Political News: ನಿನ್ನೆ ಎಂ.ಬಿ.ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರನ್ನು ದೇವಿಯ ದೇವಸ್ಥಾನದೊಳಗೆ ಬಂದು, ದರ್ಶನ ಪಡೆಯಿರಿ ಎಂದು ಕರೆದಾಗ, ಸಿಎಂ ಸಿದ್ದರಾಮಯ್ಯ ಒಳಗೆ ಹೋಗಲು ನಿರಾಕರಿಸಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಬಿಜೆಪಿಗರು ಸೇರಿ ಅನೇಕ ಹಿಂದೂಗಳು, ಸಿಎಂ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿ, ದರ್ಗಾ ಅಂದರೆ ಭಕ್ತಿ ದೇವಸ್ಥಾನ ಅಂದರೆ ವಿರಕ್ತಿ ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದೇಗುಲಕ್ಕೆ ಬರಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂಗಳ ಭಕ್ತಿ, ನಂಬಿಕೆ, ಶ್ರದ್ಧೆಗಳಿಗೆ ಅಪಮಾನ ಮಾಡಿದ್ದಾರೆ. ಮಸೀದಿ, ದರ್ಗಾಗಳಿಗೆ ಹೋಗುತ್ತೀರಿ, ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತೀರಿ, ಆದರೆ ದೇವಸ್ಥಾನದ ಒಳಗೆ ಹೋಗಲು ತಮಗೆ ಮನಸಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ಕೇಸರಿ, ಕುಂಕುಮ ಕಂಡರೆ ನಿಮಗೆ ಏಕಿಷ್ಟು ದ್ವೇಷ, ಸನಾತನ ಧರ್ಮದ ಬಗ್ಗೆ ಯಾಕಿಷ್ಟು ಅಸಡ್ಡೆ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಚುನಾವಣಾ ಹಿಂದೂ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮುಖ ಅನಾವರಣಗೊಳ್ಳುತ್ತಲೇ ಇದೆ. ಒಂದು ಕಡೆ ಅಲ್ಪಸಂಖ್ಯಾತರ ಓಲೈಕೆಗಾಗಿ 10 ಸಾವಿರ ಕೋಟಿ ನೀಡುತ್ತೇವೆಂದ ಸಿದ್ದರಾಮಯ್ಯನವರು ಸರ್ವೋಚ್ಛ ನ್ಯಾಯಾಲಯದಲ್ಲೇ ಇತ್ಯರ್ಥವಾದ ರಾಮಮಂದಿರದ ಭೂಮಿಯನ್ನು ವಿವಾದಿತ ಪ್ರದೇಶ, ಅಲ್ಲಿನ ರಾಮಮಂದಿರಕ್ಕೆ ಹಣ ನೀಡುವುದಿಲ್ಲ ಎನ್ನುತ್ತಾರೆ. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿಯ ದೇವಾಲಯ ಉದ್ಘಾಟನೆಯನ್ನು ಕಾಟಾಚಾರಕ್ಕೆ ನೆರವೇರಿಸಿ, ಕರೆದರೂ ದೇವರ ದರ್ಶನ ಪಡೆಯದೇ ಹೊರನಿಲ್ಲುವುದು ಅವರ ಧರ್ಮ ವಿರೋಧಿ ಮನಸ್ಥಿತಿಯ ಅನಾವರಣ. ಮಸೀದಿ, ದರ್ಗಾಗಳಿಗೆ ಹೋಗಿ ತಲೆಬಗ್ಗಿಸಿ ನಿಲ್ಲುವವರು ದೇವಾಲಯದೊಳಗೆ ಕರೆದರೆ ದಾರ್ಷ್ಟ್ಯ ಪ್ರದರ್ಶಿಸುವುದು ನಾಡಿನ ಮುಖ್ಯಮಂತ್ರಿ ಹುದ್ದೆಯಲ್ಲಿರುವವರಿಗೆ ಶೋಭೆಯಲ್ಲ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಟ್ವೀಟ್ ಮಾಡಿದ್ದಾರೆ.
ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..
ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ




