Dharwad News: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಬಿಜೆಪಿ ರಾಜ್ಯ ಘಟಕ ಪ್ರತಿಭಟನೆ ಕರೆಗೆ ಬೆಂಬಲಿಸಿ ಧಾರವಾಡ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹು-ಧಾ ಮಾಹಾನಗರ ಬಿಜೆಪಿ ಪಧಾಧಿಕಾರಿಗಳ ನೇತೃತ್ವದಲ್ಲಿ, ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಮಂಡ್ಯದ ಕೆರೆಗೋಡಿನ ಗ್ರಾಮದಲ್ಲಿ ಹನುಮ ಧ್ವಜ ತೆರವು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಆಗಮನವನ್ನು ದೇಶವೇ ಸಂಭ್ರಮಿಸುತ್ತಿದೆ. ಅದರಂತೆಯೇ ಮಂಡ್ಯ ಜಿಲ್ಲೆಯಲ್ಲಿ ಕೆರಗೋಡು ಗ್ರಾಮದಲ್ಲಿ ಕೂಡ ಸಂಭ್ರಮ ಮನೆ ಮಾಡಿತ್ತು. ಆದರೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಸಂಭ್ರಮಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದೆ. ಗ್ರಾಮಸ್ಥರ ನಿರ್ಣಯದಂತೆ ಹಾರಿಸಲಾಗಿದ್ದ ಹನುಮಾನ್ ಧ್ವಜವನ್ನು ಹರಿದು ಹಾಕಿದ್ದನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
‘ನಿಮ್ಮ ನಂಜಿನ ವಿಷ ರಾಜ್ಯವನ್ನೆಲ್ಲಾ, ದೇಶವನ್ನೆಲ್ಲಾ ವ್ಯಾಪಿಸುತ್ತಿದೆ. ಇದಕ್ಕೆ ಏನಂತೀರಿ?’
ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬೋರ್ಡ್ ಹಾಕಿ – ಜೆಡಿಎಸ್ ಮಾಜಿ ಶಾಸಕ ಕೃಷ್ಣಾ ರೆಡ್ಡಿ ಆಕ್ರೋಶ