Bengaluru News: ಬೆಂಗಳೂರು: ಸಂಚಾರಿ ಪೊಲೀಸರು ಎಷ್ಟೇ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದರೂ ಸಹ, ವಾಹನ ಸವಾರರಿಂದ ನಿಯಮಗಳ ಉಲ್ಲಂಘನೆಗಳಾಗುತ್ತಿವೆ. ಪ್ರತಿನಿತ್ಯ ಬೆಂಗಳೂರು ನಗರದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿರುತ್ತವೆ. ಕೆಲವೊಮ್ಮೆ ಪ್ರಾಣಾಪಾಯಗಳಾದರೆ, ಮತ್ತೊಮ್ಮೆ ವಾಹನ ಸವಾರರು ಅಪಾಯದಿಂದ ಪಾರಾಗಿರುತ್ತಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಸಂಚಾರ ನಿಯಮಗಳ ಪಾಲನೆಗೆ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಸುಗಮ ಸಂಚಾರ ಹಾಗೂ ಅಪಘಾತಗಳನ್ನ ತಡೆಯಲು ಈ ಕಠಿಣ ಕ್ರಮಗಳನ್ನು ಜಾರಿಗೆ ತರಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನ ಎರಡು ವಿಧವಾಗಿ ವರ್ಗೀಕರಿಸಿ ಸುತ್ತೋಲೆ ಹೊರಡಿಸಿ ಆದೇಶ ಹೊರಡಿಸಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.
ವರ್ಗ-1ರಲ್ಲಿ ಗುರುತರ ಉಲ್ಲಂಘನೆ ಪ್ರಕರಣಗಳು.
ವರ್ಗ -1ರ ನಿಯಮ ಉಲ್ಲಂಘನೆಗೆ ಪ್ರಥಮ ಆದ್ಯತೆಗೆ ಸೂಚನೆ.
ವರ್ಗ-1 ರ ಉಲ್ಲಂಘನೆ ಪ್ರಕರಣಗಳು.
1. ಮದ್ಯಪಾನ ಮಾಡಿ ಚಾಲನೆ
2. ಅತೀ ವೇಗ ಚಾಲನೆ
3. ಅಜಾಗರೂಕ ಚಾಲನೆ
4. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ
5. ಜಂಪಿಂಗ್ ಟ್ರಾಫಿಕ್ ಸಿಗ್ನಲ್
6. ಫ್ರೀ ವೀಲ್ಹಿಂಗ್
7. ರೇಸಿಂಗ್ ಮತ್ತು ವೇಗದ ಪ್ರಯೋಗ
8. ಶಿಸ್ತು ಪಥ ಚಾಲನೆ ಮಾಡದೇ ಇರುವುದು
9. ಜಿಗ್ ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ
10. ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು.
11. ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು.
12. ಇಂಟರ್ ಸೆಕ್ಷನ್‌ನಲ್ಲಿ ವಾಹನ ನಿಲುಗಡೆ
13. ಬಿಎಂಟಿಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು
14. ಶಿರಸ್ತ್ರಾಣ (ಹೆಲ್ಮೆಟ್) ಧರಿಸದೆ ದ್ವಿಚಕ್ರ ವಾಹನ ಚಾಲನೆ
15. ದ್ವಿಚಕ್ರ ವಾಹನದಲ್ಲಿ ಸವಾರರು/ಹಿಂದಿನ ಸವಾರರು (ಹೆಲ್ಮೆಟ್) ಧರಿಸದಿರುವುದು.
16. ಸುರಕ್ಷತೆಯ ಸೀಟ್ ಬೆಲ್ಟ್ ಧರಿಸದಿರುವುದು.
17. ಎಡಭಾಗದಿಂದ ಓವರ್ ಟೇಕ್ ಮಾಡುವುದು.
18. ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ
19. ವಾಹನಗಳ ಮೇಲ್ಬಾವಣಿ (Roof top) ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು.
20. ಪ್ರಯಾಣಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು
21. ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುವುದು
22.ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಶಾಲಾ ಬಸ್/ವ್ಯಾನ್‌ಗಳಲ್ಲಿ ಕರೆದೊಯ್ಯುವುದು
23.ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು
24. ಟ್ರಿಪಲ್ ರೈಡಿಂಗ್
25. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು.
26. ಪ್ರವೇಶ ನಿಷಿದ್ಧ.
ವರ್ಗ-2ರ ಉಲ್ಲಂಘನೆ ಪ್ರಕರಣಗಳು.
27. ಹೈಬೀಮ್ ಲೈಟ್ ಗಳನ್ನು ವಾಹನಗಳಲ್ಲಿ ಬಳಸುವುದು
28. ತೀಕ್ಷ್ಣ ಬೀರುವ ಹೆಡ್‌ಲೈಟ್‌ಗಳನ್ನು ಬಳಸುವುದು
29. ವಾಹನ ಚಾಲನೆ ಮಾಡುವಾಗ ಕರ್ಕಶ ಹಾರ್ನ್ ಬಳಕೆ.
30. ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು.
31. ದೋಷಪೂರಿತ ಸೈಲನ್ಸರ್ ಬಳಸುವುದು.
32. ವಾಹನಗಳಲ್ಲಿ ಉದ್ದವಾದ ವಸ್ತುಗಳನ್ನು ಒಯ್ಯುವುದು.
33. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು
34. ಪಾದಚಾರಿ ಮಾರ್ಗವನ್ನು ಒತ್ತುವರಿ
35. ರಹದಾರಿ ಇಲ್ಲದೇ ವಾಹನ ಚಾಲನೆ ಮಾಡುವುದು
36. ಆಟೋರಿಕ್ಷಾ ಚಾಲಕರು ನಿಗಧಿಪಡಿಸಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಒತ್ತಾಯಿಸುವುದು
37. ಆಟೋರಿಕ್ಷಾ ಚಾಲಕರು ಬಾಡಿಗೆಗೆ ಕರೆದೊಯ್ಯಲು ನಿರಾಕರಿಸುವುದು
38. ಡಿಸ್‌ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು
39. ವಾಹನಗಳ ಗ್ಲಾಸ್‌ಗಳಿಗೆ ಬ್ಲಾಕ್ ಫಿಲ್ಮ್ ಬಳಕೆ ಮಾಡುವುದು.
40. ಡಿಫೆಕ್ಟಿವ್ ರಿಜಿಸ್ಟರ್ ಪ್ಲೇಟ್
41. ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು
42. ಇನ್ಸೂರೆನ್ಸ್ ಪ್ರಮಾಣ ಪತ್ರವನ್ನು
43. ಪರ್ಮಿಟ್ ಉಲ್ಲಂಘಿಸುವುದು
44. ಭಾರಿ ವಾಹನಗಳ ಪ್ರವೇಶವನ್ನು ಉಲ್ಲಂಘಿಸುವುದು
45. ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು.
ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಠಾಣೆಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಸಂಚಾರ ದಟ್ಟಣೆ ಹಾಗೂ ಅಪಘಾತ ತಡೆಗಟ್ಟಲು ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಜಾರಿಗೆ ತರಲು ಸೂಚನೆ ನೀಡಲಾಗಿದೆ.
ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ
‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’