Health Tips: ಇಂದಿನ ಕಾಲದಲ್ಲಿ ಕ್ಯಾನ್ಸರ್ ರೋಗ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಕ್ಯಾನ್ಸರ್ ಲಕ್ಷಗಳನ್ನು ತಿಳಿದು ಚಿಕಿತ್ಸೆ ಪಡೆದು, ಆರೋಗ್ಯವಾದರೆ. ಇನ್ನು ಕೆಲವರು ನಿರ್ಲಕ್ಷ್ಯದಿಂದಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಲಕ್ಷಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಬ್ರೀಸ್ಟ್ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳಿಸಲಿದ್ದೇವೆ.
ನಿಮ್ಮ ಎದೆಯ ಬಳಿ ಗಡ್ಡೆ ಇದ್ದು, ಅದರಲ್ಲಿ ನೋವು ಕಾಣಿಸಿಕೊಂಡಿದ್ದರೆ, ಅಂಥ ವೇಳೆ ನೀವು ತಕ್ಷಣವೇ ವೈದ್ಯರ ಬಳಿ ಹೋಗಿ, ಪರೀಕ್ಷಿಸಿಕೊಳ್ಳುವುದು ಸೂಕ್‌ತ. ಹಾಗಂತ ಎಲ್ಲ ಗಡ್ಡೆಗಳೂ ಕ್ಯಾನ್ಸರ್ ಗಡ್ಡೆಗಳಲ್ಲ. ಆದರೆ ಒಮ್ಮೆ ಪರೀಕ್ಷಿಸಿಕೊಳ್ಳುವುದು ತುಂಬಾ ಉತ್ತಮ. ಕೆಲವರಿಗೆ ಮುಟ್ಟಿನ ಸಮಯದಲ್ಲಿ ಎದೆ ನೋವು ಬರುತ್ತದೆ. ಇದು ಸಾಮಾ್ಯ ಸಂಗತಿ. ಆದರೆ ಸಹಿಸಲಾಗದ ನೋವು ಬಂದಾಗಲೂ ನೀವು ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ತುಂಬಾ ಉತ್ತಮ.
ಯಾಕಂದ್ರೆ ಕ್ಯಾನ್ಸರ್ ಇದ್ದರೆ, ನೀವು ಮೊದಲ ಸ್ಟೇಜಿನಲ್ಲೇ ಅದನ್ನು ಪರೀಕ್ಷಿಸಿ, ಚಿಕಿತ್ಸೆ ಪಡೆದರೆ, ಜೀವ ಉಳಿಸಿಕೊಳ್ಳಬಹುದು. ಆದರೆ ಸಮಯ ಮೀರಿ ಹೋದರೆ, ಚಿಕಿತ್ಸೆ ಪಡೆದು ಪ್ರಯೋಜನವಾಗುವುದಿಲ್ಲ. ಹಾಗಾಗಿ ಎದೆಯಲ್ಲಿ ಗಡ್ಡೆ ಕಾಣಿಸಿದರೆ, ಡಿಸ್ಚಾರ್ಜ್ ಕಾಣಿಸಿದರೆ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




