Saturday, July 12, 2025

Latest Posts

‘ಸಿದ್ದರಾಮಯ್ಯ ಹೇಳುವುದನ್ನು ಕೇಳಿದರೆ, ಅವರು ಈಗಾಗಲೇ 10 ಸಲ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಿತ್ತು’

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ನವರು ಸುಳ್ಳು ಹೇಳುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿಗೆ ತಂದಿದ್ದಾರೆ. ಸಿಎಂ ತಮ್ಮ ಎಲ್ಲಾ ತಪ್ಪುಗಳಿಗೆ ಕೇಂದ್ರ ಕಡೆ ಬೆರಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಜಿಎಸ್ ಟಿ ಹಣ ಬಾಕಿ ಇಲ್ಲ. ಯುಪಿಎ ಆಡಳಿತಾಧಿಯಲ್ಲಿ ಒಟ್ಟು 60 ಸಾವಿರ ಕೋಟಿ ಹಣ ರಾಜ್ಯಕ್ಕೆ ನೀಡಲಾಗಿತ್ತು. ಆದರೆ ನಮ್ಮ ಅವಧಿಯಲ್ಲಿ ಇಲ್ಲಿಯವರೆಗೆ 2.36 ಲಕ್ಷ ಕೋಟಿ ಹಣ ರಾಜ್ಯಕ್ಕೆ ನೀಡಿದ್ದೇವೆ. ಸಿದ್ದರಾಮಯ್ಯ ಅವರು ಸುಳ್ಳು ರಾಮಯ್ಯ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಕೃಷಿ ಸಚಿವರು ಅವರ ಜೊತೆ ಮಾತುಕತೆ ಮಾಡ್ತಿದಾರೆ. ರೈತರ ಹೊಸ ಬೇಡಿಕೆ ಇಟ್ಟಿದ್ದಾರೆ. ನಮ್ಮ ಸರ್ಕಾರ ಬೇಡಿಕೆ ಪರಿಶೀಲನೆ ಮಾಡ್ತಿದಾರೆ. ನಮ್ಮ ಸರ್ಕಾರ ಸಹಾನಭೂತಿಯಿಂದ ಎಲ್ಲ ಬೇಡಿಕೆ ಪರಿಶೀಲನೆ ಮಾಡ್ತಿದಾರೆ. ಕಲ್ಲು ಹೊಡೆಯೋದು ಕೆಲಸವಲ್ಲ. ರೈತರ ಬಗ್ಗೆ ನಾವು ಸಹಾನುಭೂತಿ ಇಂದ ಇದ್ದೇವೆ. ರೈತರು ಮಾತುಕತೆಗೆ ಬರಬೇಕು. ನಾವು ಪ್ರತಿಭಟನೆಯನ್ನು ಹತ್ತಿಕ್ಕೋ‌ಕೆಲಸ ಆಗುತ್ತಿಲ್ಲ. ಅನುಮತಿ‌ ಇಲ್ಲದೆ ಬಂದರನ್ನು ತಡೆಯೋ ಕೆಲಸ ಆಗ್ತಿದೆ. ನಮ್ಮ ದೇಶದ ಪ್ರಜೆಗಳನ್ನು ಉಳಿಸೋ ಕೆಲಸ ಆಗ್ತಿದೆ. ಶಾರುಖ್ ಖಾನ್ ಅವರ ಜೊತೆ ಮಾತಾಡಿರೋ ವಿಷಯ ನನ್ನ ಗಮನಕ್ಕೆ ಇಲ್ಲ ಎಂದು ಜೋಶಿ ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳೋದೆ ಸುಳ್ಳು. ಹಾಗಿದ್ರೆ ಅವರು ಹತ್ತು ಸಲ ರಾಜಕೀಯ ನಿವೃತ್ತಿಯಾಗಬೇಕು. ಅನುದಾನದ ವಿಚಾರವಾಗಿ ಅವರ ಡ್ಯಾಶ್ ಬೋರ್ಡ್ ನಲ್ಲಿ ಎಲ್ಲ ಮಾಹಿತಿ ಹಾಕಿದ್ರು. ನಾವು ಅದನ್ನು ಡೌನಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಇದೀಗ ಅಂಕಿ ಸಂಖ್ಯೆಯೇ ಡಿಲೀಟ್ ಆಗಿದೆ ಎಂದು ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ನಾನು ಗೆಲ್ತೀನಿ. ಜೆಡಿಎಸ್ ಬಿಜೆಪಿ ಸೀಟು ಹಂಚಿಕೆ ಯಾವದು ಚರ್ಚೆಯಾಗಿಲ್ಲ. ಇಗ ಮಾತಾಡೋದು ಕೇವಲ ಉಹಾಪೋಹ ಅಷ್ಟೆ. ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಎಲ್ಲವೂ ಅಂತಿಮವಾಗಲಿದೆ. ಒಂದು ಹಂತದಲ್ಲಿ ಕೇಂದ್ರದಲ್ಲಿ ಚರ್ಚೆ ನಡೀತಿದೆ..ಅದೆಲ್ಲವೂ ಅಪೂರ್ಣ ಆಗಿದೆ. ಕಾರ್ಯಕಾರಿಣಿ ನಂತರವೇ ಎಲ್ಲವೂ ಅಂತಿಮವಾಗಲಿದೆ.

ಯತ್ನಾಳ, ವಿಜಯೇಂದ್ರ ಜಾರಕಿಹೊಳಿ‌ ಜೊತೆ ಸಭೆ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಅವರು ಒಂದೇ ಕಡೆ ಸೇರಿದ್ರೆ ನಿಮಗೇನೂ ಸಮಸ್ಯೆ ಎಂದು ಹಾಸ್ಯ ಚಟಾಕಿ ಹಾರಿಸಿ, ಆ ಬಗ್ಗೆ ನಾನು ಇನ್ನೊಂದು ಸಾರಿ ಮಾತಾಡ್ತೀನಿ ಎಂದು ಹೇಳಿದ್ದಾರೆ.

ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ

ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆ

ಅಯೋಧ್ಯೆ ಶ್ರೀರಾಮನ ದರ್ಶನದ ವೇಳೆ ಭಾವುಕರಾದ ಮಾಜಿ ಸಚಿವ ಸಿ.ಟಿ.ರವಿ

- Advertisement -

Latest Posts

Don't Miss