತಿ ಪೇಸ್ಟ್ ತಯಾರಿಸಿ, ಅದನ್ನ ಬೊಟ್ಟಿನ ರೀತಿ ಹಣೆಗಿರಿಸಿಕೊಳ್ಳಿ. ಅಥವಾ ಕೊಂಚ ಕೂದಲಿಗೆ ಒರೆಸಿಕೊಳ್ಳಿ.
ಹೀಗೆ ಮಾಡುವುದರಿಂದ ದೃಷ್ಟಿದೋಷ ಉಂಟಾಗುವುದಿಲ್ಲ. ಅಲ್ಲದೇ, ಅಮವಾಸ್ಯೆ ಹುಣ್ಣಿಮೆಯಂದು ರಸ್ತೆಯಲ್ಲಿ ಕುಂಬಳಕಾಯಿ, ಮೆಣಸಿನಕಾಯಿ ಹಾಕಿ ಮಂತ್ರ ಮಾಡಿರುತ್ತಾರೆ. ಇದನ್ನ ದಾಟಿದಾಗಲೂ ಅದರ ಪರಿಣಾಮವೂ ಕೂಡ ತಗುಲುವುದಿಲ್ಲ.