Saturday, July 27, 2024

Latest Posts

ಪರಪ್ಪನ ಅಗ್ರಹಾರದ ಪಾಲಾದ ಸೋನುಗೌಡ: ರೀಲ್ಸ್ ರಾಣಿಗೆ 14 ದಿನ ನ್ಯಾಯಾಂಗ ಬಂಧನ

- Advertisement -

News: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಫೇಮಸ್ ಆಗಿದ್ದ ರೀಲ್ಸ್ ರಾಣಿ ಸೋನುಗೌಡ, ಓಟಿಟಿ ಬಿಗ್‌ಬಾಸ್ ಕನ್ನಡದಲ್ಲೂ ಸ್ಪರ್ಧಿಸಿದ್ದರು. ಒಂದು ಮಗುವಿಗೆ ರಕ್ಷಣೆ ಕೊಡಲು, ವಿದ್ಯಾಭ್ಯಾಸ ಕೊಡಲು ನಾನು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು.

ಆದರೆ ಸೋನುಗೌಡ ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆಯದೇ, ಹಾಗೆ ಮಗುವನ್ನು ತೆಗೆದುಕೊಂಡಿದ್ದು, ಈ ಸಂಬಂಧ ಸೋನು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ನಾಲ್ಕು ದಿನ ಸೋನುಗೌಡ ವಿಚಾರಣೆ ನಡೆಸಿರುವ ಕೋರ್ಟ್, 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶಿಸಿದೆ. ಹೀಗಾಗಿ ಈಗ ರೀಲ್ಸ್ ರಾಣಿ ಸೋನುಗೌಡ, ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ.

ಇನ್ನು ನಿನ್ನೆ ಹೆಣ್ಣು ಮಗುವಿನ ಊರಾದ ರಾಯಚೂರಾಗಿ ಸೋನುಗೌಡರನ್ನು ಕರೆದೊಯ್ದಿದ್ ಪೊಲೀಸರು, ಅಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಮಗುವಿನ ಚಿಕ್ಕಪ್ಪನ ಮನೆಗೆ ಬಂದು ಪೊಲೀಸರು ವಿಚಾರಣೆ ನಡೆಸಿದ್ದು, ಗ್ರಾಮಸ್ಥರು ಸೋನುಗೌಡರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸೋನು ಕಾರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.

ಗೋವಾದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿ ಸ್ಪರ್ಧೆ..

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ನಿಗೆ ಸೇರಿದ ದುಬಾರಿ ಕಾರು ಕಳ್ಳತನ

ಬುಧವಾರದಿಂದ ಮೂರು ಬೆಳಗಾವಿಯಲ್ಲಿ ಶೆಟ್ಟರ್ ಪರ ಬಿಎಸ್‌ವೈ ಭರ್ಜರಿ ಕ್ಯಾಂಪೇನ್..

- Advertisement -

Latest Posts

Don't Miss