National Political News: ದೇಶದೆಲ್ಲೆಡೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಭರಿಂದ ಸಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸರ್ಕಾರ ಮಾಡಿದ ಸಾಧನೆ ಬಗ್ಗೆ ಹೇಳಲಾಗುತ್ತದೆ. ಇದೇ ರೀತಿ ರಾಜಸ್ಥಾನದಲ್ಲೂ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ಮೋದಿ ಜನರಿಗೆ ಯಾವ ರೀತಿ ಸಹಾಯ ಮಾಡುತ್ತಾರೆ ಅನ್ನೋ ಬಗ್ಗೆ ಹೊಗಳಲು ಹೋಗಿ, ರಾಜಸ್ಥಾನ ಬಿಜೆಪಿ ಸಚಿವರು ಪೇಚಿಗೆ ಸಿಲುಕಿದ್ದಾರೆ.
ಸಚಿವರಾದ ಬಾಬುಲಾಲ್ ಖಾರಾಡಿ, ರಾಜಸ್ಥಾನದ ಉದಯಪುರದ ನಯ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಾರೂ ಹಸಿವಿನಿಂದ ಮಲಗಬಾರದು, ಯಾರೂ ಸೂರು ಇಲ್ಲದೇ ಇರಬಾರದು ಎಂಬುದು ಪ್ರಧಾನಿ ಕನಸಾಗಿದೆ. ಹಾಗಾಗಿ ನೀವು ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ಪ್ರಧಾನಿ ಮೋದಿ ನಿಮಗೆ ಮನೆ ಕಟ್ಟಿಸಿಕೊಡುತ್ತಾರೆ. ಆಹಾರ ಧಾನ್ಯ ನೀಡುತ್ತಾರೆ. ಹಸಿವಿನ ಬಗ್ಗೆ, ಸೂರಿನ ಬಗ್ಗೆ ನೀವು ಚಿಂತೆ ಮಾಡಬೇಡಿ ಎಂದು ಹೇಳಿದ್ದಾರೆ.
ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಬಿಡಿ, ಪ್ರಧಾನಿ ಮೋದಿ ಸಬ್ಸೀಡಿ ದರದಲ್ಲಿ ಗ್ಯಾಸ ಸಿಲೆಂಡರ್ ಪೂರೈಸುತ್ತಾರೆ. ಬಿಜೆಪಿ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ನೀಡುತ್ತಿದೆ. ಹಾಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನೀವು ಬಿಜೆಪಿಗೆ ಓಟ್ ಹಾಕಬೇಕು ಎಂದು ಸಚಿವ ಬಾಬುಲಾಲ್ ಹೇಳಿದ್ದಾರೆ. ಇನ್ನು ಹೆಚ್ಚು ಮಕ್ಕಳು ಮಾಡಿಕೊಳ್ಳಿ ಎಂಬ ಸ್ಟೇಟ್ಮೆಂಟ್ ಕೊಡುತ್ತಲೇ, ಜನ ಮುಸಿ ಮುಸಿ ನಕ್ಕಿದ್ದಾರೆ. ಅಲ್ಲದೇ ವೇದಿಕೆ ಮೇಲಿದ್ದವರು ಕೂಡ ಮುಖ ಮುಖ ನೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.
ರೇಪ್ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..
ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..
ಈ ಶಾಲೆಯಲ್ಲಿ ಹಾಜರಿ ಹಾಕುವಾಗ ಎಸ್ ಮಿಸ್ ಅಲ್ಲಾ, ಜೈಶ್ರೀರಾಮ್ ಹೇಳಬೇಕು..