Hubballi News: ಹುಬ್ಬಳ್ಳಿ: ಹಮಾಸ್ ಮೇಲಿನ ಯುದ್ಧದಿಂದಾಗಿ ನಮಗೆಲ್ಲ ಆರಂಭದಲ್ಲಿ ಬಹಳಷ್ಟು ಭಯ ಆಗಿತ್ತು. ಯುದ್ಧ ಘೋಷಣೆಯಾದ ನಂತರ ಎಲ್ಲ ಕಡೆ ಸೈರನ್ ಸೌಂಡ್ ವಿಪರೀತವಾಗಿತ್ತು. ಮುಂದೆ ಏನಾಗುತ್ತದೆಯೋ ಎಂಬ ಹೆದರಿಕೆಯಲ್ಲಿ ಎರಡು ದಿನ ಕಳೆದೆವು.
ಇದು ಇಸ್ರೇಲ್‌ನ ಟೆಲ್ ಅವೀವ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ವೈದ್ಯ ದಂಪತಿ ಡಾ. ಅಖಿಲೇಶ ಕಾರಗದ್ದೆ ಹಾಗೂ ಕೃತಿ ದಂಪತಿಯ ಮಾತು. ದಂಪತಿಗಳಿಬ್ಬರು ಭಾನುವಾರ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಯುದ್ಧಭೂಮಿ ಇಸ್ರೇಲ್ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಎರಡು ದಿನ ಕಷ್ಟ ಎನಿಸಿತು. ಆದರೆ, ಇಸ್ರೇಲ್ ಸರ್ಕಾರ ಅಲ್ಲಿನ ಎಲ್ಲ ಜನರಿಗೆ ಅಭಯ ನೀಡಿತ್ತು. ಯುದ್ಧ ಭೂಮಿಯಿಂದ ನಾವು 90 ಕಿ.ಮೀ. ದೂರದಲ್ಲಿದ್ದೇವು. ಹೆಚ್ಚಿನ ತೊಂದರೆ ಆಗಲಿಲ್ಲ. ಭಾರತ ಸರ್ಕಾರ ನಮ್ಮನ್ನು ತಾಯ್ನಾಡಿಗೆ ಬರಲು ಎಲ್ಲ ನೆರವು ನೀಡಿತು. ಇದೀಗ ನಮ್ಮ ಊರಿಗೆ ಬಂದಿದ್ದೇವೆ. ಬಹಳಷ್ಟು ಖುಷಿಯಾಗುತ್ತಿದೆ ಎಂದರು.
ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದ ಪರವಾಗಿ ತಹಸೀಲ್ದಾರ್ ಕಲಗೌಡ ಪಾಟೀಲ, ಕಂದಾಯ ನಿರೀಕ್ಷಕ ರವಿ ಬೆನ್ನೂರ ಹಾಗೂ ಇತರ ಅಧಿಕಾರಿಗಳು ವೈದ್ಯ ದಂಪತಿಯನ್ನು ಸ್ವಾಗತಿಸಿದರು.
ನಾಲ್ಕು ವಿಮಾನಗಳ ಮೂಲಕ ಇಸ್ರೇಲ್ನಲ್ಲಿರುವ ಭಾರತೀಯ ಮೂಲದವರನ್ನು ಕರೆ ತರುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಮೂರು ಫ್ಲೈಟ್ ಆಗಮಿಸಿವೆ. ಇನ್ನೊಂದು ಬರಲಿದೆ ಎಂದು ಇಸ್ರೇಲ್ನಿಂದ ಆಗಮಿಸಿದ ಡಾ. ಅಖಿಲೇಶ್ ತಿಳಿಸಿದರು.
Call Record : ಅನುಮತಿ ಇಲ್ಲದೆ ಕಾಲ್ ರೆಕಾರ್ಡ್ ಮಾಡುವುದು ಕಾನೂನು ಉಲ್ಲಂಘನೆ