ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ ಹಿನ್ನೆಲೆ: ರಾವಲ್ಪಿಂಡಿ ಕಮಿಷನರ್ ರಾಜೀನಾಮೆ

Pakistan News: ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿ, ರಾವಲ್ಪಿಂಡಿ ಕಮಿಷನರ್, ಲಿಯಾಖತ್ ಅಲಿ ಚಟ್ಟಾ ರಾಜೀನಾಮೆ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಮತಗಳ ಸಂಖ್ಯೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು. ಈ ನಡುವೆಯೇ ಚಟ್ಟಾ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಈ ಬಗ್ಗೆ ಮಾತನಾಡಿರುವ ಚಟ್ಟಾ, ನಾವು ಸೋತವರನ್ನು 50 ಸಾವಿರ ಮತಗಳ ಅಂತರದಿಂದ ವಿಜೇತರನ್ನಾಗಿ ಮಾಡಿದ್ದೇವೆ. ರಾವಲ್ಪಿಂಡಿ ಜನರಿಗೆ ನಾವು ಅನ್ಯಾಯ ಮಾಡಿದ್ದೇವೆ. ಆತ್ಮಹತ್ಯೆ ಎಂದು ಪರಿಗಣಿಸುವ ಮಟ್ಟಿಗೆ, ನಾನು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಚಟ್ಟಾ ಆರೋಪಿಸಿದ್ದಾರೆ.

ಅಂದರೆ, ತಪ್ಪಿಲ್ಲದಿದ್ದರೂ, ನೀನು ನಾವು ಮಾಡುವ ಆರೋಪವನ್ನು ಹೊತ್ತು, ನಿನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ, ಏನು ಬೇಕಾದರೂ ಆಗಬಹುದು ಎಂದು ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕ ಚಟ್ಟಾ ನಮಾಜ್ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದಾರೆ. ಆದರೆ ಚಟ್ಟಾ, ತಮ್ಮ ನಿರ್ಧಾರವನ್ನು ಬದಲಿಸಿ, ಮೀಡಿಯಾದ ಮುಂದೆ ಈ ವಿಷಯ ಹೇಳಲು ನಿರ್ಧರಿಸಿದ್ದಾರೆ.

ಅಲ್ಲದೇ, ಎಲ್ಲ ಅಧಿಕಾರಿಗಳಿಗೂ ಕಿವಿ ಮಾತು ಹೇಳಿದ್ದಾರೆ. ನೀವು ಯಾರೂ ರಾಜಕೀಯದವರ ಸಲುವಾಗಿ, ಇಂಥ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಟ್ಟ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದವರ ಬಂಧನ

ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ

ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

About The Author