Bagalakote News: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಸವೇಶ್ವರ ವೃತ್ತದ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆಯಾಗಿದ್ದು, ಅಕ್ರಮ ಸಾಗಾಟದ ವೇಳೆ ಅಪಾರ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದೆ.
ಬಡವರ ಅನ್ನಭಾಗ್ಯ ಯೋಜನೆ ಅಕ್ಕಿಗೆ ಕನ್ನ ಹಾಕಿ, ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸಲಾಗುತ್ತಿತ್ತು. ಫ್ರೀಯಾಗಿ ಸಿಗುವ ಅಕ್ಕಿಯನ್ನು ಡಬಲ್ ದುಡ್ಡಿಗೆ ಮಾರಾಟ ಮಾಡಡಲಾಗುತ್ತಿದ್ದು, 11 ಸಾವಿರ 8 ನೂರು ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
NCCF Of INDIA LTD ಎಂಬ ಕಂಪನಿ ಹೆಸರಿನ ಚೀಲದಲ್ಲಿ,KA.28 AB 0357 ಸಂಖ್ಯೆಯ ಟ್ರಕ್ ನಲ್ಲಿ ಈ ಪಡಿತರ ಅಕ್ಕಿ ಲೋಡ್ ಆಗುತ್ತಿತ್ತು. ದಂಧೆಕೋರರು ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿಯ ಚೀಲ ಬದಲಿಸಿ, ಸಾಗಾಟ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳಉ ಮತ್ತು ಉಪ ವಿಭಾಗ ಅಧಿಕಾರಿಗಳು ಭೇಟಿ ನೀಡಿದ್ದು, ದಾಳಿ ವೇಳೆ ಚೀಲಕ್ಕೆ ಹೊಲಿಗೆ ಹಾಕುವ ಯಂತ್ರ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ಠಾಣೆ ವ್‌ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.