Saturday, March 15, 2025

Latest Posts

ಮೋಗಿಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಇಲ್ಲದೇ ಮಕ್ಕಳು ಬೀದಿಪಾಲು..

- Advertisement -

Kolar News: ಇಂದಿನಿಂದ ರಾಜ್ಯದ್ಯಂತ ಶಾಲೆಗಳು ಸಂತಸ , ಸಡಗರದಿಂದ ಪ್ರಾರಂಭವಾಗುತ್ತಿವೆ . ಆದರೆ ಶ್ರೀನಿವಾಸಪುರದ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಇಲ್ಲದೆ ಮಕ್ಕಳು ಬೀದಿ ಪಾಲಾಗುತ್ತಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮೋಗಿಲಹಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ ಇದಾಗಿದ್ದು, ಶಾಲಾ ಕೊಠಡಿ ಇಲ್ಲದೆ ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದು ಮುಂದು ನೋಡುತ್ತಿದ್ದಾರೆ.

ಶಾಲಾ ಕೊಠಡಿ ಬಿದ್ದು ಒಂದು ವರ್ಷ ಕಳೆದರೂ, ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಬಿದ್ದ ಕಟ್ಟಡ ಮರು ನಿರ್ಮಾಣ ಮಾಡುವುದರಲ್ಲಿ ಅಧಿಕಾರಗಳು ವಿಫಲರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೋಷಕರು ಗರಂ ಆಗಿದ್ದಾರೆ.

ಸರ್ಕಾರಿ ಮಕ್ಕಳೆಂದರೆ ಅಧಿಕಾರಿಗಳಿಗೆ ತಾತ್ಸಾರ ಎಂದು ಪೋಷಕರು ಹಾಗೂ ಗ್ರಾಮಸ್ಥರ ಆರೋಪಿಸಿದ್ದು, ಸರ್ಕಾರದಿಂದ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಗೊಂಡಿದ್ದರೂ ಅಧಿಕಾರಿಗಳ ನಿರ್ಲಕ್ಷ ತೋರಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಸ್ಥಳೀಯ ಶಾಸಕರು ಇತ್ತ ಗಮನಹರಿಸಿ, ಶೀಘ್ರವೇ ಶಾಲಾ ಕಟ್ಟಡ ನಿರ್ಮಿಸಲು ಸಹಕರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಕುಮಾರ್.ಜಿ.ಕೆ, ಕರ್ನಾಟಕ ಟಿವಿ, ಕೋಲಾರ

ನೂರು ವರ್ಷ ಪೂರೈಸಲು ಸಜ್ಜಾಗಿರುವ ಕೋಲಾರದ ಸರ್ಕಾರಿ ಶಾಲೆ..

ಹಾಸನದಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರ ದಾಳಿ

ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..

- Advertisement -

Latest Posts

Don't Miss