Wednesday, May 29, 2024

Latest Posts

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ. 15,36,000 ಮೌಲ್ಯದ 1,534 ಸಾರಿ, ಮಿನಿಟ್ರಕ್ ಸೀಜ್ ಮಾಡಿದ ಅಧಿಕಾರಿಗಳು

- Advertisement -

Hubli news: ಹುಬ್ಬಳ್ಳಿ: ನಿನ್ನೆ (ಮಾ.25) ರಾತ್ರಿ 1 ಗಂಟೆ ಸುಮಾರಿಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮಿನಿಟ್ರಕ್ ಅನ್ನು ಅಣ್ಣಿಗೇರಿ ರಸ್ತೆಯ ಕೊಂಡಿಕೋಪ್ಪ ಚೇಕ್ ಪೋಸ್ಟ್ ದಲ್ಲಿ ಎಸ್ ಎಸ್ ಟಿ ಅಧಿಕಾರಿಗಳ ತಂಡ ತಡೆದು ಪರಿಶೀಲಿಸಿದಾಗ ಅದರಲ್ಲಿ ದಾಖಲೆ ಇಲ್ಲದ ರೂ. 15,36,000 ಮೌಲ್ಯದ ಸಪಾರಬೆಲೆಯ ಸೀರೆಗಳು ದೊರೆತಿದ್ದು, ಸೀರೆ ಹಾಗೂ ಮಿನಿಟ್ರಕ್ ಜಪ್ತಿ ಮಾಡಿ ಅಣ್ಣಿಗೇರಿ ಪೊಲೀಸ್ ರಲಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿನ್ನೆ ರಾತ್ರಿ ಕೊಂಡಿಕೋಪ್ಪ ಚೇಕ್ ಪೋಸ್ಟ್ ದಲ್ಲಿ ತಪಾಸಣೆ ಸಂದರ್ಭದಲ್ಲಿ ಸೂಕ್ತ ದಾಖಲೆ ಇಲ್ಲದ 1,536 ಸೀರೆಗಳಿರುವ 25 ಗಂಟುಗಳು ಪತ್ತೆ ಆಗಿವೆ. ಇವುಗಳ ಮೌಲ್ಯ ರೂ. 15,36,000 ಆಗಿದೆ. ಸೀರೆ ಮತ್ತು ಮಿನಿಟ್ರಕ್ ವಶಕ್ಕೆ ಪಡೆದು, ಸೀಜ್ ನಾಡಿ, ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೆ.ಎಸ್.ಪಾಟೀಲ ನೇತೃತ್ವದ ಎಸ್.ಎಫ್.ಸಿ.ತಂಡ ಈ ಕಾರ್ಯ ಮಾಡಿದ್ದು, ಎಂಸಿಸಿ ನೊಡೆಲ್ ಅಧಿಕಶರಿ ಮೋನಾ ರಾವುತ್ ಹಾಗೂ ತಹಶಿಲ್ದಾರ ರಾಜು ಮಾವರಕರ ಮಾರ್ಗದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕಸದ ಟ್ರಕ್ ಡಿಕ್ಕಿ ಲಂಡನ್‌ನಲ್ಲಿ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

ಪರಪ್ಪನ ಅಗ್ರಹಾರದ ಪಾಲಾದ ಸೋನುಗೌಡ: ರೀಲ್ಸ್ ರಾಣಿಗೆ 14 ದಿನ ನ್ಯಾಯಾಂಗ ಬಂಧನ

ರೋಹಿತ್‌ ಶರ್ಮಾಗೇ ಆಡೋದನ್ನ ಹೇಳಿಕೊಟ್ಟ ಪಾಂಡ್ಯಾ: ಆಕ್ರೋಶ ಹೊರಹಾಕಿದ ನೆಟ್ಟಿಗರು

- Advertisement -

Latest Posts

Don't Miss