Telangana News: ತೆಲಂಗಾಣ: ತೆಲಂಗಾಣದಲ್ಲಿ ಸಾರ್ವಜನಿಕ ಗಣೇಶನಿಗೆ ಮುಸ್ಲಿಂ ಉಡುಪು ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಸಿರುವ ಬಣ್ಣದ ಬಟ್ಟೆಯ ಜೊತೆಗೆ, ಹಸಿರು ಬಣ್ಣದ ಟೊಪ್ಪಿಯನ್ನು ಸಹ ಹಾಕಲಾಗಿದೆ. ಅಲ್ಲದೇ, ಗಣೇಶ ನಿಂತಿರುವ ಶೈಲಿ ಕೂಡ, ಅದೇ ರೀತಿ ಇದೆ. ಹಾಗಾಗಿ ಅಲ್ಲಿನ ಹಿಂದೂಗಳು ಈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಯಂಗ್ ಲಿಯೋಸ್ ಅಸೋಸಿಯೇಶನ್ ವತಿಯಿಂದ ಕೂರಿಸಿರುವ ಸಾರ್ವಜನಿಕ ಗಣಪನ ವಿರುದ್ಧ ಹಿಂದೂಗಳು ಸಿಟ್ಟಿಗೆದ್ದಿದ್ದಾರೆ. ಇವರೆಲ್ಲ ಸೇರಿ ಬಾಜಿರಾವ್ ಮಸ್ತಾನಿಯಲ್ಲಿ ನಟ ರಣ್ವೀರ್ ಸಿಂಗ್ ಈ ರೀತಿ ಬಟ್ಟೆ ಧರಿಸಿದ್ದ ಎಂದು, ಅದರಿಂದ ಪ್ರೇರಿತರಾಗಿ, ಈ ಬಾರಿ ಗಣೇಶನಿಗೆ ಹಸಿರು ಬಣ್ಣದ ಬಚ್ಚೆಯನ್ನು ಹಾಕಿದ್ದಾರೆ. ಆದರೆ ಟೊಪ್ಪಿ ಹಾಕಿರುವ ಕಾರಣಕ್ಕೋ, ಅಥವಾ ಯಾವ ಕಾರಣಕ್ಕೋ, ಅದು ಬಾಜಿರಾವ್ ಮಸ್ತಾನಿಯ ಬಾಜಿರಾವ್ ಬಲ್ಲಾಳನ ರೀತಿ ಅದು ಕಾಣುತ್ತಿಲ್ಲ.
ಹಾಗಾಗಿ ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆದರೆ, ಗಣೇಶ ಮಂಡಳಿಯವರು, ನಾವು ಯಾರ ಭಾವನೆಗೂ ಧಕ್ಕೆ ಉಂಟು ಮಾಡುವ ಆಲೋಚನೆ ಮಾಡಿರಲಿಲ್ಲ. ಆದರೆ, ಬಟ್ಟೆ ಹೊಲೆದವರು ತಪ್ಪು ಗ್ರಹಿಕೆ ಮಾಡಿ, ಬಟ್ಟೆ ಹೊಲೆದಿದ್ದಾರೆ. ಹಾಗಾಗಿ ಈ ತಪ್ಪಾಗಿದೆ ಎಂದು ಕ್ಷಮೆಯಾಚಿಸಿ, ಶಾಂತಿಯುತವಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.