Hubli Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ಒಳಜಗಳ ಹೆಚ್ಚಾಗಿದೆ. ಗಮನ ಬೇರೆಡೆ ಸೆಳೆಯಲು ಕೇಂದ್ರದ ಅನುದಾನ ಬಂದಿಲ್ಲಾ ಎನ್ನುತ್ತಿದ್ದಾರೆ. ಇವರಿಗೆ ಸರ್ಕಾರ ನಡೆಸಲು ಬರುತ್ತಿಲ್ಲ. ಕೇಂದ್ರದಿಂದ ಅತಿ ಹೆಚ್ಚು ಅನುದಾನ ಕೊಟ್ಟರೂ ಕಾಂಗ್ರೆಸ್ ಯಾಕೆ ಧರಣಿ ಮಾಡುತ್ತಿದೆ? ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಆರೋಪ ಮಾಡಿದ್ದಾರೆ. ೨೦೦೪ ರಿಂದ ಯುಪಿಎ ಸರ್ಕಾರದ ಗ್ರ್ಯಾಂಟ್ ೬೦ ಸಾವಿರ ಕೋಟಿ. ಮೋದಿಯವರ ಸರ್ಕಾರ ೧೦ ವರ್ಷದಲ್ಲಿ ೨.೩೬ ಲಕ್ಷ ಕೋಟಿ ಅನುದಾನ ನೀಡಿದೆ. ಡಿ.ಕೆ. ಶಿವಕುಮಾರ್ ಕೇಂದ್ರದಿಂದ ಅನುದಾನ ಬಂದಿಲ್ಲ ಅನ್ನೋದರಲ್ಲಿ ಅರ್ಥವಿಲ್ಲ. ನಮ್ಮ ಅನುದಾನದ ದಾಖಲೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ಪ್ರತಿಷ್ಠೆಗಾಗಿ ಪೈಪೋಟಿ ನಡೆದಿದೆ ಎಂದು ಪ್‌ರಹ್ಲಾದ್ ಜೋಶಿ ಹೇಳಿದ್ದಾರೆ.
ಇನ್ನು ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು, ಎಲ್.ಕೆ. ಅಡ್ವಾಣಿ ಪಕ್ಷದ ಹಿರಿಯ ನಾಯಕರು. ಶುದ್ಧ ರಾಜಕಾರಣ ಮಾಡಿ ಬಿಜೆಪಿ ಕಟ್ಟಿದ್ದಾರೆ, ನಮಗೆಲ್ಲ ಆದರ್ಶರಾಗಿದ್ದಾರೆ. ಅವರಷ್ಟು ದೇಶವನ್ನು ಯಾರೂ ಸುತ್ತಿಲ್ಲ. ರಾಮಮಂದಿರ ನಿರ್ಮಾಣ ಅಂದೋಲನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಜೀವನ ಪರಿಶುದ್ಧತೆಗೆ ಉದಾಹರಣೆ ಯಾಗಿದ್ದಾರೆ. ದೇಶ ಪ್ರತಿಯೊಂದು ಆಗುಹೋಗುವುಗಳಲ್ಲಿ ಅವರ ಪಾತ್ರ ದೊಡ್ಡದಿದೆ. ಅವರಿಗೆ ಭಾರತ ರತ್ನ ಕೊಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಜೋಶಿ ಹೇಳಿದ್ದಾರೆ.
ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನಾನು ಬದುಕಿದ್ದೇನೆ ಎಂದು ಶಾಕ್ ನೀಡಿದ ನಟಿ ಪೂನಂ ಪಾಂಡೆ: ವೀಡಿಯೋ ವೈರಲ್




