Dharwad News: ಧಾರವಾಡ: ಧಾರವಾಡದಲ್ಲಿ ಕೆಐಎಡಿಬಿ ಇಲಾಖೆಯ ಅಕ್ರಮ ಧಂದೆ ಬಯಲಿಗೆ ಬಂದಿದ್ದು, ಅಧಿಕಾರಿಗಳು ಸತ್ತವರ ಹೆಸರು ಬಳಸಿ, ಬದುಕಿರುವವರ ಹೆಸರಿನ ಮೇಲೆ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ.

ಬಸವರಾಾಜ ಕೊರವರ ಎಂಬ ಸಾಮಾಜಿಕ ಹೋರಾಟಗಾರ, ಈ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. ಹುಬ್ಬಳ್ಳಿ ಮೂಲದ ನಾಗಪ್ಪ ಬೆಳ್ಳೆರಿ ಎಂಬ ರೈತ, ಬದುಕಿದ್ದಾಗ 9 ಎಕರೆ 37 ಗುಂಟೆಗೆ 2010 ರಲ್ಲಿ ಪರಿಹಾರ ಪಡೆದುಕ್ಕೊಂಡಿದ್ದರು. ಆದರೆ ಅದೇ ದಾಖಲಾತಿಯನ್ನು ಬಳಸಿಕೊಂಡ ಅಧಿಕಾರಿಗಳು, 2 ಕೋಟಿ 45 ಲಕ್ಷದ 29 ಸಾವಿರದ 992 ಹಣವನ್ನ ಸತ್ತವರ ಹೆಸರಲ್ಲಿ ಲೂಟಿ ಮಾಡಿದ್ದಾರೆ.
ಸೆಪ್ಟೆಂಬರ್ 4, 2019 ರಂದು ನಾಗಪ್ಪ ಸಾವನ್ನಪ್ಪಿದ್ದಾರೆ. ಈ ವೇಳೆ ಅವರ ಹೆಸರಿನಲ್ಲಿ 25.04.2022 ರಲ್ಲಿ 2, ಕೋಟಿ 45 ಲಕ್ಷದ 29 ಸಾವಿರದ 992 ಹಣ ಅವರ ಹೆಸರಿನಲ್ಲಿತ್ತು. ಈ ಹಣದ ಜೊತೆಗೆ ನಾಗಪ್ಪ ಸಹೋದರ, ಕೃಷ್ಣಪ್ಪ ಬೆಳ್ಳೆರಿ ಅವರ ಹೆಸರಿನಲ್ಲಿದ್ದ 2 ಕೋಟಿ, 58 ಲಕ್ಷ, 5 ಸಾವಿರ ಹಣವನ್ನು ಸಹ ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ.
ಆಗಿನ ಭೂಸ್ವಾಧಿನಾಧಿಕಾರಿ ಅಧಿಕಾರಿ ವಿ.ಡಿ.ಸಜ್ಜನ್ ಅವರ ಅಧಿಕಾರವಧಿಯಲ್ಲಿ ಈ ಅಕ್ರಮ ನಡೆದಿದೆ. ಆಗಿನ ವಿಷೇಶ ಭೂಸ್ವಾಧಿನಾಧಿಕಾರಿ ವಿ.ಡಿ ಸಜ್ಜನ್ ಅಧಿಕಾರದ ಅವಧಿಯಲ್ಲಿ 506 ಕಡತಗಳಿಗೆ ಅಧಿಕಾರಿಗಳು ಭೂ ಪರಿಹಾರವನ್ನ ನೀಡಿದ್ದಾರೆ. ಒಟ್ಟು ಸಜ್ಜನ 9 ತಿಂಗಳ ಅವಧಿಯಲ್ಲಿ 138 ಕೋಟಿ ಹಣವನ್ನ ಅಧಿಕಾರಿಗಳು ಆರ್ ಟಿ ಜಿ ಎಸ್ ಮಾಡಿದ್ದಾರೆ.
14 ಜನ ರೈತರ ಹೇಸರಿನಲ್ಲಿ ಖೊಟ್ಟಿ ಬ್ಯಾಂಕ ಖಾತೆ ಸೃಷ್ಠಿಸಿ ಬರೊಬ್ಬರಿ 28, 79,63,453 ಹಣವನ್ನು ಅಧಿಕಾರಿಗಳು ಡಬಲ್ ಪೇಮೆಂಟ್ ಮಾಡಿದ್ದಾರೆ. ಬ್ಯಾಂಕ್ ಆಪ್ ಬರೋಡಾ, ಐಡಿಬಿಐ ಕೆವಿಜಿ ಬ್ಯಾಂಕ್, ಮೂಲಕ ಹಣ ವರ್ಗಾವಣೆ ಮಾಡಲಾಗಿದೆ.
ಸದ್ಯ ಅದರಲ್ಲಿ 20 ಕೋಟಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳ ತನಿಖೆ ಆರಂಭ ಮಾಡಿದ್ದಾರೆ. ಈಗಾಗಲೇ 9 ಜನ ಕೆಐಎಡಿಬಿ ಅಧಿಕಾರಿಗಳು ಮೆಲೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಬಸವರಾಜ್ ಕೊರವರ, ಸರಕಾರ 2010 ರಿಂದ 2016 ರವೆಗೆ ರೈತರಿಗೆ ಸ್ವಾಧಿನ ಪಡಿಸಿಕ್ಕೊಂಡ ರೈತರಿಗೆ ಮತ್ತೊಂದ ಸಾರಿ ಪೇಮೆಂಟ್ ಮಾಡಲಿ. ಕೇಂದ್ರ ಕಚೇರಿ ಹಿರಿಯ ಅಧಿಕಾರಿಗಳು ಕೂಡಾ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಐಡಿ ಅಧಿಕಾರಿಗಳು ಕೆಐಎಡಿಬಿಯ ಸ್ಪೆಷಲ್ ಡಿಸಿ ಅವರನ್ನ ಇಲ್ಲಿಯವರೆಗೂ ತನಿಖೆಗೆ ಒಳಪಡಿಸಲ್ಲ. ವಿ ಡಿ ಸಜ್ಜನ್ ನಿವೃತ್ತಿ ಹೊಂದಿವ ಕೊನೆಯ ದಿನ ,30 ಕೋಟಿ ಹಣವನ್ನ ವರ್ಗಾವಣೆ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳಿಂದ ಸೂಕ್ತವಾಗಿ ತನಿಖೆ ಆಗುತ್ತಿಲ್ಲ. ಕೂಡಲೆ ಸರಕಾರ ಎಚ್ಚೆತ್ತುಕ್ಕೊಂಡು ಸಿಬಿಐ ಇಲ್ಲ ಎಸ್ ಐ ಟಿ ತನಿಖೆಗೆ ಕೊಡಬೇಕು. ಒಂದು ವೇಳೆ ಸರಕಾರ ಎಸ್ ಐ ಟಿ, ಸಿಬಿಐಗೆ ಕೊಡದೆ ಇದ್ರೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ರಾಜ್ಯದಲ್ಲಿ ಏನೇ ಕೆಲಸ ಮಾಡಿದರೂ, ಮೋದಿ ಅವರ ಕೆಲಸವನ್ನು ಓವರ್ ಟೇಕ್ ಮಾಡಲು ಸಾಧ್ಯವಿಲ್ಲ’
ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?




