ಆಂದ್ರಪ್ರದೇಶ ಸುದ್ದಿ:
ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ಕನಸ್ಸಿನಲ್ಲಿಯೂ ಮೈ ನಡುಕ ಹುಟ್ಟಿಸುವಂತಹ ಘಟನೆಯೊಂದು ನಡೆದುದಿದೆ.ವಿವಾಹಿತ ಮಹಿಳೆಯೊಬ್ಬಳೂ ಯುವಕನೊಬ್ಬನ ಜೊತೆ ಅಕ್ರಮವಾಗಿ ಸಂಬಂಧವನ್ನುಇಟ್ಟುಕೊಂಡಿದ್ದನು . ಕೆಲವು ದಿನಗಳ ನಂತರ ಇವರಿಬ್ಬರ ಅಕ್ರಮ ಸಂಬಂಧ ವಿವಾಹಿತ ಮಹಿಳೆಯ ಕುಟುಂಬದವರಿಗೆ ತಿಳಿದಿದೆ. ವಿಷಯ ತಿಳಿದ ಕುಟುಂಬದವರು ಮಹಿಳೆಯ ಜೊತೆ ಅಕ್ರಮ ಸಂಬಂದ ಹೊಂದಿದ ಯವಕನ ಸಹೋದರನ್ನು ಕರೆಸಿ ಬುದ್ದಿ ಹೇಳುವಂತೆ ತಿಳಿಸಿ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೆ ಅಣ್ಣನ ಮಾತಗೆ ಕಿವಿಗೊಡದ ತಮ್ಮ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ ಆದರೆ ಇವನ ಕಾಟಕ್ಕೆ ಬೇಸತ್ತ ಮಹಿಳೆಯ ಕುಟುಂಬದವರು ಅವನ ಅಣ್ಣನ್ನನು ನಿರ್ಜನ ಪ್ರದೇಶಕ್ಕೆ ಕರೆಸಿ ಅವನನ್ನು ಚೀಲದಲ್ಲಿ ಕಟ್ಟಿಹಾಕಿ ಕಾರಿನಲ್ಲಿ ಕೂರಿಸಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ , ನಂತರ ಕಾರನ್ನು ಪ್ರಪಾತಕ್ಕೆ ತಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಕಾರು ಸ್ಥಳದಲ್ಲೆ ಸುಟ್ಟು ಕರಕಲಾಗಿದೆ.ನಂತರ ಸ್ಥಳಿಯರು ಪ್ರಕರಣದ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ , ಪೊಲೀಸರು ವಿಚಾರಣೆ ನಡೆಸುತಿದ್ದಾರೆ.