Dharwad News: ಧಾರವಾಡ: ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ, ಧಾರವಾಡ ಯುವಕರು ಚಕ್ಕಡಿ ಹೊತ್ತು ಉಳವಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ ಧಾರವಾಡ ತಾಲೂಕು ಹೆಬ್ಬಳ್ಳಿಯಿಂದ ಈರಣ್ಣ ಕರಿಕಟ್ಟಿ ಎಂಬ ಯುವಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ, ಶ್ರೀಕ್ಷೇತ್ರ ಉಳವಿಗೆ ಪಾದ ಬೆಳೆಸಿದ್ದಾನೆ. ಫೆಬ್ರವರಿ 24ರಂದು ಉಳವಿ ಶ್ರೀ ಚೆನ್ನಬಸವೇಶ್ವರ ಜಾತ್ರೆ ಇದ್ದು, ಇಂದು ಬೆಳಿಗ್ಗೆಯಿಂದಲೇ ಯುವಕ ಉಳವಿಗೆ ಪಾದಯಾತ್ರೆ ಆರಂಭಿಸಿದ್ದಾನೆ. ಇನ್ನು ಮೂರು ದಿನಗಳಲ್ಲಿ ಉಳವಿ ತಲುಪಲಿದ್ದಾನೆ.
ಪ್ರತಿ ವರ್ಷ ಧಾರವಾಡದಿಂದ ಎತ್ತಿನ ಚಕ್ಕಡಿ ಗಾಡಿ ಸಮೇತ ಭಕ್ತರು ಉಳವಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಬರಗಾಲವಿರುವ ಕಾರಣ, ಎತ್ತುಗಳ ಸಮೇತ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ವಿನೂತನ ಪಾದಯಾತ್ರೆ ನಡೆಸಿ, ಚಕ್ಕಡಿ ಗಾಡಿಯನ್ನಷ್ಟೇ ಹೊತ್ತು ಸಾಗಲು ಈರಣ್ಣ ನಿರ್ಧರಿಸಿದ್ದಾನೆ. ಈ ಚಕ್ಕಡಿ 80 ಕೆಜಿ ತೂಕವುಳ್ಳದ್ದಾಗಿದ್ದು, ಯುವಕನಿಗೆ ಗ್ರಾಮಸ್ಥರು ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.
ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್




