Sunday, September 8, 2024

Latest Posts

ಹಾಸನದಲ್ಲಿ ಹೆಚ್ಚಾದ ನರಹಂತಕ ಆನೆಗಳ ಉಪಟಳ..

- Advertisement -

Hassan News: ಹಾಸನ : ಹಾಸನದಲ್ಲಿ ಮತ್ತೆ ನರಹಂಂತಕ ಆನೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಇರುವ ಸ್ಥಳಕ್ಕೆ ಒಂಟಿಸಲಗ  ಕಾಣಿಸಿಕೊಂಡಿದೆ. ರಸ್ತೆಯಲ್ಲಿ ಹೋಗುತ್ತಿರುವವರು, ಆನೆಗೆ ಹೆದರಿ, ತಮ್ಮ ರೂಟ್ ಚೇಂಜ್ ಮಾಡಿಬಿಟ್ಟಿದ್ದಾರೆ.

ಬೇಲೂರು ತಾಲ್ಲೂಕಿನ, ಅರೇಹಳ್ಳಿ ಹೋಬಳಿ, ವಾಟೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನರಹಂತಕ ಕಾಡಾನೆ ಎಂಟ್ರಿಕೊಟ್ಟಿದ್ದು, ರಸ್ತೆ ಮಧ್ಯೆ‌ ನಿಂತು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಅಲ್ಲೇ ಇದ್ದವರು, ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಆನೆ ಸಾರ್ವಜನಿಕರು ಇರುವ ಕಡೆಗೆ, ಓಡಿ ಬಂದಿದೆ.

ಇನ್ನು ಆನೆ ಹೆಸರು ಕರಡಿ ಅಂತಾ. ವಸಂತ ಎಂಬ ಕೂಲಿ ಕಾರ್ಮಿಕನನ್ನು ಬಲಿ ಪಡೆದಿದ್ದು ಮಾತ್ರವಲ್ಲದೇ ನಾಲ್ಕು ಜನರ ಮೇಲೆ ದಾಳಿ ನಡೆಸಿ ಈ ಆನೆ ಗಾಯಗೊಂಡಿದೆ. ಬೇಲೂರು ತಾಲ್ಲೂಕು ಭಾಗದಲ್ಲಿ ಈ ಕಾಡಾನೆ ನಿರಂತರ ಉಪಟಳ ನೀಡುತ್ತಿದ್ದು, ಅರಣ್ಯ ಇಲಾಖೆಯವರರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸ್ಥಳೀಯರ ಆರೋಪ.

ನರಹಂತಕ ಕಾಡಾನೆಯನ್ನು ಸೆರೆ ಹಿಡಿದು, ಅದನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದರೂ ಕೂಡ, ಅರಣ್ಯ ಅಧಿಕಾರಿಗಳು ಮಾತ್ರ, ಆನೆಗೆ ಮದವೆಂದು ಕೈಚೆಲ್ಲಿ ಕುಳಿತಿದ್ದಾರೆ. ಆದರೆ ಈ ಕರಡಿ ಎನ್ನುವ ಆನೆ, ಕಾಡಿನಲ್ಲೇ ಇರದೇ, ಗ್ರಾಮಗಳಲ್ಲಿ ಓಡಾಡುತ್ತಿದೆ. ಬೇರೆ ಬೇರೆ ಗ್ರಾಮಗಳಿಗೆ ನಿರಂತರವಾಗಿ ಓಡಾಡುತ್ತಿದೆ.  ಇಟಿಎಫ್ ಸಿಬ್ಬಂದಿ ಮೊದಲೆಲ್ಲ ಇದರ ಮೇಲೆ ನಿಗಾ ಇಟ್ಟಿದ್ದರು. ಆದರೆ ಜೀವ ಭಯದಿಂದ ಅವರೂ ಕೂಡ ಕಾಡಾನೆ ಮೇಲೆ ನಿಗಾ ಇಡುವುದನ್ನು ಬಿಟ್ಟಿದ್ದಾರೆ. ಇನ್ನು ಕಾಡಾನೆ ಕಾರಣದಿಂದ, ರೈತರು ತೋಟಕ್ಕೆ ಹೋಗುವುದನ್ನು ಕೂಡ ಬಿಟ್ಟಿದ್ದಾರೆ. ಈಗಲಾದರೂ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

- Advertisement -

Latest Posts

Don't Miss