Monday, June 16, 2025

Latest Posts

ಮಕ್ಕಳ ಬಗ್ಗೆ ವಿಶೇಷ ಕಾಳಜಿ : ಶಾಸಕ ಧೀರಜ್ ಮುನಿರಾಜುರಿಂದ ದೊಡ್ಡಬಳ್ಳಾಪುರ “ಚಿಗುರು” ಬೇಸಿಗೆ ಶಿಬಿರ..

- Advertisement -

ಬೆಂಗಳೂರು : ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ ‘ದೊಡ್ಡಬಳ್ಳಾಪುರ ಚಿಗುರು 2025’ ಎಂಬ ಹೆಸರಿನ ವಿಶೇಷ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರವು ಯಶಸ್ವಿಯಾಗಿ ಮೂರು ದಿನಗಳನ್ನು ಪೂರೈಸಿದೆ.

ಮಕ್ಕಳ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಚಿತವಾಗಿ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ ದೊಡ್ಡಬಳ್ಳಾಪುರ ನಗರ ಹಾಗು ಗ್ರಾಮೀಣ ಭಾಗದ, 8 ರಿಂದ 14 ವರ್ಷದೊಳಗಿನ ಹಲವಾರು ಮಕ್ಕಳುಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಶಿಬಿರದಲ್ಲಿ ನಾಟಕ, ಕರಾಟೆ, ಸಂಗೀತ, ನೃತ್ಯ, ಯೋಗ ಮುಂತಾದ ಆಸಕ್ತಿದಾಯಕ ಚಟುವಟಿಕೆಗಳ ಕುರಿತು, ನುರಿತ ತರಬೇತುದಾರರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಆ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತೆ ಶಿಬಿರವನ್ನು ನಡೆಸಲಾಗುತ್ತಿದೆ.

ಇಂದಿನ ದಿನಮಾನದಲ್ಲಿ ಅಂತರ್ಜಾಲ, ಮೊಬೈಲ್ ನಂತಹ ವಿದ್ಯುನ್ಮಾನ ವಸ್ತುಗಳಲ್ಲೇ ಮಕ್ಕಳು ಕಳೆದುಹೋಗುತ್ತಿದ್ದು, ವ್ಯಕ್ತಿತ್ವ ವಿಕಸನದಂತಹ ಮೌಲ್ಯಗಳು ಕಡಿಮೆಯಾಗುತ್ತಿದೆ. ಜೀವನದಲ್ಲಿ ಸ್ಪೂರ್ತಿದಾಯಕ ಚಟುವಟಿಕೆಗಳನ್ನು ಮಕ್ಕಳು ಮರೆಯಬಾರದು, ಸರ್ವಾಂಗೀಣವಾಗಿ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಬೇಕು ಎಂಬ ಸದುದ್ದೇಶದಿಂದ ಈ ರೀತಿಯ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರಗಳಲ್ಲಿ ಮಕ್ಕಳು ಆಟ ಪಾಠ ಮನೋರಂಜನೆಯ ಜೊತೆಗೆ, ಸಾಮಾಜಿಕ ಸಂವಹನ, ನೈತಿಕತೆ, ಏಕಾಗ್ರತೆಯಂತಹ ಮೌಲ್ಯಗಳನ್ನೂ ಕಲಿಯಲಿದ್ದು, ಈ ಕೌಶಲ್ಯಗಳು ಮಕ್ಕಳಿಗೆ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿವೆ.

ಶಿಬಿರವು ಮೇ 12 ರಂದು ಉದ್ಘಾಟನೆಗೊಂಡಿದ್ದು ಯಶಸ್ವಿಯಾಗಿ ಮೂರು ದಿನಗಳನ್ನು ಪೂರೈಸಿದೆ. ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುತ್ತಿದ್ದಾರೆ. ನಗರದ ಡಿಕ್ರಾಸ್ ಹತ್ತಿರದಲ್ಲಿರುವ ಅರ್ಕಾವತಿ ಉಡಾವಣೆಯಲ್ಲಿರುವ ಶಾಸಕರ ನಿವಾಸವಾದ ಅಂಜನಾದ್ರಿಯಲ್ಲಿ ಶಿಬಿರ ನಡೆಯುತ್ತಿದ್ದು, ಮೇ 16 ರಂದು ಶಿಬಿರ ಮುಕ್ತಾಯಗೊಳ್ಳಲಿದೆ ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.

- Advertisement -

Latest Posts

Don't Miss